SIRIdani, A passion broadcast channel, set up by equal minded team In Bangalore. Channel addresses education, culture, social issues and youth Designs in depth subject discussion with the experts of relevant area. Light entertainment, talk shows also focusing area. Subjects we choose non controversy and factual issues and which is out of regular platforms. Files Uploaded once in 15 days. and will come online with special episodes too.

ಮಳೆಯಲಿ ಜೊತೆಯಲಿ - ಇಬ್ಬನಿಯ ನೆನಪುಗಳು - ವಾಣಿ ರಾಜ್ Feedback: siridanipodcast@gmail.com For shows: 9964677010

ಮಾತುಕತೆ ರಾಜೇಶ್ವರಿ ಶೆಟ್ಟಿ- ಜ್ಯೋತಿ ಸಾಲಿಗ್ರಾಮ ರಾಜೇಶ್ವರಿ ಶೆಟ್ಟಿ, ಆಪ್ತ ಸಮಾಲೋಚಕರು, ವಿಭಾಗ ಮುಖ್ಯಸ್ಥರು, ಮನಃಶಾಸ್ತ್ರ ವಿಭಾಗ ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ ಮಾತನಾಡಿಸಿದವರು: ಜ್ಯೋತಿ ಸಾಲಿಗ್ರಾಮ, ಮುಖ್ಯಸ್ಥರು ರೇಡಿಯೋ ಕುಂದಾಪುರ ಧ್ವನಿ ಮುದ್ರಣ: ರೇಡಿಯೋ ಕುಂದಾಪುರ, ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ Feedback: siridanipodcast@gmail.com For shows: 9964677010

ಮಾತುಕತೆ ಪ್ರೊ.ಹಡಗಲಿ ಅಶೋಕ, ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರೊ.ಕೆ.ವಿ. ವೆಂಕಟೇಶ್, ಐಐಟಿ ಮುಂಬೈ, ಪ್ರೊ.ಹಡಗಲಿ ಅಶೋಕ ಮೊಬೈಲ್: +91 99024 33100 Feedback: siridanipodcast@gmail.com For shows: 9964677010

ಸಿರಿದನಿಯ ಈ ಸಂಚಿಕೆಯಲ್ಲಿ ಡಯಾಬಿಟೀಸ್ ಕಾಯಿಲೆ ಅಲ್ಲ? ಮತ್ತೇನು? ಟೈಪ್ 2 ಡಯಾಬಿಟೀಸ್‌ಗೆ ನೈಸರ್ಗಿಕ ಪರಿಹಾರ ಮಾತುಕತೆ ಪ್ರೊ.ಹಡಗಲಿ ಅಶೋಕ, ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರೊ.ಕೆ.ವಿ. ವೆಂಕಟೇಶ್, ಐಐಟಿ ಮುಂಬೈ, ಒತ್ತಡ ಆಯ್ತಾ? ಕೂಲ್ ಆಗಿರಿ ಜ್ಯೋತಿ ಸಾಲಿಗ್ರಾಮ - ರಾಜೇಶ್ವರಿ ಶೆಟ್ಟಿ ಮಳೆಯಲಿ ಜೊತೆಯಲಿ - ಇಬ್ಬನಿಯ ನೆನಪುಗಳು - ವಾಣಿ ರಾಜ್ ಜುಲೈ 22, 2024ರಂದು ಪ್ರಸಾರ ಕೇಳಿ ಸಿರಿದನಿ ಮಾತು ಬಲ್ಲವರಿಗೆ ಮಾತು ಉಳ್ಳವರಿಗೆ

ರಿಯಲ್ ಎಸ್ಟೇಟ್ with ಡಾ.ಬಿ.ಆರ್. ಹರೀಶ್ ನಾಯ್ಕ್ ಡಾ.ಬಿ.ಆರ್. ಹರೀಶ್ ನಾಯ್ಕ್, ವಿಶೇಷ ಭೂಸ್ವಾಧೀನಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಡಾ.ಕೆ. ಶಿವರಾಮ ಕಾರಂತ ಬಡಾವಣೆ. ಜಮೀನು, ನಿವೇಶನ, ಫ್ಲ್ಯಾಟ್ ಖರೀದಿ ಸಂಬಂಧಿಸಿ ಇರಬೇಕಾದ ದಾಖಲೆಗಳೇನು ಮತ್ತು ಮುನ್ನೆಚ್ಚರಿಕೆಗಳೇನು ಎಂಬುದನ್ನು ಇಲ್ಲಿ ಡಾ.ಹರೀಶ್ ನಾಯ್ಕ್ ಅವರು ಚರ್ಚಿಸಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com ನೆರವು: ಜ್ಯೋತಿ ಸಾಲಿಗ್ರಾಮ

ಶಾಲಿನಿ ಬಾಲನ್, ಮನೋತರಬೇತಿದಾರರು, ಪುನರ್‌ಲೈಫ್ ಬೆಂಗಳೂರು ಶಾಲಿನಿ ಬಾಲನ್. ಜೀವನ ಕಲೆ, ಮನೋವಿಜ್ಞಾನದ ತರಬೇತಿದಾರರು, ಎನ್‌ಎಲ್‌ಪಿ ಮಾಸ್ಟರ್ ಪ್ರಾಕ್ಟೀಷನರ್, ಆಪ್ತ ಸಮಾಲೋಚಕಿ, ವಕೀಲರು. ಹೀಗೆ ಒಬ್ಬರು ಬಹುಮುಖಿ. ಈ ಕಾರ್ಯಕ್ರಮದಲ್ಲಿ ನನಗೆ ನಾನೇ ಸ್ಫೂರ್ತಿ ಮಾಲಿಕೆಯಲ್ಲಿ ಭಾವಪ್ರಪಂಚದ ಬಗ್ಗೆ ಮಾತನಾಡಿದ್ದಾರೆ. ಮಾಹಿತಿಗೆ ಭೇಟಿ ನೀಡಿ: https://punarlife.com, ಮೊಬೈಲ್ ಸಂಖ್ಯೆ: +91 72590 32980 ಪ್ರತಿಕ್ರಿಯಿಸಿ: siridanipodcast@gmail.com

ರಿಯಲ್ ಎಸ್ಟೇಟ್ with ಡಾ.ಬಿ.ಆರ್. ಹರೀಶ್ ನಾಯ್ಕ್ – ಮುನ್ನೋಟ

ಪ್ರತಿಕ್ರಿಯಿಸಿ: siridanipodcast@gmail.com

ನಿಜವಾಗಿಯೂ ಕೃಷ್ಣನೆಂದರೆ ಯಾರು? ಅವನು ಎಲ್ಲವೂ... ಹೀಗೆ ತಾವು ಕಂಡ ಕೃಷ್ಣನಬಗ್ಗೆ ಹೇಳುತ್ತಾ ಒಂದು ಲಹರಿಯಲ್ಲಿ ಮಾತನಾಡಿದ್ದಾರೆ ದೀಪಾ ಪಾವಂಜೆ. ದೀಪಾ ಪಾವಂಜೆ ಉಪನ್ಯಾಸಕಿ. ಮಂಗಳೂರು ಆಕಾಶವಾಣಿಯಲ್ಲಿ ಹವ್ಯಾಸಿ ನಿರೂಪಕಿ. ಗಝಲ್ ಕವಯಿತ್ರಿ... ದೀಪಾ ಲಹರಿಗೆ ಗಾಯನದ ಸಾಥ್ ಕೊಟ್ಟವರು ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂಬ ಪ್ರಾರ್ಥನೆಯೊಂದಿಗೆ “ಮಂಗಳ ಮೂರುತಿ” ಪದಮಾಲೆಯ ಒಂದು ಭಕ್ತಿ ಕುಸುಮ 'ಪಾರ್ಥಸಾರಥಿ'. ತಾರೇಂದ್ರ ಪಿ. ಶೆಟ್ಟಿಗಾರ್ ಅವರ ರಚನೆ ಮತ್ತು ನಿರ್ಮಾಣದ ‘ಮಂಗಳ ಮೂರುತಿ' ಆಲ್ಬಂನಿಂದ ಆಯ್ದ ಮುರಳಿಯ ನುಡಿಸೋ ಮಾಧವ ವೇಣುಗಾನದ ಮಧುರ ನಾದವ ಹಾಡು Song Details: Singer: Siddhartha Belmannu Production: Tharendra P Shettigar Lyrics: Tharendra P Shettigar Music Direction: Giridhar Divan Orchestration & Programming: Nakul Abhyankar Recording: Grey18 Studios, Bangalore Video Editing: V Zone Creations ತಾರೇಂದ್ರ ಪಿ. ಶೆಟ್ಟಿಗಾರ್ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಕನ್ನಡ– ತುಳು ಭಕ್ತಿಗೀತೆಗಳನ್ನು ಆಲಿಸಿ. ಅವರ ಪ್ರಯತ್ನವನ್ನು ಬೆಂಬಲಿಸಿ. ಚಾನೆಲ್ ಲಿಂಕ್: https://www.youtube.com/watch?v=cHwpHVYKqLk ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಸಿರಿದನಿಯಲ್ಲಿ ನೀವೂ ಭಾಗವಹಿಸಲು ಸಂಪರ್ಕಿಸಿ: siridanipodcast@gmail.com

ಡಾ. ಸುಮಾ ಎಂ. ಅವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಇಸ್ಕಾನ್ ಸಂಸ್ಥೆಯ ಒಡನಾಡಿಯಾಗಿ, ಸ್ವಯಂ ಸೇವಕರಾಗಿ ದೀಕ್ಷೆ ಪಡೆದು ಸುರಭಿ ದೇವಿ ದಾಸಿ ಆಗಿ ಬದುಕನ್ನು ಕೃಷ್ಣ ಚಿಂತನೆಗಾಗಿ ಮೀಸಲಿಟ್ಟಿದ್ದಾರೆ. ಸಂಗೀತದಲ್ಲಿ ಅದಮ್ಯ ಆಸಕ್ತಿ ಉಳ್ಳವರು ಅವರು. ಅವರೇ ಕಟ್ಟಿದ ಬೃಜಾ ಬೀಟ್ಸ್‌ನ ಮೂಲಕ ಕೃಷ್ಣನ ಗೀತೆಗಳನ್ನು ಭಗವದ್ಗೀತೆಯ ಶ್ಲೋಕಗಳನ್ನು ಹಾಡಿದ್ದಾರೆ. ದಾಸವಾಣಿ, ಮಕ್ಕಳ ಹಾಡುಗಳಿಗೆ ಆಧುನಿಕ ಮಾದರಿಯ ಸಂಗೀತ ಸ್ಪರ್ಶ ನೀಡಿದ್ದಾರೆ. ಹೀಗೆ ಮಾತು, ಗೀತೆಯ ಮೂಲಕ ಭಗವಂತನ ಜೊತೆ ಸುಮಾ ಅವರ ಅನುಸಂಧಾನ ನಡೆದಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾವಸರದಲ್ಲಿ ಬೃಜಾಬೀಟ್ಸ್‌ನ ಝಲಕ್‌ನ್ನು ಸಿರಿದನಿ ಕೇಳುಗರಿಗಾಗಿ ನೀಡಿದ್ದಾರೆ. ಬೃಜಾಬೀಟ್ಸ್ ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ, ಗೀತೆಗಳನ್ನು ಕೇಳಿ ಚಂದಾದಾರರಾಗಿ. ಲಿಂಕ್ ಕ್ಲಿಕ್ ಮಾಡಿ: https://www.youtube.com/c/BrajaBeats ಪ್ರತಿಕ್ರಿಯಿಸಿ: siridanipodcast@gmail.com

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ಚಿಂತನ, ಭಕ್ತಿ ಗಾಯನ– ಡಾ. ಸುಮಾ ಎಂ. ಪ್ರತಿಕ್ರಿಯಿಸಿ: siridanipodcast@gmail.com #ಸಿರಿದನಿ #siridanipodcast #isckon #Drsuma #brajabeats #krishna #harekrishna #srikrishna #srikrishnajanmastami #krishnastami #krishnabhajans #bhagavadgeetha #swamiprabhupada

75ನೇ ಸ್ವಾತಂತ್ರ್ಯ ಉತ್ಸವದ ಸಂಭ್ರಮದಲ್ಲಿರುವ ನಮ್ಮ ಜವಾಬ್ದಾರಿಗಳೇನು? ಗಾನ ಸಹಿತ ಮಾಧುರ್ಯದ ಮಾತನಾಡಿ ನಮಗೆ ನೆನಪಿಸಿದ್ದಾರೆ ಅರ್ಚನಾ ಉಡುಪ ಪ್ರತಿಕ್ರಿಯಿಸಿ: siridanipodcast@gmail.com #archanaudupa #singerarchana #archana #independenceday #sarejahanseachhca

ಶಾಲಿನಿ ಬಾಲನ್. ಜೀವನ ಕಲೆ, ಮನೋವಿಜ್ಞಾನದ ತರಬೇತಿದಾರರು, ಎನ್‌ಎಲ್‌ಪಿ ಮಾಸ್ಟರ್ ಪ್ರಾಕ್ಟೀಷನರ್, ಆಪ್ತ ಸಮಾಲೋಚಕಿ, ವಕೀಲರು. ಹೀಗೆ ಒಬ್ಬರು ಬಹುಮುಖಿ. ಈ ಕಾರ್ಯಕ್ರಮದಲ್ಲಿ ನನಗೆ ನಾನೇ ಸ್ಫೂರ್ತಿ ಆಗುವುದು ಹೇಗೆ ಎಂದು ಅವರು ಹೇಳಿದ್ದಾರೆ. ಮಾಹಿತಿಗೆ ಭೇಟಿ ನೀಡಿ: https://punarlife.com ಪ್ರತಿಕ್ರಿಯಿಸಿ: siridanipodcast@gmail.com

ಸ್ವತಂತ್ರ ಭಾರತದ ಆಡಳಿತ ಕೈಪಿಡಿಯಲ್ಲಿ ಆಗಬೇಕಾಗಿರುವ ಒಂದಿಷ್ಟು ಬದಲಾವಣೆಗಳು ಮತ್ತು ಅನುಷ್ಠಾನಗಳ ಬಗ್ಗೆ ಎಂ.ಸಿ. ಹರಿಪ್ರಕಾಶ್ ಮಾತನಾಡಿದ್ದಾರೆ. ಹರಿಪ್ರಕಾಶ್ ಬೆಂಗಳೂರಿನವರು. ಮೂಲತಃ ಎಂಜಿನಿಯರ್. ಅಧ್ಯಯನ, ಅಧ್ಯಾಪನ ಅವರ ಬದುಕಿನಲ್ಲಿ ನಿರಂತರವಾಗಿದೆ. ಉದ್ಯಮ, ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಲಹೆಗಾರರಾಗಿಯೂ ಸಕ್ರಿಯರಾಗಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com

ನನ್ನ ದೇಶ ಹೇಗಿರಬೇಕು. ಅದರ ನೀತಿ ನಿರೂಪಣೆಯ ದೂರದೃಷ್ಟಿ ಹೇಗಿರಬೇಕು ಎಂಬುದನ್ನು ಪುಟ್ಟದಾಗಿ ಚರ್ಚಿಸಿದ್ದಾರೆ ವೇಣು ಶರ್ಮಾ. ಶರ್ಮಾ ಅವರು ಮಂಗಳೂರಿನವರು. ಮೈ ಅಂತರಾತ್ಮ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಉದ್ಯಮ ಸಲಹೆ, ಮಾರ್ಗದರ್ಶನ ನೀಡುತ್ತಾರೆ. ಜೊತೆಗೆ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com

ಸ್ವಾತಂತ್ರ್ಯದ ಅಮೃತ ಮಹೋತ್ಸವ – ಶುಭಾಶಯ, ಮುನ್ನೋಟ

ಮಳೆ ನಡುವೆ ಒಂದಿಷ್ಟು ಕಚಗುಳಿಯಿಡುವ ಮಾತು. ಕೊಡೆ, ಕೊಡೆಯಡಿ, ಕೊಡೆನಡುವಿನ ಒಂದಿಷ್ಟು ಲಹರಿ ಪ್ರತಿಕ್ರಿಯಿಸಿ: siridanipodcast@gmail.com #ಕೊಡೆ #ಛತ್ರಿ #umbrella #male #ಮಳೆ #ladiesumbrella #namingforumbrella #oldumbrela #umbrellastory #Storyofumbrella

ಐವನ್ ನಿಗ್ಲಿಯವರು ಮಾಜಿ ಶಾಸಕ (ಆಂಗ್ಲೋ ಇಂಡಿಯನ್ ಸಮುದಾಯದಿಂದ ನಾಮನಿರ್ದೇಶನಗೊಂಡವರು) ಅವರು ಸದ್ಯ ಮಾಜಿ ಶಾಸಕರ ಸಂಘದ ಕಾರ್ಯದರ್ಶಿ. ಆಂಗ್ಲೋ ಇಂಡಿಯನ್ ಸಮುದಾಯದ ಸಂಘಟನೆಯಲ್ಲಿ ಸಕ್ರಿಯರಾಗಿರುವವರು. ರಾಜ್ಯದಲ್ಲಿ ದಾದಿಯರಿಗಾಗಿಯೇ ಮೊದಲ ಬಾರಿ ಫ್ಲಾರೆನ್ಸ್ ನೈಟಿಂಗೇಲ್ ಹೆಸರಿನ ಪ್ರಶಸ್ತಿ ಸ್ಥಾಪಿಸಿ ಈಗಲೂ ಆ ಸಮುದಾಯಕ್ಕೆ ಗೌರವ ಸಲ್ಲಿಸುತ್ತಿರುವವರು. ಅವರು ನಿರ್ಮಿಸಿದ ಸೆಪ್ಟೆಂಬರ್ 13 ಚಿತ್ರದಲ್ಲಿ ಕೋವಿಡ್ ಸಂದರ್ಭದಲ್ಲಿ ನರ್ಸ್‌ಗಳ ತ್ಯಾಗ, ಕಾಳಜಿ, ಪರಿಶ್ರಮವನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಸುಮಾರು 30 ವರ್ಷಗಳ ಹಿಂದೆ ಮನೆ ಮಾತಾಗಿದ್ದ ಬಟ್ಟೆಗೆ ಹಾಕುವ ರೂಬಿ ಲಿಕ್ವಿಡ್ ಬ್ಲೂ ಸೃಷ್ಟಿಯಾದ ಬಗೆಯನ್ನು ಐವಾನ್ ಅವರು ಹೇಳಿದ್ದಾರೆ. ತಾವೇ ಸರಳ ವಿಧಾನದಿಂದ ರೂಪಿಸಿ ದೇಶವ್ಯಾಪಿ ಮಾರಾಟ ಮಾಡಿ ಮುಂದೆ ಅದನ್ನು ಉಜಾಲ (ಜ್ಯೋತಿ ಲ್ಯಾಬೊರೇರೀಸ್) ಕಂಪನಿಗೆ ಮಾರಿದ ಕಥೆ ಸಿರಿದನಿಯಲ್ಲಿದೆ ಪ್ರತಿಕ್ರಿಯಿಸಿ: siridanipodcast@gmail.com #Ivannigli #Iwan nigli #Nigli #AngloIndian #Mla #exmlaIvan Nigli #Flarencenightingale, #Nurses #Nursesaward #september13 #Rubifilms #Rubyfilms #Nigli #Ruby #rubyliquidblue #liquid Blue #ujala #Rubyblue

ಐವನ್ ನಿಗ್ಲಿಯವರು ಮಾಜಿ ಶಾಸಕ (ಆಂಗ್ಲೋ ಇಂಡಿಯನ್ ಸಮುದಾಯದಿಂದ ನಾಮನಿರ್ದೇಶನಗೊಂಡವರು) ಅವರು ಸದ್ಯ ಮಾಜಿ ಶಾಸಕರ ಸಂಘದ ಕಾರ್ಯದರ್ಶಿ. ಆಂಗ್ಲೋ ಇಂಡಿಯನ್ ಸಮುದಾಯದ ಸಂಘಟನೆಯಲ್ಲಿ ಸಕ್ರಿಯರಾಗಿರುವವರು. ರಾಜ್ಯದಲ್ಲಿ ದಾದಿಯರಿಗಾಗಿಯೇ ಮೊದಲ ಬಾರಿ ಫ್ಲಾರೆನ್ಸ್ ನೈಟಿಂಗೇಲ್ ಹೆಸರಿನ ಪ್ರಶಸ್ತಿ ಸ್ಥಾಪಿಸಿ ಈಗಲೂ ಆ ಸಮುದಾಯಕ್ಕೆ ಗೌರವ ಸಲ್ಲಿಸುತ್ತಿರುವವರು. ಅವರು ನಿರ್ಮಿಸಿದ ಸೆಪ್ಟೆಂಬರ್ 13 ಚಿತ್ರದಲ್ಲಿ ಕೋವಿಡ್ ಸಂದರ್ಭದಲ್ಲಿ ನರ್ಸ್‌ಗಳ ತ್ಯಾಗ, ಕಾಳಜಿ, ಪರಿಶ್ರಮವನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ವಿಧಾನಸಭೆಗೆ ಆಂಗ್ಲೋ ಇಂಡಿಯನ್ ವ್ಯಕ್ತಿಯ ನಾಮನಿರ್ದೇಶನಗೊಂಡದ್ದು ಹೇಗೆ? ನರ್ಸ್‌ಗಳ ಬಗ್ಗೆ ಅಷ್ಟೊಂದು ಕಾಳಜಿ ಏಕೆ? ಹೀಗೆ ಹತ್ತು ಹಲವು ಕುತೂಹಲಗಳಿಗೆ ಐವಾನ್ ಉತ್ತರಿಸಿದ್ದಾರೆ ಪ್ರತಿಕ್ರಿಯಿಸಿ: siridanipodcast@gmail.com #Ivannigli #Iwan nigli #Nigli #AngloIndian #Mla #exmlaIvan Nigli #Flarencenightingale, #Nurses #Nursesaward #september13 #Rubifilms #Rubyfilms #Nigli

ನಾಡಿನ ಗಡಿ ಭಾಗ ಕಾಸರಗೋಡು ಪ್ರದೇಶದ ಶಾಲೆಗಳಲ್ಲಿ ಕನ್ನಡದ ಸ್ಥಿತಿಗತಿ ಹೇಗಿದೆ ಎಂದು ವಿವರಿಸಿದ್ದಾರೆ ವಾಣಿ ರಾಜ್. ಪ್ರತಿಕ್ರಿಯಿಸಿ: siridanipodcast@gmail.com

ಕವಿ ಶ್ರೀನಿವಾಸ ನಾಯಕ್ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದ ಕಾನಂಗಿಯವರು. ಸದ್ಯ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಉದ್ಯೋಗಿ. ಕವನ, ಕಥೆ, ಲೇಖನ ಬರಹದಲ್ಲಿ ಆಸಕ್ತಿ. ಬೆಂಗಳೂರು ಹಾಗೂ ಮಂಗಳೂರು ಆಕಾಶವಾಣಿಯಲ್ಲಿ ಅವರ ಕವಿತೆಗಳು ಪ್ರಸಾರವಾಗಿವೆ. ಹಲವು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನನ್ನದಲ್ಲದ ಕವಿತೆ-ಎಂಬುದು ಇವರ ಮೊದಲ ಕವನ ಸಂಕಲನ. ಈ ಬಾರಿ ಸಿರಿದನಿಯಲ್ಲಿ ಕವಿ ಮನಸ್ಸು ಅರಿಯುವ ಪುಟ್ಟ ಪ್ರಯತ್ನ. ಗೀತೆಗಳು: 1 ನೀನು ಮಾತು– ನಾನು ಮೌನ... ಸಂಗೀತ, ಗಾಯನ: ಗೋವಿಂದ ಕರ್ನೂಲ್ 2 ಇಳಿಸಂಜೆ ಸಮಯದಲಿ, ಕಳೆದು ಹೋದವ ನೀನು, ಮರಳಿ ಮನಸಿಗೆ ಬರುವ ದಾರಿ ಮರೆತು... ಸಂಗೀತ ಸಂಯೋಜನೆ: ಶ್ರೀಮತಿ ಪಿ. ರಮಾ, ಗಾಯನ: ಶ್ರೀಮತಿ ಸೌಭಾಗ್ಯ ಹೆಗಡೆ ಶ್ರೀನಿವಾಸ ನಾಯಕ್ ಅವರ ಯುಟ್ಯೂಬ್ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ ಹಾಡುಗಳನ್ನು ಕೇಳಿ ಆನಂದಿಸಿ. ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ https://www.youtube.com/results?search_query=srinivasa+nayak+karkala ಪ್ರತಿಕ್ರಿಯಿಸಿ: siridanipodcast@gmail.com

ದೇಹದಾರ್ಢ್ಯ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಾಧನೆ ಮಾಡಿರುವ ಎ.ವಿ. ರವಿ (ಜಿಮ್ ರವಿ) ಅವರು ಪುರುಷೋತ್ತಮ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ರವೀಸ್ ಜಿಮ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರ ಏನು ಹೇಳಲು ಹೊರಟಿದೆ ಅನ್ನುವುದು ಮತ್ತು ಜಿಮ್ ರವಿ ಅವರ ಬದುಕು ಹೇಗಿತ್ತು ಎಂಬುದನ್ನು ಅವರ ಮಾತಿನಲ್ಲೇ ಸಿರಿದನಿಯಲ್ಲಿ ಕೇಳಿ. ರವಿ ಅವರ ಯುಟ್ಯೂಬ್ ಚಾನೆಲ್ ಲಿಂಕ್: https://youtu.be/NOyyoFhDlLY ಪ್ರತಿಕ್ರಿಯಿಸಿ: siridanipodcast@gmail.com

ಮೂರು ಹೊಸ ಕೃತಿಗಳನ್ನು ಪರಿಚಯಿಸಿದ್ದೇವೆ. ಕೃತಿಗಳನ್ನು ಪರಿಚಯಿಸುವ ಹೊಸ ಪ್ರಯತ್ನ ನಮ್ಮದು ಮಿತಿ: ಕಾದಂಬರಿ– ಧೀರಜ್ ಪೊಯ್ಯೆಕಂಡ ಅರಳದ ಅಲರು– ವಿಜಯಲಕ್ಷ್ಮೀ ಕೊಟಗಿ ನೋವಿಂಚಿನ ನಲಿವು – ಸಿ.ರಂಗರಾಜು, ವಾಣಿರಾಜ್ ನೀವೂ ಪುಸ್ತಕ ಪರಿಚಯಿಸಬೇಕಾ? ಸಂಪರ್ಕಿಸಿ: siridanipodcast@gmail.com

ಯಶಸ್ಸಿಗೆ ಶ್ರೀಕೃಷ್ಣ ಹೇಳಿದ ವಿಷಯಗಳೇನು? ಮಹಾಬಲ ಸೀತಾಳಭಾವಿ ಅವರ ಕೃತಿ ‘ಮ್ಯಾನೇಜ್‌ಮೆಂಟ್ ಭಗವದ್ಗೀತೆ'ಯಿಂದ ಆಯ್ದ ಪ್ರಸಂಗಗಳು. ಖುಷಿಯಾಗಿದ್ದು ಬದುಕಿನ ನಿರ್ವಹಣೆ ಹೇಗೆ ಅನ್ನುವುದರ ಟಿಪ್ಸ್ ಇಲ್ಲಿವೆ. ಪ್ರತಿಕ್ರಿಯಿಸಿ: siridanipodcast@gmail.com

ಕವಿ ಶ್ರೀನಿವಾಸ ನಾಯಕ್ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದ ಕಾನಂಗಿಯವರು. ಸದ್ಯ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಉದ್ಯೋಗಿ. ಕವನ, ಕಥೆ, ಲೇಖನ ಬರಹದಲ್ಲಿ ಆಸಕ್ತಿ. ಬೆಂಗಳೂರು ಹಾಗೂ ಮಂಗಳೂರು ಆಕಾಶವಾಣಿಯಲ್ಲಿ ಅವರ ಕವಿತೆಗಳು ಪ್ರಸಾರವಾಗಿವೆ. ಹಲವು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನನ್ನದಲ್ಲದ ಕವಿತೆ-ಎಂಬುದು ಇವರ ಮೊದಲ ಕವನ ಸಂಕಲನ. ಈ ಬಾರಿ ಸಿರಿದನಿಯಲ್ಲಿ ಕವಿ ಮನಸ್ಸು ಅರಿಯುವ ಪುಟ್ಟ ಪ್ರಯತ್ನ. ಶ್ರೀನಿವಾಸ ನಾಯಕ್ ಅವರ ಯುಟ್ಯೂಬ್ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ ಹಾಡುಗಳನ್ನು ಕೇಳಿ ಆನಂದಿಸಿ. ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ https://www.youtube.com/results?search_query=srinivasa+nayak+karkala ಪ್ರತಿಕ್ರಿಯಿಸಿ: siridanipodcast@gmail.com ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ

ಬೇಕೋ ಬೇಡವೋ ಒಂದಿಷ್ಟು ಕೊಳ್ಳುವ, ಸಂಗ್ರಹಿಸುವ ಮನಸ್ಥಿತಿಯಿಂದ ಹೊರ ಬನ್ನಿ. ಹೆಚ್ಚೆನಿಸಿದ್ದನ್ನು ಹೊರ ಹಾಕಿ, ಬೇಡವೆನಿಸಿದ್ದನ್ನು ಸ್ವಚ್ಛಗೊಳಿಸಿ. ಹಾಗೆಯೇ ಮನಸ್ಸನ್ನೂ ತಿಳಿಗೊಳಿಸಿ ಎಂದು ಲಘುವಾಗಿ ಹೇಳಿದ್ದಾರೆ ಸ್ಮಿತಾ ಶೆಣೈ. ಯುಗಾದಿಯ ನೆಪದಲ್ಲಿ ಒಂದು ಲಹರಿ ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ ಪ್ರತಿಕ್ರಿಯಿಸಿ: siridanipodcast@gmail.com #smithashenoymangalore #ಸ್ಮಿತಾಶೆಣೈ #ಯುಗಾದಿ

ಅನಿತಾ ರಂಗಸ್ವಾಮಿ ಬೆಂಗಳೂರಿನವರು. ಸುಮಾರು 20 ವರ್ಷಗಳಿಂದ ಕಂಠದಾನ ಕ್ಷೇತ್ರದಲ್ಲಿದ್ದಾರೆ. ಸಂಗೀತ ಸಂಯೋಜನೆ, ಸಾಹಿತ್ಯ ಬರಹ, ಮಾತು, ರೇಡಿಯೋ ಜಾಹೀರಾತು ಕ್ಷೇತ್ರದಲ್ಲಿ ಸಕ್ರಿಯರು. ಕಂಠದಾನ ಕ್ಷೇತ್ರ ಹೇಗಿದೆ? ಆ ಬದುಕು ಎಂಥದ್ದು ಎಂದು ತಿಳಿಯುವ ಪುಟ್ಟ ಪ್ರಯತ್ನ ಇಲ್ಲಿಯದು. ಅನಿತಾ ರಂಗಸ್ವಾಮಿ #anitharangaswamy ಹಾಡುಗಳನ್ನು ಕೇಳಲು ಯುಟ್ಯೂಬ್ ಲಿಂಕ್ https://www.youtube.com/watch?v=RYJ4-HuRiHo ಅನಿತಾ ಅವರ ಸಾಹಿತ್ಯದ #puneethrajkumar ಪುನೀತ್ ರಾಜ್‌ಕುಮಾರ್ ಅವರ ಗೌರವಾರ್ಥ ಹಾಡು ಕೇಳಲು ಲಿಂಕ್ https://www.youtube.com/watch?v=YD_PvQnfzrI ಪ್ರತಿಕ್ರಿಯಿಸಿ: siridanipodcast@gmail.com

ಬೇಕೋ ಬೇಡವೋ ಒಂದಿಷ್ಟು ಕೊಳ್ಳುವ, ಸಂಗ್ರಹಿಸುವ ಮನಸ್ಥಿತಿಯಿಂದ ಹೊರ ಬನ್ನಿ. ಹೆಚ್ಚೆನಿಸಿದ್ದನ್ನು ಹೊರ ಹಾಕಿ, ಬೇಡವೆನಿಸಿದ್ದನ್ನು ಸ್ವಚ್ಛಗೊಳಿಸಿ. ಹಾಗೆಯೇ ಮನಸ್ಸನ್ನೂ ತಿಳಿಗೊಳಿಸಿ ಎಂದು ಲಘುವಾಗಿ ಹೇಳಿದ್ದಾರೆ ಸ್ಮಿತಾ ಶೆಣೈ. ಯುಗಾದಿಯ ನೆಪದಲ್ಲಿ ಒಂದು ಲಹರಿ ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ ಪ್ರತಿಕ್ರಿಯಿಸಿ: siridanipodcast@gmail.com

ಸಮಾಜ ಸೇವೆಯನ್ನು ಹೀಗೂ ಮಾಡಬಹುದು ಎಂದು ಒಂದೊಳ್ಳೆ ದೃಷ್ಟಾಂತ ಕಥೆಯ ಮೂಲಕ ಹೇಳಿದ್ದಾರೆ ಆರ್.ಜೆ. ನಯನಾ. ನಯನಾ ಅವರು ರೇಡಿಯೋ ನಿರೂಪಕಿ, ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡವರು. ಪ್ರತಿಕ್ರಿಯಿಸಿ: siridanipodcast@gmail.com

ನಾಗತಿಹಳ್ಳಿ ಬದುಕಿನ ಅಮೃತಧಾರೆ – ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಆತ್ಮೀಯ ಸಂವಾದ (ಮರುಪ್ರಸಾರ) ನಾಗತಿಹಳ್ಳಿ ಬದುಕಿನ ಅಮೃತಧಾರೆ – ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಆತ್ಮೀಯ ಸಂವಾದ ಪ್ರತಿಕ್ರಿಯಿಸಿ: siridanipodcast@gmail.com

13ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ– ಒಂದು ನೋಟ– ಬಾನಾಸು ಬಾ.ನಾ. ಸುಬ್ರಹ್ಮಣ್ಯ, ಹಿರಿಯ ಚಲನಚಿತ್ರ ಪತ್ರಕರ್ತರು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ವಿಶ್ಲೇಷಿಸಿದ್ದಾರೆ. ಕೇಳಿ, ಪ್ರತಿಕ್ರಿಯಿಸಿ: siridanipodcast@gmail.com

ಇರುವುದೆಲ್ಲವ ಬಿಟ್ಟು... ಕಾಲದ ಸ್ಥಿತ್ಯಂತರವನ್ನು ಲಹರಿಯಲ್ಲಿ ಕಟ್ಟಿಕೊಟ್ಟಿದ್ದಾರೆ ವಿದ್ಯಾ ಎಸ್. ವಿದ್ಯಾ ಅವರು ಪುತ್ತೂರಿನ ಇವೇಕಾನಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿ. ಆಕಾಶವಾಣಿಯಲ್ಲಿ ಅರೆಕಾಲಿಕ ನಿರೂಪಕಿಯಾಗಿದ್ದಾರೆ. ಕಲೆ, ಸಾಹಿತ್ಯ, ಮಾತು, ಸಾಂಸ್ಕೃತಿಕ ಸಂಘಟನೆ ಅವರ ಆಸಕ್ತಿಯ ಕ್ಷೇತ್ರಗಳು ಪ್ರತಿಕ್ರಿಯಿಸಿ: siridanipodcast@gmail.com

ಚಿತ್ರ: ರಾಮಾಚಾರಿ 2.0 ಸಾಹಿತ್ಯ: ಮಂಜು ದೊಡ್ಡಮನಿ ಸಂಗೀತ: ಸುಂದರ ಮೂರ್ತಿ ಗಾಯನ: ರಾಜೇಶ್ ಕೃಷ್ಣನ್ ನಿರ್ಮಾಣ: ಪನೋರಾಮಿಕ್ ಸ್ಟುಡಿಯೋ (ತೇಜ್ ಆರ್.) ಹಾಡನ್ನು ಯುಟ್ಯೂಬ್‌ನಲ್ಲಿ ವೀಕ್ಷಿಸಲು: https://www.youtube.com/watch?v=O17Z0eX2dSQ ಪ್ರತಿಕ್ರಿಯಿಸಿ: siridanipodcast@gmail.com

ಇಂಜೆಕ್ಷನ್ ತಕಣಿ ಮಾರ್ರೆ... ಕುಂದಗನ್ನಡದಲ್ಲೊಂದು ಚೆಂದದ ಮಾತುಕತೆ ಮೇಘನಾ ದೇವಾಡಿಗ, ಶ್ರೀರಕ್ಷಾ, ಶ್ರೀಲಕ್ಷ್ಮೀ ಸ್ಕ್ರಿಪ್ಟ್: ಪೂಜಿತಾ ಪ್ರತಿಕ್ರಿಯಿಸಿ: siridanipodcast@gmail.com

ಕು|ಸುಹಾನ ಸಯ್ಯದ್ ಎಂ., ಬಹು ಭಾಷಾ ಬರಹಗಾರ್ತಿ ಇವರು ಕನ್ನಡ, ಹಿಂದಿ, ಇಂಗ್ಲೀಷ್ ಹೀಗೇ ಸುಮಾರು ಎಂಟು ಭಾಷೆ ಮಾತಾಡಬಲ್ಲರು. ಹದಿಮೂರನೇ ವರ್ಷದಲ್ಲೇ ಬರೆಯಲು ಆರಂಭಿಸಿದ ಇವರು ಮೂರು ಭಾಷೆಗಳಲ್ಲಿ ಕಥೆ, ಕವನ, ನಗೆಹನಿ, ಹಾಯ್ಕು, ಅಬಾಬಿ ,ಚುಟುಕು ಮುಂತಾದವುಗಳನ್ನು ಬರೆಯುತ್ತಾರೆ. ಶಿಕ್ಷಣ ಮತ್ತು ವೃತ್ತಿ ಜೀವನ: 2001ರಿಂದ 2004ರವರೆಗೆ ತಮ್ಮ ಪ್ರೌಢ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಬಂಟ್ವಾಳ ತಾಲೂಕಿನ ವಿಟ್ಲದ ಪದವಿ ಪೂರ್ವ ಕಾಲೇಜಿನಲ್ಲಿ ಮಾಡಿದ ಸುಹಾನರು, ತಮ್ಮ ಮೂರು ವರ್ಷದ ಪದವಿ ವಿದ್ಯಾಭ್ಯಾಸವನ್ನು ಬಂಟ್ವಾಳ ತಾಲೂಕಿನ ಅನುಗ್ರಹ ಕಾಲೇಜಿನಲ್ಲಿ ಪೂರೈಸಿದ್ದಾರೆ. 2019ರಲ್ಲಿ ತಮ್ಮ ಎಂ.ಕಾಂ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡು, ಅದೇ ವರ್ಷ ಮಂಗಳೂರಿನ ಬರಾಕ ಕಾಲೇಜಿನಲ್ಲಿ ಉದ್ಯೋಗಕ್ಕೆ ಸೇರಿದ್ದಾರೆ. ಅಲ್ಲದೇ ಓರ್ವ 'ಉನ್ನತ ಕ್ರಮದ ಆಲೋಚನಾ ಕೌಶಲ್ಯಗಳ' ತರಬೇತುಗಾರ್ತಿಯಾಗಿಯೂ ಮತ್ತು ಹಲವೆಡೆ ನಿರೂಪಕಿಯೂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು ನವಪರ್ವ ಫೌಂಡೇಶನ್ ಹೊರ ತಂದ ಸಂಪಾದನಾ ಕೃತಿಯಾದ 'ಪತಂಗ ಪರ್ವ'ದ ಸಹ ಬರಹಗಾರರಲ್ಲಿ ಒಬ್ಬರಾಗಿದ್ದು , 'ನವಪರ್ವ ಸವ್ಯ ಸಾಚಿ' ಬಿರುದಿಗೆ ಪಾತ್ರರಾಗಿದ್ದಾರೆ. ಅಲ್ಲದೇ ನೂರಕ್ಕೂ ಹೆಚ್ಚು ಸಂಪಾದನಾ ಕೃತಿಯಲ್ಲಿನ ಸಹ ಬರಹಗಾರರಾಗಿದ್ದಾರೆ. ತಮ್ಮದೇ ಆದ ಆಂಗ್ಲ ಭಾಷೆಯ ಸಂಪಾದನಾ ಕೃತಿಯ ಸಿದ್ಧತೆಯಲ್ಲಿ ಇದ್ದಾರೆ.

ದೀಪಾ ಪಾವಂಜೆ ಮಂಗಳೂರಿನವರು. ಉಪನ್ಯಾಸಕಿ, ಆಕಾಶವಾಣಿಯಲ್ಲಿ ಹವ್ಯಾಸಿ ನಿರೂಪಕಿ. ಗಝಲ್, ಕಥೆ ಬರವಣಿಗೆ ಅವರ ಆಸಕ್ತಿ. ಸಿರಿದನಿಯಲ್ಲಿ ಅವರ ಕಥೆ: ಗ್ರಹಣ. ಕೇಳಿ ಪ್ರತಿಕ್ರಿಯಿಸಿ: siridanipodcast@gmail.com

ಅರುಣಾ ಶ್ರೀನಿವಾಸ್, ಬರಹಗಾರ್ತಿ, ಕಥೆಗಾರ್ತಿ. ಸಿರಿದನಿಯಲ್ಲಿ ಈ ಬಾರಿ ಹೊಸ ಕಥೆ ‘ಅಪರಾಧಿ'ಯೊಂದಿಗೆ ಬಂದಿದ್ದಾರೆ. ಕೇಳಿ ಪ್ರತಿಕ್ರಿಯಿಸಿ: siridanipodcast@gmail.com ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ

ಹಾರಾಡಿ ಬಿ.ಎಸ್.ರಾಮಶೆಟ್ಟಿ ರಂಗಭೂಮಿ, ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರು. ಸದ್ಯದ ರಂಗಭೂಮಿ ಹೇಗಿದೆ? ರಂಗಕರ್ಮಿಯ ಬದುಕು ಹೇಗಿದೆ? ಶಿಕ್ಷಣದಲ್ಲಿ ರಂಗ ಪ್ರಯೋಗ ಅಳವಡಿಸಿದ್ದು ಹೇಗೆ? ಇಂಥ ಹತ್ತಾರು ವಿಷಯಗಳನ್ನು ಈ ಮಾತುಕತೆಯಲ್ಲಿ ತೆರೆದಿಟ್ಟಿದ್ದಾರೆ ರಾಮಶೆಟ್ಟಿ ಅವರು. ಮಾತನಾಡಿಸಿದವರು: ಸ್ಮಿತಾ ಶೆಣೈ ಮಂಗಳೂರು. ಪ್ರತಿಕ್ರಿಯಿಸಿ: siridanipodcast@gmail.com ಕಾರ್ಯಕ್ರಮ ನಿರ್ಮಾಣ: ದೀಪಾ ಪಾವಂಜೆ

ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಬ್ಲಾಕ್‌ಚೈನ್ ತಂತ್ರಜ್ಞಾನದ ಬಗ್ಗೆ ವಿಜ್ಞಾನಿ, ನಟ ತೇಜ್ ಮಾತನಾಡಿದ್ದಾರೆ. ಚುನಾವಣೆಯಲ್ಲಿ ಈ ತಂತ್ರಜ್ಞಾನ ಬಂದರೆ ಮತದಾರರ ಪಾಲ್ಗೊಳ್ಳುವಿಕೆ ಮತ್ತು ಚುನಾವಣೆಯ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಫಲಿತಾಂಶದಲ್ಲಿ ನಿಖರತೆ ತರಲು ಸಾಧ್ಯ ಎನ್ನುವ ವಿಶ್ವಾಸ ತೇಜ್ ಅವರದ್ದು. ಪ್ರತಿಕ್ರಿಯಿಸಿ:siridanipodcast@gmail.com BACKGROUND MUSIC USED WITH THANKS https://twitter.com/SiridaniP/status/1482034505171234818

ಭರವಸೆಯ ತಂತ್ರಜ್ಞಾನವಾಗಿ ಅಸ್ತಿತ್ವಕ್ಕೆ ಬಂದಿರುವ ಬ್ಲಾಕ್‌ಚೈನ್ ವ್ಯವಸ್ಥೆಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ ವಿಜ್ಞಾನಿ, ನಟ ತೇಜ್ ಅವರು. ಸಿನಿಮಾದ ಆಚೆಗಿನ ತಾಂತ್ರಿಕ ಜಗತ್ತನ್ನು ತಿಳಿಯುವ ಪುಟ್ಟ ಪ್ರಯತ್ನ ಸಿರಿದನಿಯದ್ದು. ಪ್ರತಿಕ್ರಿಯಿಸಿ: siridanipodcast@gmail.com BACKGROUND MUSIC USED WITH THANKS https://www.youtube.com/watch?v=Q7HjxOAU5Kc

ಉದ್ಯಾವರ ಮಾಧವ ಆಚಾರ್ಯ ಅವರ ಕವನಸಂಕಲನವನ್ನು ರಾಧೆ ಎಂಬ ಗಾಥೆಯನ್ನು ಪರಿಚಯಿಸಿದ್ದಾರೆ ಸ್ಮಿತಾ ಶೆಣೈ. ಕೃತಿಕಾರರ ಕೃಷ್ಣಪ್ರೀತಿ, ರಾಧೆಯ ಪ್ರೇಮದ ಆಯಾಮ, ಗಾಢತೆಯನ್ನು ಸ್ಮಿತಾ ಅವರು ಮಾತಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com Background music used with thanks: Preeti Kotta Radhege- SINGER: Shreelata Gururaj Shreelata Gururaj https://www.youtube.com/watch?v=5U1o7GNFvUw Flute: https://www.youtube.com/watch?v=x2QT3TxVnzI&list=RDTzOuqSdZtF8&index=4 #Krishna #Smithashenoy #radhe #radheembagaathe #udupi #udupisrikrishna #krishnaflute #smitha #mangalore #bookreview #newbook #devotion #writer

ಪಿ.ಗಣೇಶ್ ಅವರು ಜೀವನ ಕ್ಷೇಮ ನಿರ್ದೇಶಕ. wellness director ಆಗಿ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರುಕಟ್ಟೆ, ಮಾನವ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲೂ ಪರಿಣತರು. ಆರೋಗ್ಯ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆ, ಅದೇ ವೇಳೆ ಜೀವನ ಶೈಲಿಯಲ್ಲಾದ ಬದಲಾವಣೆಗಳನ್ನು ಹತ್ತಿರದಿಂದ ಗಮನಿಸಿರುವ ಅವರು, ಔಷಧಮುಕ್ತ ಜೀವನ ಸಾಧ್ಯವೇ ಎಂಬ ಬಗ್ಗೆ ಅಧ್ಯಯನ ನಡೆಸಿ, ಪರಿಣತರ ತಂಡವನ್ನು ಕಟ್ಟಿಕೊಂಡು ನಾಡಿನಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ಶಾಲಾ, ಕಾಲೇಜು, ಕಾರ್ಪೊರೇಟ್ ಕಂಪನಿಗಳಲ್ಲಿ ಕಾರ್ಯಾಗಾರ ನಡೆಸಿದ್ದಾರೆ. ಅವರಿಂದ ಆರೋಗ್ಯ ಮತ್ತು ನೆಮ್ಮದಿಯ ಟಿಪ್ಸ್ ಪಡೆಯೋಣ ಪ್ರತಿಕ್ರಿಯಿಸಿ: siridanipodcast@gmail.com BACKGROUND MUSIC USED WITH THANKS: https://www.youtube.com/watch?v=bvlNy_GxVe0 #pganesh, #ganesh #wellness #wellnessdirector #lifestyle #health #medicinfree #hospital #yoga #Ayurveda #doctor #healthylife #healthcare #newyear #happynewyear #exercise #fitness

ವರ್ಷವೊಂದು ಕಳೆದು ಹೊಸ ವರ್ಷವನ್ನು ಸ್ವಾಗತಿಸುವ ಹೊತ್ತಿನಲ್ಲಿ ಕಾಲ ಸೂಚಕವಾಗುವ ಕ್ಯಾಲೆಂಡರ್, ಕಾಲದ ಘಟನೆಗಳನ್ನು ದಾಖಲಿಸುವ ಪುಟ್ಟ ಡೈರಿ ಕೊಡುವ ಚೈತನ್ಯ ಹೇಗಿರುತ್ತದೆ ಎಂಬುದನ್ನು ತೆರೆದಿಟ್ಟಿದ್ದಾರೆ ಪತ್ರಕರ್ತ #ಕೃಷ್ಣಮೋಹನ ತಲೆಂಗಳ. ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ ಪ್ರತಿಕ್ರಿಯಿಸಿ: siridanipodcast@gmail.com #ಕೃಷ್ಣಮೋಹನ ತಲೆಂಗಳ #Krishnamohana, #thalengala, #Mangalore, #newyear #siridani #ಹೊಸವರ್ಷ, #happynew year # Shwethainitiative #maam

ಜೀವನ ಮತ್ತು ಜೀವನೋತ್ಸಾಹದ ಬಗ್ಗೆ ಸುಮಾರು ಎರಡು ತಲೆಮಾರುಗಳ ತುಲನೆ ಮಾಡಿದ್ದಾರೆ ವಾಣಿರಾಜ್. ಹೊಸ ವರ್ಷದ ಹೊತ್ತಿನಲ್ಲಿ ಒಂದಿಷ್ಟು ನೆನಪುಗಳ ಮೆಲುಕು ಇದೆ. ವಾಣಿರಾಜ್ ಅವರು ಲೇಖಕಿ, ಯೋಗ, ಕಲೆ, ಸಂಸ್ಕೃತಿ ಆಸಕ್ತರು. ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ ಪ್ರತಿಕ್ರಿಯಿಸಿ: siridanipodcast@gmail.com

ನಿತ್ಯ ನೂತನ ಜೀವನೋತ್ಸಾಹ, ಖುಷಿ ಹೇಗಿರಬೇಕು ಅನ್ನವ ಟಿಪ್ಸ್ ಕೊಟ್ಟಿದ್ದಾರೆ, ನಾಡಿನ ಖ್ಯಾತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರು. ಆತ್ಮೀಯ ಮಾತುಕತೆಯಲ್ಲಿ ಭುವನೇಶ್ವರಿ ಹೆಗಡೆ ಅವರು ಮನಸ್ಸು ತೆರೆದಿಟ್ಟಿದ್ದಾರೆ. ಹೊಸ ವರ್ಷದ ಮೊದಲ ದಿನ ಹಾಗೂ ಮೊದಲ ಸಂಚಿಕೆಯಲ್ಲಿ ಭುವನೇಶ್ವರಿ ಹೆಗಡೆ ಅವರ ಮಾತುಗಳನ್ನು ಕೇಳೋಣ. ನಿಮ್ಮ ಪ್ರತಿಕ್ರಿಯೆಗೆ: siridanipodcast@gmail.com BACKGROUND MUSIC USED WITH THANKS New Vibes - Relaxing Music : https://www.youtube.com/watch?v=bvlNy_GxVe0

ಸರ್ಕಾರಿ ಅಭಿಯೋಜಕ ಎಂದರೆ ಯಾರು? ಮತ್ತು ಅವರ ಜವಾಬ್ದಾರಿಗಳೇನು? ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಸರ್ಕಾರಿ ಅಭಿಯೋಜಕರ ಸಂಘದ ಅಧ್ಯಕ್ಷ ಬಿ.ಎಸ್.ಪಾಟೀಲ್ ಅವರು. ಸೂಕ್ಷ್ಮ, ಅತಿಸೂಕ್ಷ್ಮ ಪ್ರಕರಣಗಳನ್ನು ನಿಭಾಯಿಸಿ, ಯಶಸ್ವಿಯಾದ ಅವರ ಯಶೋಗಾಥೆಗಳನ್ನು ನೀವು ಕೇಳಬಹುದು. ಕೇಳಿ, ನಿಮ್ಮ ಆಪಪ್ತರಿಗೂ ಕೇಳಿಸಿ. ಪ್ರತಿಕ್ರಿಯಿಸಿ: siridanipodcast@gmail.com ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ

ಕೊಪ್ಪಳದ ಕವಯಿತ್ರಿ, ಸಾಹಿತಿ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ವಿಜಯಲಕ್ಷ್ಮೀ ಕೊಟಗಿ ಅವರು ಮಾತುಕತೆಗೆ ಸಿಕ್ಕಿದ್ದಾರೆ. ಅರಳದ ಅಲರು ಮತ್ತು ಶ್ರೀವಿಜಯ ಸ್ವಗತ ಎಂಬ ಎರಡು ಕೃತಿಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಆ ನೆಪದಲ್ಲಿ ಕೊಟಗಿ ಅವರ ಕವಿಮನಸ್ಸನ್ನು ಅರಿಯುವ ಪುಟ್ಟ ಪ್ರಯತ್ನ ಸಿರಿದನಿಯದ್ದು. ಮಾತುಕತೆ ಕೇಳಿ ನಿಮ್ಮ ಆಪ್ತರಿಗೂ ಕೇಳಿಸಿ ಕಾರ್ಯಕ್ರಮ ಹೇಗಿತ್ತು ಎಂದು ಪ್ರತಿಕ್ರಿಯಿಸಿ: siridanipodcast@gmail.com

ನನ್ನರಸಿ ರಾಧೆ ಧಾರಾವಾಹಿಯ ಇಂಚರಾ ಪಾತ್ರಧಾರಿ ಈಗ ಹಿರಿತೆರೆಗೆ ಭಡ್ತಿ ಪಡೆದಿದ್ದಾರೆ. ಉನ್ನತ ಶಿಕ್ಷಣದ ಬಳಿಕ ಅವರು ಕಲಾ ಕ್ಷೇತ್ರಕ್ಕೆ ಹೊರಳಿದ ಬಗೆಯನ್ನು ಸಿರಿದನಿಯಲ್ಲಿ ಹಂಚಿಕೊಂಡಿದ್ದಾರೆ. ಕೇಳಿ ನಿಮ್ಮ ಆಆಪ್ತರಿಗೂ ಕೇಳಿಸಿ. ಸಂದರ್ಶನ: ಶರತ್ ಪ್ರತಿಕ್ರಿಯಿಸಿ: siridanipodcast@gmail.com ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ

ಪತ್ರದಲ್ಲಿ ಬರೆದ ಪದಗಳಿವಷ್ಟೇ ಅಲ್ಲ– ಒಂದು ಭಾವಕೋಶ– ವಾಣಿ ರಾಜ್ ಪತ್ರ ಬರೆಯುವ ಕಾಲವೊಂದನ್ನು ನೆನಪಿಸಿಕೊಂಡು ಅಂದಿನ ನವಿರು ಭಾವವನ್ನು ಹಂಚಿಕೊಂಡಿದ್ದಾರೆ ವಾಣಿ ರಾಜ್ ಅವರು. ಒಂದು ಭಾವ ವಿನಿಮಯವನ್ನು ಕಟ್ಟಿಕೊಟ್ಟಿದ್ದಾರೆ. ನಿಮ್ಮ ಪ್ರೀತಿಪಾತ್ರರಿಗೂ ಕೇಳಿಸಿ ಕೇಳಿ ಪ್ರತಿಕ್ರಿಯಿಸಿ: siridanipodcast@gmail.com ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ