Kelirondu Katheya ಕೇಳಿರೊಂದು ಕಥೆಯ

Follow Kelirondu Katheya ಕೇಳಿರೊಂದು ಕಥೆಯ
Share on
Copy link to clipboard

೩ ರಿಂದ ೧೦ ವರ್ಶದ ಮಕ್ಕಳಿಗಾಗಿಯೇ ರೂಪಿಸಿದ ಮೊದಲ ಕನ್ನಡ ಕಾರ್ಯಕ್ರಮ . ಪ್ರಪಂಚದ ಹಲವಾರು ದೇಶಗಳಿಂದ ಆಯ್ದ ಜನಪದ ಕತೆಗಳು ಪುಟ್ಟ ಮಕ್ಕಳಿಗಾಗಿಯೇ ನಮ್ಮ ತಂಡದ ಮಧುರ ಧ್ವನಿ ಮತ್ತು ಇಂಪಾದ ಹಿನ್ನಲೆ ಸಂಗೀತದ ಜೊತೆಗೆ ಕೇಳಿ ಮತ್ತು ಆನಂದಿಸಿ . ನಮ್ಮೊಡನೆ ನಿಮ್ಮ ಪ್ರತಿಕ್ರಿಯೆ ಹಂಚಿಕೊಳ್ಳಲು kelirondu@gmail.com ಗೆ ಇಮೇಲ್ ಕಳಿಸಿ . Kannada Kids Storytell…

Kelirondu Katheya Team


    • Jul 19, 2021 LATEST EPISODE
    • weekly NEW EPISODES
    • 8m AVG DURATION
    • 124 EPISODES

    Listeners of Kelirondu Katheya ಕೇಳಿರೊಂದು ಕಥೆಯ that love the show mention: stories, music, good.



    Search for episodes from Kelirondu Katheya ಕೇಳಿರೊಂದು ಕಥೆಯ with a specific topic:

    Latest episodes from Kelirondu Katheya ಕೇಳಿರೊಂದು ಕಥೆಯ

    Ep131 - ಬಣ್ಣದ ಪ್ರಾಣಿ

    Play Episode Listen Later Jul 19, 2021 7:12


    ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು .  ದುಬಾರಿಯಾದ ಆಟದ ಸಾಮಾನಿರಲಿ ,  ಮೂಲೆಯಲ್ಲಿ ಬಿದ್ದಿರೋ  ಕಲ್ಲಿರಲಿ , ಮಕ್ಕಳಿಗೆ  ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ .  ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು .  ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಈ ಪ್ರಾಣಿಯು ಮಕ್ಕಳಿಗೆ ಆಟದ ಸಾಮಾನಿನ ತರಹ ತೋರಿತು .  ಪ್ರಾಣಿಯನ್ನು  ಮಕ್ಕಳು ಏನು ಮಾಡಿದರು ?  ಬನ್ನಿ , ಈ ಕತೆಯಲ್ಲಿ ತಿಳಿಯೋಣ . 

    ಹನುಮಂತನ ಚಿಟಿಕೆ

    Play Episode Listen Later Jul 11, 2021 9:28


    ಕಥೆಯ ಶೀರ್ಷಿಕೆ ವಿಚಿತ್ರ ಅನ್ನಿಸುತ್ತಾ ?  ಹೌದು .. ರಾಮಾಯಣದ  ಈ ಅಪರೂಪದ ಕತೆ ಕೇಳೋಕೆ ಬಹು ಮಜಾ . ಜತೆಗೆ , ಹನುಮಂತ ಹಾಗೂ ರಾಮನ ಗೆಳೆತನ ಎಷ್ಟು ಗಾಢವಾಗಿತ್ತು ಅನ್ನುವುದಕ್ಕೆ ಸಾಕ್ಷಿ ಕೂಡ .     

    ಕಾಗೆ ಮರಿ ಹಾಗೂ ಹಂಸದ ಕತೆ

    Play Episode Listen Later Jul 4, 2021 4:40


    ಕಾಡಿನಲ್ಲಿ  ವಾಸ ಆಗಿದ್ದ  ಕಾಗೆ ಮರಿಗೆ ನೀರಿನಲ್ಲಿ  ಈಜುತ್ತಿದ್ದ  ಬೆಳ್ಳಗೆ ಸುಂದರವಾಗಿದ್ದ  ಹಂಸವನ್ನ  ಕಂಡಾಗ ಒಂಥರಾ ಅಸೂಯೆ ಆಯ್ತು . ಹಾಗೆ , ಸ್ವಲ್ಪ ಭಯ ಕೂಡ ಆಯ್ತು .   ತಕ್ಷಣ ಅಮ್ಮನ ಬಳಿ ಹೋಗಿ , ಹೇಳಿದಾಗ , ಅಮ್ಮ ಹೇಳಿದ್ದೇನು ? ಆಗ ಕಾಗೆ ಮರಿಗೆ ಏನನ್ನಿಸಿತು ?  ಸಂವಿತ್ ಫೌಂಡೇಶನ್ ಅವರ ಸಹಯೋಗದಲ್ಲಿ ಮಾಡಿದ  ಈ ಪುಟ್ಟ  ಕತೆ ಹೇಳುವ ನೀತಿ ಮಾತ್ರ ಬಹಳ ದೊಡ್ಡದು . 

    ನೀಲಿ ಮರಿ ಆನೆ - ಗೆಳೆತನದ ಬಗ್ಗೆ ಒಂದು ಕತೆ

    Play Episode Listen Later Jun 27, 2021 9:04


    ಕಾಡಿನಲ್ಲಿ  ಆನೆ ಮರಿ ಒಂದು ಹುಟ್ಟಿತು . ಎಲ್ಲ ರೀತಿಯಲ್ಲೂ ಬೇರೆ  ಆನೆಗಳ ಥರಾನೇ ಇದ್ದ ಆನೆ ಮರಿ ನೋಡೋಕೆ ಮಾತ್ರ ನೀಲಿ  ಬಣ್ಣ ಇತ್ತು !.  ಆ ಬಣ್ಣದ ಜತೆ  ಕಾಡಿನಲ್ಲಿ ಬೇರೆ  ಮರಿಗಳ ಜತೆ  ಬೇರೆಯೋಕೆ ಈ  ಆನೆ ಮರಿಗೆ  ಸಾಧ್ಯ  ಆಯಿತೇ  ? 

    ಕೆಂಪು ಕಾರು - ಸೇವಾ ಮನೋಭಾವದ ಬಗ್ಗೆ ಒಂದು ಕತೆ

    Play Episode Listen Later Jun 20, 2021 7:12


    ರಕ್ಷಿತ್ ಗೆ  ಕಾರುಗಳು ಅಂದರೆ ತುಂಬಾ  ಇಷ್ಟ.  ಒಂದು  ದಿವಸ  ಅವನ  ಅಮ್ಮ ಅವನಿಷ್ಟದ  ಕೆಂಪು  ಕಾರನ್ನ ಗೊತ್ತಿಲ್ಲದೇ ಬಡ ಮಕ್ಕಳಿಗೆ  ದಾನ ಮಾಡಿದಾಗ ರಕ್ಷಿತ್ ಗೆ  ಆದ  ದುಃಖ ಅಷ್ಟಿಷ್ಟಲ್ಲ . ಆಗ ರಕ್ಷಿತ್ ಏನು  ಮಾಡಿದ  ?  ಬನ್ನಿ ಈ ಕತೆ ಕೇಳಿ  ತಿಳಿದುಕೊಳ್ಳೋಣ 

    ರೋಹಿತನ ಸಾಹಸ - ಒಂದು "ಸಾಹಸಮಯ" ಕತೆ

    Play Episode Listen Later Jun 6, 2021 6:16


    ” ಕೇಳಿರೊಂದು ಕಥೆಯ ” ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು  ಮಾಡಿದ್ದೆವು .    ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ  ಈ  ವಾರದ  ಕತೆ  “ರೋಹಿತನ ಸಾಹಸ ” .  ಹೊರಗೆ ಜೋರಾಗಿ ಬೀಳುತ್ತಿದ್ದ ಮಳೆಯಲ್ಲಿ ಯಾವುದೋ ಪ್ರಾಣಿ ಕೂಗುವ ಸದ್ದು ಕೇಳಿಸ್ತು . ಮನೆಯಲ್ಲಿ ಬೇಜಾರು ಮಾಡಿಕೊಂಡು ಕುಳಿತಿದ್ದ ರೋಹಿತ್ ಆಗ ಏನು ಮಾಡಿದ ?    ಕೇಳಿ ಈ ರೋಚಕ ಕಥೆ

    ಹೂದಾನಿ - ಧೈರ್ಯದ ಬಗ್ಗೆ ಒಂದು ಕತೆ

    Play Episode Listen Later May 30, 2021 6:16


    " ಕೇಳಿರೊಂದು ಕಥೆಯ " ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು  ಮಾಡಿದ್ದೆವು .    ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ  ಈ  ವಾರದ  ಕತೆ  "ಹೂದಾನಿ " .  ತೇಜಸ್ , ಅಂಕಿತ್ ಹಾಗೂ ದಿವ್ಯ ಮನೆಯಲ್ಲಿ  ಆಟ ಆಡ್ತಿದ್ದಾಗ ಮನೆಯಲ್ಲಿದ್ದ  ಹೂದಾನಿ ( Flower Vase ) ಬಿದ್ಧು ಹೋಗತ್ತೆ .  ಆಗ , ಆ ಮಕ್ಕಳೇನು ಮಾಡಿದರು . ಕೇಳಿ  ಈ ಕುತೂಹಲಕಾರಿ ಕಥೆ . 

    [summer of stories] - ಒಂಟೆಯ ಬಗ್ಗೆ ಮೂರು ವಿಷಯಗಳು

    Play Episode Listen Later May 15, 2021 1:37


    ಮರಳುಗಾಡಿನಲ್ಲಿ ವಾಸ ಮಾಡೋ ಒಂಟೆ ಅಸಾಮಾನ್ಯ ಪ್ರಾಣಿ .  ದಿನಗಟ್ಟಲೆ ನೀರಿಲ್ಲದೆ ಬಿಸಿಲಿನಲ್ಲಿ ಇರುವ ಶಕ್ತಿ ಇರುವ ಈ ಪ್ರಾಣಿಯ ಬಗ್ಗೆ ನಮ್ಮ ಪುಟಾಣಿ ಕೇಳಿಗಾರ್ತಿ ಪ್ರಖ್ಯಾ ಇನ್ನಷ್ಟು ವಿಷಯಗಳನ್ನು ಕಥೆಯ ರೂಪದಲ್ಲಿ ನಿರೂಪಿಸಿದ್ದಾಳೆ .   

    [special episode] - ಈದ್ ಹಬ್ಬ ಹಾಗೂ ರಂಜಾನ್ ವಿಶೇಷ

    Play Episode Listen Later May 13, 2021 4:56


    ಈದ್ ಹಬ್ಬ ಮುಸಲ್ಮಾನರು ಆಚರಣೆ ಮಾಡುವ ಮಹತ್ವದ ಹಬ್ಬಗಳಲ್ಲೊಂದು .  ರಂಜಾನ್ ತಿಂಗಳಲ್ಲಿ ಬರುವ ಈ ಹಬ್ಬದ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ !

    [summerofstories] -Tanay narrating " ಪಾರಿವಾಳ ಮತ್ತು ಇರುವೆ"

    Play Episode Listen Later May 9, 2021 1:54


    4 ವರ್ಷದ  ಪುಟ್ಟ  ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸುವ " ಪಾರಿವಾಳ ಮತ್ತು ಇರುವೆಯ " ಕತೆ .    ಇದರ ಮೂಲ ಕತೆ ಇಲ್ಲಿ ಕೇಳಬಹುದು  - https://kelirondukatheya.org/ep95/

    [summerofstories] - Tanay narrating ಮಿಸಾಕೋ ಮತ್ತು ಓನಿ

    Play Episode Listen Later May 9, 2021 5:42


    4 ವರ್ಷದ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸಿರುವ "ಮಿಸಾಕೊ ಮತ್ತು ಓನಿ " " ಕತೆ .    ಇದರ ಮೂಲ ಕಥೆ ಇಲ್ಲಿ ಕೇಳಬಹುದು  - https://kelirondukatheya.org/misako-and-oni/

    [summerofstories] - Tanay narrating ಸಿಂಹದ ಮೀಸೆ

    Play Episode Listen Later May 9, 2021 3:18


    4 ವರ್ಷದ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ "ಸಿಂಹದ  ಮೀಸೆ " ಕಥೆಯನ್ನು ನಿರೂಪಿಸಿ  ಕಳಿಸಿದ್ದಾನೆ . 

    [summer of stories] - ಚಿನ್ನದ ಕೊಡಲಿಯ ಕತೆ - Shravan Jois

    Play Episode Listen Later May 5, 2021 2:19


    Narration of popular story - The woodcutter and the ax by our listener Shravan Jois.    The original story is available at https://kelirondukatheya.org/ep93/ 

    [summer of stories] - ಕರಡಿ ಕತೆ

    Play Episode Listen Later Apr 29, 2021 1:24


    A young listener sharing a self narrated cute story called ಕರಡಿ ಕತೆ . 

    [summer of stories] - capseller, the monkeys and some music !

    Play Episode Listen Later Apr 16, 2021 3:15


    We get a lot of submissions from our listeners, each of which is special because they took the time to share their special talent.  Once in a while, we get something so unique, it stays with us a long time.    6-year-old Srishti and her mother have collaborated to make this story.  While the story narration is very rhythmic  and almost feels like song, the background effects with Veena make the effort extra special.  Thank you Shruthi avare and also to little Srishti.  

    [summer of stories] - Rooster Raga

    Play Episode Listen Later Apr 10, 2021 4:18


    3 ವರ್ಷದ ವಿಹಾ (  Viha Nithundila ) ನಿರೂಪಿಸಿರುವ ".  Rooster Raga ಅನ್ನುವ  ಮುದ್ದಾದ  ಕತೆ .   ಕತೆಯ ಜತೆ ತಂದೆ ತಾಯಿಗಳು ಕೊಟ್ಟಿರುವ Background ಸಂಗೀತ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ . 

    Ep117 - [ವ್ಯಕ್ತಿ ಪರಿಚಯ ] –ಬಿ ಪಿ ದಾಕ್ಷಾಯಿಣಿ

    Play Episode Listen Later Mar 28, 2021 12:47


    ಈ ಸಲದ ವಿಶೇಷ ವ್ಯಕ್ತಿ , ಕನ್ನಡತಿ , ಬಾಹ್ಯಾಕಾಶ ವಿಜ್ಞಾನಿ  ಶ್ರೀಮತಿ ಬಿ. ಪಿ . ದಾಕ್ಷಾಯಿಣಿ .  ಮಂಗಳ ಗ್ರಹದ ಬಗ್ಗೆ ಸಂಶೋಧನೆ ಮಾಡಲು 2014ರಲ್ಲಿ  ಭಾರತದ ವಿಜ್ಞಾನಿಗಳು ತಯಾರಿಸಿ, ಹಾರಿಸಿದ ಉಪಗ್ರಹದ ಹೆಸರು "ಮಂಗಳಯಾನ".  ಈ ಮಹತ್ಸಾಧನೆಯ ಹಿಂದೆ ಇದ್ದ ಪ್ರಮುಖ ವಿಜ್ಞಾನಿಗಳಲ್ಲಿ ಶ್ರೀಮತಿ . ಬಿ ಪಿ ದಾಕ್ಷಾಯಿಣಿ ಅವರು ಕೂಡ ಒಬ್ಬರು .  ಈ ಕಂತಿನ  ಇನ್ನೊಂದು ವಿಶೇಷ  ಅಂದರೆ , ದಾಕ್ಷಾಯಿಣಿ ಅವರ ಜತೆ ಮಾತನಾಡುವ ಅವಕಾಶ ಸಿಕ್ಕಿದ್ದು . ಅವರ ದನಿಯಲ್ಲಿ , ಅವರ ಬಾಲ್ಯ , ಓದು , ನೌಕರಿ , ಅವರ ಹವ್ಯಾಸಗಳು ಇವೆಲ್ಲದರ ಬಗ್ಗೆ ತಿಳಿಯುವ ಅವಕಾಶ ಸಿಕ್ಕಿದ್ದು ಸಂತಸದ ಸಂಗತಿ .  ಅಶ್ವಿನಿ ಅವರ ದನಿಯಲ್ಲಿ ಮೂಡಿರುವ ಈ ಕಂತಿನಲ್ಲಿ , ದಾಕ್ಷಾಯಿಣಿ ಅವರ ಕೆಲವು ಮಾತಿನ ತುಣುಕುಗಳನ್ನೂ ಸೇರಿಸಲಾಗಿದೆ .  ಕೇಳಿ . 

    Ep115 - [ ವ್ಯಕ್ತಿ ಪರಿಚಯ ] - ಹೆಲೆನ್ ಕೆಲ್ಲೆರ್

    Play Episode Listen Later Mar 7, 2021 7:44


    "ವ್ಯಕ್ತಿ ಪರಿಚಯ " ಸರಣಿಯಲ್ಲಿ  ಈ ಸಲದ  ಪರಿಚಯ "ಹೆಲೆನ್ ಕೆಲ್ಲೆರ್ ". ಹೆಲೆನ್ ಕೆಲ್ಲೆರ್ , ಅತಿ ವಿಶಿಷ್ಟ ಮಹಿಳೆ .  ಕಣ್ಣು , ಕಿವಿ ಕೇಳದೆ ಇದ್ದರೂ ಬಾಯಿ , ಹಾಗೂ ಸ್ಪರ್ಶದ  ( Touch ) ಸಹಾಯದಿಂದ ಕಾಲೇಜು ಶಿಕ್ಷಣ ಪಡೆದವರು .  ನಂತರ , ಪ್ರಪಂಚದಾದ್ಯಂತ  ಲಕ್ಷಾಂತರ ಅಂಗವಿಕಲರಿಗೆ ಸ್ಪೂರ್ತಿಯಾಗಿ ನಿಂತವರು .   ಇವರ ಜೀವನದ ರೋಚಕ ಕತೆ , ಈ ಸಲ "ಕೇಳಿರೊಂದು ಕತೆಯಾ " ದಲ್ಲಿ . 

    Ep114 - [ ವ್ಯಕ್ತಿ ಪರಿಚಯ ] - ಅನಂತ್ ಪೈ

    Play Episode Listen Later Feb 21, 2021 6:48


    " ವ್ಯಕ್ತಿ ಪರಿಚಯ " ಸರಣಿಯಲ್ಲಿ ಮುಂದುವರೆಯುತ್ತಾ ಈ ಸಲ ಕನ್ನಡಿಗ ಅನಂತ್ ಪೈ ಅವರ ಬಗ್ಗೆ ತಿಳಿದುಕೊಳ್ತಿದ್ದೇವೆ . ಭಾರತೀಯ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಸ್ವಲ್ಪ ಕೊರತೆಯೇ . ಅದರಲ್ಲೂ ಪುರಾಣ ಕತೆಗಳನ್ನು ಬಿಟ್ಟರೆ , ಆಧುನಿಕ ಸಾಹಿತ್ಯದಲ್ಲಿ Easy Reading ಆಗಿರುವ  ಮಕ್ಕಳ ಸಾಹಿತ್ಯ ಅತಿ ಕಡಿಮೆ ಅಂತಲೇ ಹೇಳಬೇಕು .  ಈ ಕೊರತೆ ಮನಗಂಡ ಪೈ  ಅವರ ಕೊಡುಗೆ ಭಾರತೀಯ ಮಕ್ಕಳ ಸಾಹಿತ್ಯಕ್ಕೆ ವಿನೂತನ .    

    Ep113 - [ ವ್ಯಕ್ತಿ ಪರಿಚಯ ] - ಲುಡ್ವಿಗ್ ವ್ಯಾನ್ ಬೀಥೋವನ್

    Play Episode Listen Later Feb 14, 2021 11:28


    ಲುಡ್ವಿಗ್ ವ್ಯಾನ್ ಬೀಥೋವನ್ ( Ludwig Van Beethoven) , Western Classical ಸಂಗೀತದಲ್ಲಿ ಅತಿ ದೊಡ್ಡ ಹೆಸರು . ಕರ್ನಾಟಕ ಸಂಗೀತದಲ್ಲಿ ಪುರಂದರ ದಾಸರು ಹೇಗೋ , ವಿಶ್ವ ಸಂಗೀತ ಕ್ಷೇತ್ರದಲ್ಲಿ ಬಿಥೋವನ್ ಕೂಡ . ಕ್ಲಾಸಿಕಲ್ ಸಂಗೀತ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯ ಮಹದಾಸೆ ಬಿಥೋವನ್ ಅವರ ಸಿಂಫೊನಿ ಗಳಲ್ಲಿ ನುಡಿಸಬೇಕು ಅನ್ನುವುದು .  ಅತ್ಯುತ್ತಮ Composer ಆಗಿದ್ದ ಬೀಥೋವನ್ ಕಿವುಡ ಹಾಗೂ ಮೂಕನಾಗಿದ್ದ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ?  ಈ ವಾರದ "ವ್ಯಕ್ತಿ ಪರಿಚಯ " ಸರಣಿಯಲ್ಲಿ ಬೀಥೋವನ್ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ .    ಬೀಥೋವನ್ ಅವರ ಇನ್ನೂ ಕೆಲವು ಚಿತ್ರಗಳು , ಹಾಗೂ ಅವರ ಸಂಗೀತದ ತುಣುಕುಗಳನ್ನು ನಮ್ಮ ವೆಬ್ಸೈಟ್ https://kelirondukatheya.org/ep113 ರಲ್ಲಿ ನೋಡಬಹುದು .   

    Ep112 - [ ವ್ಯಕ್ತಿ ಪರಿಚಯ ] ಮೇರಿ ಕೋಮ್

    Play Episode Listen Later Feb 7, 2021 6:00


    "ವ್ಯಕ್ತಿ ಪರಿಚಯ " ಸರಣಿಯ  ಮೊದಲನೇ ಕಂತು ಇದು .  ಪ್ರಸಿದ್ಧ ವ್ಯಕ್ತಿಗಳ ಜೀವನದ ತುಣುಕುಗಳನ್ನು   ಮಕ್ಕಳಿಗೆ ಅವರದೇ  ರೀತಿಯಲ್ಲಿ  ತಿಳಿ ಹೇಳುವ ಪ್ರಯತ್ನ  ಇದು .   ಈ ಸಲದ ವ್ಯಕ್ತಿ ಪ್ರಪಂಚದೆಲ್ಲೆಡೆ "Confident Mary " ಅಂತಲೇ ಕರೆಸಿಕೊಂಡ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ .  ಮೇರಿ ಬಾಕ್ಸಿಂಗ್ ನಲ್ಲಿ  ಎಷ್ಟು ಪ್ರಸಿದ್ದರೋ ಅವರ ಹಿನ್ನಲೆ  ಕೂಡ ಅಷ್ಟೇ ರೋಚಕವಾದದ್ದು .  http://kelirondukatheya.org/stories/ep112 ರಲ್ಲಿ ಮೇರಿ ಅವರ  ಕೆಲವು  ಚಿತ್ರಗಳನ್ನೂ , ಅವರ  ಬಗ್ಗೆ ಇನ್ನೂ  ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದು . 

    Ep111 - ಸೂರ್ಯ, ಚಂದ್ರ, ಮತ್ತು ಸಮುದ್ರಗಳ ಕತೆ

    Play Episode Listen Later Jan 24, 2021 5:12


    ಸೂರ್ಯ ಚಂದ್ರರು ಒಂದು  ಕಾಲದಲ್ಲಿ  ನಮ್ಮ  ನಿಮ್ಮ  ಥರ  ಭೂಮಿಯ ಮೇಲೆ ಇದ್ರಂತೆ . ! . ಆಶ್ಚರ್ಯ ಆಗುತ್ತಲ್ಲಾ ?  ಹೌದು , ಸೂರ್ಯ ಚಂದ್ರರು ಮನುಷ್ಯರ ಥರ  ಮನೆಯಲ್ಲಿ  ಇರ್ತಿದ್ರು ಅಂತ  ಆಫ್ರಿಕನ್ನರು  ನಂಬುತ್ತಾರಂತೆ .  ಹಾಗಾದ್ರೆ , ಈಗ್ಯಾಕೆ ಆಕಾಶದಲ್ಲಿ  ಇರ್ತಾರೆ ? ತಿಳಿಯೋಕೆ , ಈ ಕತೆ  ಕೇಳಿ . 

    Ep110 - ಸಿಡುಕ ಸಿದ್ದ ಹಾಗೂ ಗುಹೆಯ ಮನುಷ್ಯ

    Play Episode Listen Later Jan 10, 2021 13:51


    ಸಿಡುಕ ಸಿದ್ದನಿಗೆ ಸಿಟ್ಟು ಎಷ್ಟು ಜಾಸ್ತಿಯೋ ಪೆದ್ದುತನ ಸ್ವಲ್ಪ ಅದಕ್ಕಿಂತ ಜಾಸ್ತಿ.  ಈ ಕತೆಯಲ್ಲಿ ಸಿದ್ಧನಿಗೆ ಗುಹೆಯ ಮನುಷ್ಯನಿಂದ ಊಹಿಸಲಾರದಷ್ಟು ಐಶ್ವರ್ಯ ಸಿಕ್ಕರೂ, ಪಾಪ ಅದನ್ನು ಉಳಿಸಿಕೊಳ್ಳೋಲಾಗಲಿಲ್ಲ. ಹೇಗೆ, ಯಾಕೆ ಅನ್ನುವುದನ್ನು ಕತೆಯಲ್ಲಿ ಕೇಳೋಣ.   ನಮಗೆ ಎಷ್ಟು ಅನುಭವ ಇದೆಯೋ ಅಷ್ಟೇ ದಕ್ಕುವುದು ಅನ್ನುವುದಕ್ಕೆ ಈ ಕತೆ ಉತ್ತಮ ಉದಾಹರಣೆ.

    Repeat - ಪಾತ್ರೆ ಮರಿ ಇಟ್ಟ ಕತೆ

    Play Episode Listen Later Dec 27, 2020 6:40


    ಕೇಳಿರೊಂದು  ಕಥೆಯ  ಸರಣಿಯ  ಕತೆಗಳಲ್ಲಿ  ನಾಸ್ರುದ್ದೀನ್  ಹೊಡ್ಜಾನ ಕತೆಗಳು ಅತಿ  ಜನಪ್ರಿಯ.  2019 ರಲ್ಲಿ ಪ್ರಕಟವಾಗಿದ್ದ  ಈ ಕತೆಯ ಮರು  ಪ್ರಸಾರ .  ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ  ?  ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ  .   

    Ep109 - ಹಸು ಮತ್ತು ನೊಣ

    Play Episode Listen Later Dec 14, 2020 7:27


    ಹಸುಗಳಿಗೂ ಅವುಗಳ ಸುತ್ತ ಸದಾ ಜುಯ್ ಅಂತ ಸುತ್ತುವ ನೊಣಗಳಿಗೂ ಅದೇನೋ ವಿಚಿತ್ರ ಸಂಬಂಧ . ವೈಜ್ಞಾನಿಕವಾಗಿ ನೊಣಗಳಿಂದ ಕಣ್ಣಿನ ರೋಗ  ( Pink Eye ) ಬರುವುದು ಸಹಜವಾದರೂ ,  ಆಫ್ರಿಕಾದ ಜಾನಪದ ಕತೆಗಳ ಪ್ರಕಾರ ನೊಣಗಳು ತೊಂದರೆ ಕೊಡುವುದಕ್ಕೆ ಹಸುಗಳೇ ಕಾರಣವಂತೆ .  !  

    Ep108 - ಬಾವಲಿಗಳು ರಾತ್ರಿಯಷ್ಟೇ ಹೊರಗೇಕೆ ಬರುತ್ತವೆ?

    Play Episode Listen Later Nov 28, 2020 5:51


    ಬಾವಲಿ ( Bat ) ವಿಚಿತ್ರ  ಹಾಗೂ ಕುತೂಹಲಕಾರಿ ಜೀವಿ . ಅತ್ತ ಪ್ರಾಣಿಯೂ ಅಲ್ಲದೆ , ಇತ್ತ ಹಕ್ಕಿಯೂ ಅಲ್ಲದ ಬಾವಲಿ ರಾತ್ರಿ ಅಷ್ಟೇ ಹೊರ ಬರುತ್ತವೆ .  ವೈಜ್ಞಾನಿಕವಾಗಿ ಬಾವಲಿಗಳಿಗೆ ದೃಷ್ಟಿ ಅಷ್ಟು ಬಲವಾಗಿ ವೃದ್ಧಿಯಾಗಿಲ್ಲ , ಬದಲಾಗಿ Echo location , ಅಂದರೆ ಸೂಕ್ಷ್ಮ ಧ್ವನಿ  ತರಂಗಗಳ ನೆರವಿನಿಂದ ದಾರಿ , ಊಟ  ಹುಡುಕುತ್ತವೆ  . ನೂರಾರು ವರ್ಷಗಳ ಹಿಂದೆ ಆಫ್ರಿಕಾದ ಜನರಿಗೆ ಈ ಬಾವಲಿ ರಾತ್ರಿಯಷ್ಟೇ ಹೊರಗೇಕೆ ಬರುತ್ತದೆ ಅನ್ನುವ ಪ್ರಶ್ನೆಗೆ  ಸೊಗಸಾದ ಕತೆಯ ಮೂಲಕ ವಿವರಿಸಿದ್ದಾರೆ .   ಕೇಳೋಣ ಬನ್ನಿ .   

    [ ವಿಶೇಷ ] - ದೀಪಾವಳಿ ಹಬ್ಬ

    Play Episode Listen Later Nov 14, 2020 7:20


    ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಗೆಳೆಯರೇ .   ದೀಪಾವಳಿ ಭಾರತೀಯರಿಗೆ ವಿಶೇಷ ಹಬ್ಬ . ಈ ಹಬ್ಬದ ಹಿಂದೆ ಬಹಳಷ್ಟು ಉಪಕತೆಗಳಿವೆ .  ಈ ಕಂತಿನಲ್ಲಿ ಈ ಹಬ್ಬದ ಬಗ್ಗೆ  ಮೂರು ಕತೆಗಳನ್ನು  ಕೇಳೋಣ .    

    Ep107 - ಗುಡುಗು ಮತ್ತು ಸಿಡಿಲು

    Play Episode Listen Later Nov 1, 2020 6:40


    ಗುಡುಗು , ಸಿಡಿಲು ಮಳೆಗಾಲದಲ್ಲಿ ಸರ್ವೇ ಸಾಮಾನ್ಯ .  ಗುಡುಗು ಕೇಳುವ ಮೊದಲೇ ಸಿಡಿಲು ಕಾಣುವುದೂ ಸಾಮಾನ್ಯ .  ಆದರೆ , ಸಾವಿರಾರು ವರ್ಷಗಳ ಹಿಂದೆಯೇ  ಇದನ್ನು ಮನಗಂಡು ಗುಡುಗು , ಸಿಡಿಲಿನ ಸುತ್ತ ಹೆಣೆದಿರುವ ಈ ಕತೆ ,  ಸಿಡಿಲನ್ನು ಚೂಟಿ ಟಗರಿಗೂ ,  ಗೂಡುಗನ್ನು  ಮಗನನ್ನು ಸರಿ ಹಾದಿಗೆ  ತರುವ ಅಮ್ಮನಿಗೂ  ಹೋಲಿಸುವ  ಮೂಲಕ ಕೇಳುವುದಕ್ಕೆ  ವಿಶಿಷ್ಟ  ಅನುಭವ  ಕೊಡುತ್ತದೆ .  Thunder and Lightning are common phenomena. This folktale compare lightning to a mischievous Ram and the thunder as the mom that follows her son around scolding him for his mischiefs.  A unique story. 

    Ep106 - ಸುಳ್ಳು ಹೇಳದಿರುವ ಮನುಷ್ಯ

    Play Episode Listen Later Oct 18, 2020 6:23


    ಸುಳ್ಳು ಹೇಳುವುದು ಅಂದರೆ ಸಹಜ . ಅದರಲ್ಲೂ , ಕೆಲವರಿಗೆ ಸುಳ್ಳು ಹೇಳುವುದು ಚಟ ವಾಗಿ ಬಿಟ್ಟಿರುತ್ತದೆ . ಹಾಗಿರುವಾಗ , ಒಂದೂ ಸುಳ್ಳು ಹೇಳದೆ ಇರುವ  ಮನುಷ್ಯ  ಒಬ್ಬ  ಬದುಕಿದ್ದ  ಅಂದರೆ ಆಶ್ಚರ್ಯ  ಆಗುತ್ತೆ  ಅಲ್ವಾ ?  ಈ ಕತೆಯಲ್ಲಿ ಆ ಮನುಷ್ಯನನ್ನ  ಭೇಟಿ ಮಾಡೋಣ . ಅವನಿಂದ ಸುಳ್ಳು ಹೇಳಿಸೋಕೆ ಪಾಡು ಪಟ್ಟ ರಾಜನ ಬಗ್ಗೆಯೂ ಕೇಳೋಣ 

    Ep105 - ಸಿಂಹವನ್ನು ಸೋಲಿಸಿದ ತೋಳ ( ಉತ್ತರ ಕರ್ನಾಟಕ ಶೈಲಿ)

    Play Episode Listen Later Oct 11, 2020 6:48


    ಕಳೆದ  ವಾರ ಇದೇ  ಕತೆಯ ಸರಳ  ಗನ್ನಡ  ಅವತರಣಿಕೆ ( version ) ಅನ್ನು ಮಾಡಿದ್ದೆವು . ಈ ವಾರ , ಜೈರಾಜ್ ಗಲಗಲಿ ಅವರು ಈ ಕತೆಯನ್ನು ಉತ್ತರ ಕರ್ನಾಟಕ ಶೈಲಿ ಒಳಗ ಹೇಳಿದ್ದಾರೆ .  ನೀವೂ , ನಾವೂ ಕೇಳಿ  ಮಜಾ ತಗಳ್ಳೋಣಾಂತ ? ಏನಂತೀರಿ ? 

    Ep104 - ಸಿಂಹವನ್ನು ಸೋಲಿಸಿದ ತೋಳ

    Play Episode Listen Later Oct 4, 2020 6:23


    ಪಂಚತಂತ್ರದ ಕತೆಗಳಲ್ಲಿ ನರಿ ಬುದ್ದಿವಂತಿಕೆ  ಹಾಗೂ ಕಪಟತನಕ್ಕೆ ಹೆಸರುವಾಸಿ . ಆಫ್ರಿಕಾದ ಜಾನಪದ ಕತೆಗಳಲ್ಲಿ  ತೋಳಕ್ಕೆ ನರಿಯ ಸ್ಥಾನ .   ಈ ಕತೆಯಲ್ಲಿ ಹಿಂದೆ ತೋಳದಿಂದ ಆದ ಮೋಸ ಮರೆಯದ ಸಿಂಹಕ್ಕೆ ತೋಳ ಮತ್ತೆ ಸಿಕ್ಕಿ  ಬೀಳುತ್ತದೆ . ತೋಳ ಸಿಂಹದಿಂದ ಪಾರು ಹೇಗೆ ಆಗುತ್ತದೆ ಅನ್ನುವುದನ್ನು ಕೇಳೋಣ . 

    Ep103 - ಸೋರೆಕಾಯಿ ಮಕ್ಕಳು( The Calabash Kids )

    Play Episode Listen Later Sep 27, 2020 10:24


    ಆಫ್ರಿಕಾದಲ್ಲಿ  ತಮಟೆಯ ಆಕಾರದಲ್ಲಿರೋ ಸೋರೆಕಾಯಿ ಸಿಗುತ್ತದೆ . ಸೋರೆಕಾಯಿಯ ಉಪಯೋಗ ಕೂಡ  ಹತ್ತು  ಹಲವು  ರೀತಿಯಲ್ಲಿ .  ಅಡುಗೆಯಂತೂ  ಹೌದು , ಆದರೆ ಅಲ್ಲಿನ ಜನರು ಸೋರೆಕಾಯಿಯನ್ನು  ಒಣಗಿಸಿ , ತಿರುಳು ತೆಗೆದು , ಅದನ್ನು ನೀರು ತುಂಬುವ  ಬಿಂದಿಗೆಯಾಗಿ , ಸಾಮಗ್ರಿ  ತುಂಬಿಡುವ ಪಾತ್ರೆಯಾಗಿ ಉಪಯೋಗಿಸುತ್ತಾರೆ .  ಈ ಸೋರೆಕಾಯಿಯ ಬಗ್ಗೆ ಕೂಡ ಜನಪದ ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವೇ .   ಈ ಕತೆಯಲ್ಲಿ , ಮಕ್ಕಳಿಲ್ಲದ ಹೆಣ್ಣು ಮಗಳಿಗೆ ಸೋರೆಕಾಯಿಯ ಬೀಜಗಳಿಂದ ಮಕ್ಕಳು ಹುಟ್ಟಿದ  ರೋಚಕ ಕತೆ ಕೇಳೋಣ . 

    Ep102 - ಹಕ್ಕಿಗಳ ರಾಜ ಯಾರು ?

    Play Episode Listen Later Sep 20, 2020 9:20


    ಹಕ್ಕಿಗಳಿಗೆ ಸಿಂಹ ನಂತೆ ರಾಜ ಒಬ್ಬನಿದ್ದರೆ ಹೇಗಿರ್ತಿತ್ತು ಅನ್ನುವ ಪ್ರಶ್ನೆಯನ್ನು  ಕತೆಯ ರೂಪದಲ್ಲಿ ಸೊಗಾಸಾಗಿ ವಿವರಿಸುತ್ತದೆ  ಈ ಕತೆ 

    Ep101 - ಕತೆಗಳು ಹೇಗೆ ಹುಟ್ಟಿದವು?

    Play Episode Listen Later Sep 13, 2020 10:24


    ಆಫ್ರಿಕಾದ ಜಾನಪದ ಕತೆಗಳು ಮನುಷ್ಯ ತನ್ನ ಸುತ್ತ ಮುತ್ತಲಿನ ಪ್ರಾಣಿ , ಪಕ್ಷಿ , ಪರಿಸರವನ್ನು  ಅರ್ಥ ಮಾಡಿಕೊಂಡ  ಬಗೆಯನ್ನು  ತಮ್ಮದೇ ರೀತಿಯಲ್ಲಿ ಹಿಡಿದಿಡುತ್ತವೆ .   ಆದರೆ , ಈ ಕತೆಗಳು ಹೇಗೆ ಹುಟ್ಟಿದವು ಅನ್ನುವುದಕ್ಕೂ ಒಂದು ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ?  ಹೆಚ್ಚು ತಿಳಿಯಲು  ಈ ವಾರದ ಕತೆ ಕೇಳಿ . 

    Ep100 - ಅನಾಂಸಿ ಮತ್ತು ಮಾಯಾ ಮಡಿಕೆ

    Play Episode Listen Later Sep 6, 2020 6:16


    "ಆಫ್ರಿಕಾದ ಜಾನಪದ ಕತೆಗಳು " ಮಾಲಿಕೆಯಲ್ಲಿ ಈ ಕತೆ ಮೊದಲನೆಯದು . ಒಟ್ಟು ನಾವು ಮಾಡಿದ ಕತೆಗಳಲ್ಲಿ ಒಂದು ನೂರನೆಯದು ಕೂಡ .  ಮತ್ತೊಂದು ವಿಶೇಶ - ಈ ಕತೆ ಖ್ಯಾತ ಗಾಯಕಿ , ಕಲಾವಿದೆ ಶ್ರೀಮತಿ ಎಂ ಡಿ ಪಲ್ಲವಿ ಅವರ ನಿರೂಪಣೆ .    ಅನಾಂಸಿ ಅನ್ನುವ ಜೇಡರ ಹುಳು ಪ್ರಪಂಚದ ವಿವೇಕ , ಬುದ್ದಿ ಶಕ್ತಿಯನ್ನೆಲ್ಲ ಒಟ್ಟು ಮಾಡಿ ಮಡಿಕೆಯಲ್ಲಿ ಕೂಡಿಟ್ಟು ಕೊಂಡಾಗ ಆಗಿದ್ದೇನು ? ಮುಂದಿನದನ್ನು ಪಲ್ಲವಿಯವರ ದನಿಯಲ್ಲೇ ಕೇಳಿ . 

    Ep99 - ನಿದ್ರೆ ಬರದಿದ್ದ ರಾಜ

    Play Episode Listen Later Aug 29, 2020 12:47


    ಈ ಸಲದ ಕತೆ ಉತ್ತರ ಕರ್ನಾಟಕ ಶೈಲಿಯಲ್ಲಿ  ನಿರೂಪಿಸಿರುವ ರಾಜನೊಬ್ಬನ  ಕತೆ .  ರಾಜನಿಗೆ ಏನು ಮಾಡಿದರೂ ರಾತ್ರಿ  ನಿದ್ರೆ ಬರುತ್ತಿರಲಿಲ್ಲ .  ಎಷ್ಟೇ ಮದ್ದು , ಗುಳಿಗೆ  ತಿಂದರೂ , ವ್ರತ , ದಾನ ಮಾಡಿದರೂ ನಿದ್ರೆ ಮಾತ್ರ ದೂರವೇ  ಉಳಿದಿತ್ತು .  ಅಷ್ಟೆಲ್ಲ ಕಷ್ಟ ಪಟ್ಟರೂ ಗುಣವಾಗದ ರಾಜನ ನಿದ್ರೆ ಖಾಯಿಲೆಯನ್ನ   ಒಬ್ಬ ಸಾಮಾನ್ಯ ಮರ ಕಡಿಯುವವ ಗುಣ ಪಡಿಸಿದ್ದು ಹೇಗೆ . ?    "ಮಂಗ್ಯಾ , ಮೊಸಳಿ ಕತಿ " ಆದಮೇಲೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಿಸಿರುವ ಎರಡನೇ ಕತೆ ಇದು . 

    Repeat - ಶಮಂತಕ ಮಣಿಯ ಕತೆ

    Play Episode Listen Later Aug 22, 2020 11:08


    ಈ ಕಂತು ೨೦೧೯ ರ ಗಣೇಶ ಹಬ್ಬದ ಸಮಯದಲ್ಲಿ ಮಾಡಿದ ಕತೆ .   ಈ ವರ್ಷದ ಗೌರಿ ಗಣೇಶ ಹಬ್ಬಕ್ಕೆ ಶಮಂತಕ ಮಣಿಯ ಕತೆ . 

    Ep98 - ಸಿಂಹವನ್ನು ಸೋಲಿಸಿದ ಮೊಲದ ಕತೆ

    Play Episode Listen Later Aug 9, 2020 6:08


    ಏನು ? ಸಿಂಹದಂಥ  ಬಲಿಷ್ಠ  ಪ್ರಾಣಿ  ಎಲ್ಲಿ ? ಮೊಲದಂಥ  ಪೀಚು  ಪ್ರಾಣಿ  ಎಲ್ಲಿ ?  ಆದರೂ ಸಿಂಹದ ಶಕ್ತಿಯ ಮುಂದೆ ಮೊಲದ  ಯುಕ್ತಿಯೇ ಮೇಲಾಯಿತು .  ಒಂದೊಂದು ಸಲ ನಮ್ಮ  ಮುಂದೆ  ಕೆಟ್ಟದ್ದು  ನಡೆಯುತ್ತಿದ್ದರೂ , ಅಸಹಾಯಕರಾಗುವುದು ಸಹಜ . ಅದರಲ್ಲೂ ಎದುರಾಳಿ ಬಲಿಷ್ಠನಾಗಿದ್ದರಂತೂ , ಇನ್ನೇನು ಎಲ್ಲ ಮುಗಿದೇ ಹೋಯಿತು ಅನ್ನಿಸುವಾಗ , ಈ  ಕತೆ ಸ್ಫೂರ್ತಿ ಕೊಡುತ್ತದೆ . 

    Ep97 - ಟೋಪಿ ಮಾರುವವ ಹಾಗೂ ಮಂಗಗಳು

    Play Episode Listen Later Aug 2, 2020 5:23


    " ಟೋಪಿ ಬೇಕಾ ಟೋಪಿ " ಅಂತ  ಕೂಗುತ್ತಾ  ಬರುವ  ಟೋಪಿ ಮಾರುವವನ ಕತೆ  ಶಾಲೆಗಳಲ್ಲಿ ನಾಟಕದ ರೂಪದಲ್ಲೋ , ಪಠ್ಯದಲ್ಲೋ ನೋಡದವರು ಕಡಿಮೆ .  ಈಗ  ಈ ಕತೆಯನ್ನು ಈಗಿನ  ಪುಟಾಣಿಗಳೂ ಕೇಳಬಹುದು .  ಟೋಪಿ ಮಾರುವವನ ಟೋಪಿಗಳನ್ನು ಚೇಷ್ಟೆ ಮಂಗಗಳು ಹೊತ್ತುಕೊಂಡು ಮರದ   ಮೇಲೆ ಹತ್ತಿ ಕುಳಿತಾಗ ಟೋಪಿ ಮಾರುವವ  ವಾಪಸ್ ಪಡೆಯೋದಕ್ಕೆ ಏನೆಲ್ಲಾ ಸಾಹಸ  ಮಾಡಬೇಕಾಯ್ತು ಅನ್ನುವುದನ್ನು  ಈ ಕತೆ ತಿಳಿ  ಹಾಸ್ಯದೊಂದಿಗೆ ಹೇಳುತ್ತದೆ .     

    Ep96 - ಬಾಯಿಬಡುಕ ಆಮೆ ಮತ್ತು ಬಾತುಕೋಳಿಗಳು

    Play Episode Listen Later Jul 25, 2020 5:12


    ಮಾತು ಹಿತ , ಮಿತವಾಗಿರಬೇಕು ಅನ್ನುತ್ತಾರೆ .  ಜತೆಗೆ ಸಮಯೋಚಿತವಾಗಿರಬೇಕು ಕೂಡ .  ಸಲ್ಲದ  ಜಾಗದಲ್ಲಿ ಬೇಡ ಮಾತುಗಳಾಡಿದರೆ ತೊಂದರೆ ತಪ್ಪಿದ್ದಲ್ಲ ಅನ್ನುವುದಕ್ಕೆ ಈ ಕತೆ ಒಳ್ಳೆಯ ಉದಾಹರಣೆ .  ಸಹಾಯ ಬೇಕಾಗಿದ್ದ ಆಮೆಯೊಂದಕ್ಕೆ , ಬಾತುಕೋಳಿಗಳು ಸಹಾಯ ಮಾಡುವುದಕ್ಕೆ ಮೊದಲು ಒಂದು  ಷರತ್ತು ಹಾಕಿದವು .  ಆಮೇಲೆ ಏನಾಯ್ತು ಅನ್ನೋದನ್ನ ಕತೆಯಲ್ಲಿ  ಕೇಳಿ . 

    Ep95 - ಪಾರಿವಾಳ ಮತ್ತು ಇರುವೆಯ ಕತೆ

    Play Episode Listen Later Jul 19, 2020 4:17


    ಉಪಕಾರ ಮಾಡಿದವರನ್ನು ಇಂದಿಗೂ ಮರೆಯಬಾರದು ಅಂತ  ಗಾದೆಯ ಹಾಗೆ , ಪುಟ್ಟ ಇರುವೆಯೂ , ದೊಡ್ಡ ಪಾರಿವಾಳವೂ ಒಬ್ಬರಿಗೊಬ್ಬರು  ಉಪಕಾರ  ಮಾಡಿದ್ದು  ಹೇಗೆ . ? ಪುಟ್ಟ  ಇರುವೆಯಿಂದ  ದೊಡ್ಡ ಪಾರಿವಾಳಕ್ಕೆ ಆದ  ಉಪಕಾರವಾದರೂ ಏನು . ? ಬನ್ನಿ,  ಈ ಕತೆಯಲ್ಲಿ  ತಿಳಿದುಕೊಳ್ಳೋಣ . 

    Ep94 - ಚಿನ್ನದ ಮೊಟ್ಟೆಯ ಕತೆ

    Play Episode Listen Later Jul 12, 2020 3:24


    ಮೊಟ್ಟೆ ಇಡುವ ಕೋಳಿ , ಬಾತು ಕೋಳಿಯ ಬಗ್ಗೆ ಕೇಳಿರ್ತೀರ  , ಆದರೆ ಚಿನ್ನದ ಮೊಟ್ಟಿ ಇಡುವ ಬಾತು ಕೋಳಿಯ ಬಗ್ಗೆ ಕೇಳಿದ್ದೀರಾ ?   ಚಿನ್ನದ ಮೊಟ್ಟೆ ಇಡುವ  ಬಾತು ಕೋಳಿಯನ್ನು  ನೋಡಿ  ರೈತನ  ಹೆಂಡತಿ ಅಸೆ ಪಟ್ಟಿದ್ದೆ ಬೇರೆ , ಆದರೆ ಆದದ್ದೇ ಬೇರೆ .  ದುರಾಸೆ ಪಟ್ಟರೆ ದುಃಖ ತಪ್ಪಿದ್ದಲ್ಲ  ಅನ್ನುವುದಕ್ಕೆ ಈ ಕತೆ ಒಳ್ಳೆಯ  ಉದಾಹರಣೆ .       

    Ep93 - ಮರ ಕಡಿಯುವವನ ಕತೆ

    Play Episode Listen Later Jul 5, 2020 3:58


    ಈ ವಾರ ಮತ್ತೊಂದು ಜನಪ್ರಿಯ ಕತೆ " ಮರ ಕಡಿಯುವವನ ಕತೆ ". ಪಂಚತಂತ್ರದ ಕತೆಗಳು ಅಂದ ತಕ್ಷಣ ನೆನಪು ಬರುವ ಕತೆಗಳಲ್ಲಿ ಈ ಕತೆ ಪ್ರಮುಖವಾದದ್ದು .    ಪ್ರಾಮಾಣಿಕತೆ , ಸತ್ಯ ನಿಷ್ಠತೆ , ಸರಳತೆ ಅಂತಹ ಗುಣಗಳು ಈ ಕತೆಯಲ್ಲಿ ವಿಶೇಷವಾಗಿ ಕಾಣಸಿಗುತ್ತವೆ . 

    Ep92 – ತೋಳ ಮತ್ತು ಮೇಕೆ ಮರಿಯ ಕತೆ

    Play Episode Listen Later Jun 28, 2020 4:03


    ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು .   ತೋಳ ಹೆದರಿ ಓಡಿದ್ದು  ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ

    Ep92 - ತೋಳ ಮತ್ತು ಮೇಕೆ ಮರಿಯ ಕತೆ

    Play Episode Listen Later Jun 28, 2020 4:03


    ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು .   ತೋಳ ಹೆದರಿ ಓಡಿದ್ದು  ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ .     

    Ep91 - ಆಮೆ ಮತ್ತು ಮೊಲದ ಕತೆ

    Play Episode Listen Later Jun 20, 2020 7:05


    ಇಂದಿನ ಸಂಚಿಕೆಯಲ್ಲಿ ಜನಪ್ರಿಯ ಕತೆ "ಆಮೆ ಮತ್ತು ಮೊಲ "ದ ಕತೆ .   ಪ್ರಪಂಚದ ನಾನಾ ಭಾಷೆಗಳಲ್ಲಿ ಹೇಳಪಡುವ ಈ ಕತೆ ಮಕ್ಕಳಿಂದ ದೊಡ್ಡವರ ತನಕ ಎಲ್ಲರೂ ಕೇಳಿ ಖುಷಿ ಪಡಬಹುದಾದದ್ದು .  ನೀವೂ ಕೇಳಿ , ಬೇರೆಯವರಿಗೂ ತಿಳಿಸಿ .  ಕತೆಯನ್ನು ಕೇಳುವ ಅನುಭವವನ್ನು ಇನ್ನಷ್ಟು ಹೆಚ್ಚುಗೊಳಿಸಲು , ಈ ಕತೆ ಇರುವ ಪುಸ್ತಕವನ್ನು  ಮಕ್ಕಳಿಗೆ ಓದಿ ಹೇಳಿ . ನಂತರ , ನಮ್ಮ ವೆಬ್ಸೈಟ್ ನಲ್ಲಿರುವ ಚಿತ್ರ ಪುಟಗಳನ್ನು ಇಳಿಸಿಕೊಂಡು ಬಣ್ಣ ಹಚ್ಚಿ ಖುಷಿ ಪಡಿ .   

    Ep90-ನರಿ ಮತ್ತು ಡೊಳ್ಳು

    Play Episode Listen Later Jun 14, 2020 5:55


    ನರಿ ಮತ್ತು ಡೊಳ್ಳು, ಪಂಚತಂತ್ರದ ಜನಪ್ರಿಯ ಕತೆಗಳಲ್ಲೊಂದು . ಕಾಡಿನಲ್ಲಿ ಬರುತ್ತಿದ್ದ ಸದ್ದು ಯಾವುದೋ ಭಯಂಕರ ಪ್ರಾಣಿಯದೇ ಇರಬೇಕು ಅಂತ ಹೆದರಿಕೆಯಿಂದ ಹೆಜ್ಜೆಯಿಡುತ್ತಿದ್ದ ನರಿಗೆ ಡೊಳ್ಳು ನೋಡಿ ಇಷ್ಟೇನಾ ಅಂತ ಅನ್ನಿಸಿತು . ಆದರೆ , ಡೊಳ್ಳು ಬಡಿಯುತ್ತಿದ್ದವರು ಯಾರು ? ತಿಳಿಯಲು ಕತೆ ಕೇಳಿ      

    Ep90-ನರಿ ಮತ್ತು ಡೊಳ್ಳು

    Play Episode Listen Later Jun 13, 2020 5:56


    ನರಿ ಮತ್ತು ಡೊಳ್ಳು, ಪಂಚತಂತ್ರದ ಜನಪ್ರಿಯ ಕತೆಗಳಲ್ಲೊಂದು . ಕಾಡಿನಲ್ಲಿ ಬರುತ್ತಿದ್ದ ಸದ್ದು ಯಾವುದೋ ಭಯಂಕರ ಪ್ರಾಣಿಯದೇ ಇರಬೇಕು ಅಂತ ಹೆದರಿಕೆಯಿಂದ ಹೆಜ್ಜೆಯಿಡುತ್ತಿದ್ದ ನರಿಗೆ ಡೊಳ್ಳು ನೋಡಿ ಇಷ್ಟೇನಾ ಅಂತ ಅನ್ನಿಸಿತು . ಆದರೆ , ಡೊಳ್ಳು ಬಡಿಯುತ್ತಿದ್ದವರು ಯಾರು ? ತಿಳಿಯಲು ಕತೆ ಕೇಳಿ      

    Ep89 - ಇನಿ ದನಿ - ಭಾಗ ನಾಲ್ಕು

    Play Episode Listen Later Jun 7, 2020 7:48


    " ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ತಾಯಿ ಶಾರದೆ " ಎಂಬ ಪದ್ಯ ,  "ಸರಕಾರೀ ಕನ್ನಡ ಶಾಲೆಯ " ಬಗ್ಗೆ  ಒಂದು ಪುಟ್ಟ  ಕತೆ , ಹಾಗೂ ಕೊನೆಯಲ್ಲಿ ಒಂದು ಸಂಭಾಷಣೆ. "ಅಯ್ಯೋ , ಸರಕಾರೀ ಶಾಲೆಯೇ ? ಅಲ್ಲೇನಿದೆ ? ಅಲ್ಲಿಗೆ ಯಾಕೆ ಮಕ್ಕಳನ್ನು ಕಳಿಸಬೇಕು ?" ಅನ್ನುವ ಈಗಿನ ಪರಿಸ್ಥಿತಿಯಲ್ಲಿ ಈ  ಶಾಲೆಯ ಮಕ್ಕಳು ತೋರಿಸಿರುವ ಕ್ರಿಯಾತ್ಮಕ ಶಕ್ತಿ , ಪ್ರತಿಭೆ ಈ ಆಡಿಯೋ ಸರಣಿಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ .   "ಎಲ್ಲಾ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಇದ್ದರೆ  ಎಷ್ಟು ಚಂದ ? " ಅನ್ನುವ  ಪ್ರತಿಕ್ರಿಯೆಗಳು ಬಹಳಷ್ಟು ಬಂದಿವೆ .  ಈ ಕಂತು , "ಇನಿ ದನಿ " ಸರಣಿಯ ಕೊನೆಯ  ಕಂತು . ನಡೆಸಿಕೊಟ್ಟ ಎಲ್ಲಾ ಮಕ್ಕಳಿಗೂ , ಶಿಕ್ಷಕರಿಗೂ ಅಭಿನಂದನೆಗಳು .   

    Ep88 - ಇನಿ ದನಿ - ಭಾಗ ಮೂರು

    Play Episode Listen Later May 30, 2020 9:00


    " ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ಮಂಗಳ ಗ್ರಹದಲ್ಲಿ ಪುಟ್ಟಿ " ಎಂಬ ಪದ್ಯ , "ಗಂಧರ್ವ  ಸೇನಾ " ಅನ್ನುವ ಹಾಸ್ಯ ನಾಟಕ  ನಡೆಸಿಕೊಡುತ್ತಾರೆ .  ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಹಾಗೂ ಮುದ್ದಾದ ಕಾವ್ಯ ವಾಚನ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ .   

    Ep87 - ಇನಿ ದನಿ - ಭಾಗ ಎರಡು

    Play Episode Listen Later May 16, 2020 10:58


    " ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ "ಬೆಣ್ಣೆ  ಕರಗಿತು " ಅನ್ನುವ ನಾಟಕ ನಡೆಸಿಕೊಡುತ್ತಾರೆ . ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ .  ಕದ್ದು ತಂದ ಬೆಣ್ಣೆಯ ಸಲುವಾಗಿ ಜಗಳವಾಡುತ್ತಿದ್ದ ಎರಡು ಬೆಕ್ಕುಗಳಿಗೆ ಚಳ್ಳೆಹಣ್ಣು ತಿನಿಸುವ ಯೋಜನೆ ಮಾಡಿದ ಮಂಗಪ್ಪ ತಾನೇ ಪೇಚಿಗೆ ಸಿಕ್ಕಿದ  ಈ ಕತೆ ಕೇಳೋಕೆ ಬಲು ಮೋಜು .     

    Claim Kelirondu Katheya ಕೇಳಿರೊಂದು ಕಥೆಯ

    In order to claim this podcast we'll send an email to with a verification link. Simply click the link and you will be able to edit tags, request a refresh, and other features to take control of your podcast page!

    Claim Cancel