The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಗೋವಿನಿಂದ ಹಾಲನ್ನು ಪ್ರೀತಿ, ವಾತ್ಸಲ್ಯದಿಂದ ಪಡೆಯಬೇಕೇ ಹೊರತು ಯಂತ್ರಗಳಿಂದ ಕರೆಯಬಾರದು*ತುಪ್ಪ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸುವುದು ವಿಷಕಾರಿ*ಇಂದಿನ ಸಂಕರ ತಳಿಯ ಹಸುಗಳು ಪವಿತ್ರ ಹಾಗೂ ಅಪವಿತ್ರಗಳ ಮಿಶ್ರಣ, ಅವುಗಳಿಂದ ದುಷ್ಪರಿಣಾಮವೇ ಹೆಚ್ಚು*ದೇಸಿ ಗೋವು ನಿರಾಭರಣ ಸುಂದರ; ಅದರ ಬಣ್ಣ, ಸುಗಂಧ, ಸ್ಪರ್ಶದ ಹಿತ ಎಲ್ಲವೂ ನೈಸರ್ಗಿಕ*ಮನುಷ್ಯ ತನ್ನ ಮನಸ್ಸಿಗೆ ಬಂದಹಾಗೆ ಸೃಷ್ಟಿಯಲ್ಲಿ ಬದಲಾವಣೆ ಮಾಡಲು ಹೊರಟಾಗ, ಆಗುವುದೆಲ್ಲವೂ ಅನರ್ಥಕ್ಕೆ ಕಾರಣವಾಗುತ್ತದೆ*ದೇಸಿ ಗೋವು, ಎಮ್ಮೆ ಮತ್ತು ಮಿಶ್ರತಳಿಯ ಹಸುವಿನ ತುಪ್ಪಗಳಿಗೆ ಏನೆಲ್ಲಾ ವ್ಯತ್ಯಾಸಗಳಿವೆ?*ಆಧುನಿಕ ವಿಜ್ಞಾನವು ದೇಸಿ ಗೋವಿನ ಹಾಲನ್ನು A2 ಮತ್ತು ಮಿಶ್ರತಳಿ ಹಸುವಿನ ಹಾಲನ್ನು A1 ಎಂಬುದಾಗಿ ಹೇಗೆ ವಿಂಗಡಿಸಿದೆ?*ಶುದ್ಧ ದೇಸಿ ಗೋವಿನ ತುಪ್ಪವು ಕ್ಯಾನ್ಸರ್ ನಿರೋಧಕ ಗುಣವನ್ನು ಹೊಂದಿದೆ*ಆಧುನಿಕ ಕ್ರಮದ ತುಪ್ಪ ಪ್ರಾಣಿಜನ್ಯ ಕೊಬ್ಬು ಮಾತ್ರ, ಅದನ್ನು "ಘೃತ" ಎಂದು ಪರಿಗಣಿಸಲು ಸಾಧ್ಯವಿಲ್ಲ!*ಜನನದಿಂದ ಮರಣದವರೆಗೆ ಘೃತದ ಬಳಕೆ ಇದೆ!*ತುಪ್ಪ ಬೆಲೆಕಟ್ಟಲಾಗದ ಅನರ್ಘ್ಯ ರತ್ನ!26-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ದೇವತೆಗಳ ಧಾಮಕ್ಕೆ ನಾವು ಅಂತರ್ಮಾರ್ಗದ ಮೂಲಕ ಹೋಗಿ ಸೇರಬೇಕು ಅದೇ "ಸಾಧನೆ"*ಭಗವಂತ ಘೃತದ ಮೂಲಕ ನಾವು ಸಮರ್ಪಿಸಿದ್ದನ್ನು ಸ್ವೀಕರಿಸುತ್ತಾನೆ*ಘೃತವು ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ*ಘೃತವು ಪಾಪನಾಶಕ; ಪಾಪ ನಾಶವೇ ಸಾಧನೆ!*ಘೃತವು ಸಾಧಕನಿಗೆ ತಂಪನ್ನು ಕೊಟ್ಟು, ಅಗ್ನಿ ವೃದ್ಧಿಯನ್ನು ಮಾಡುತ್ತದೆ*ಸಾಧನೆಯಲ್ಲಿ ಶರೀರ ಸ್ಥಿರವಾಗಿರಬೇಕು ಹಾಗೂ ಮನಸ್ಸು ಏಕಾಗ್ರವಾಗಿರಬೇಕು*ಮುಗ್ಧ ಮಗುವಿನ ನಗು ~ ಮಹಾಯೋಗಿಯ ನಗು ಎರಡಕ್ಕೂ ವ್ಯತ್ಯಾಸವಿಲ್ಲ, ಅದು ಪರಿಶುದ್ಧ! *ಆತ್ಮಸಾಧನೆ, ಸಿದ್ಧಿ ಆದಮೇಲೆ ಪ್ರಪಂಚಕ್ಕೆ ಒಳಿತನ್ನು ಹಂಚಬೇಕು*"ತುಪ್ಪ" ~ ದೇವರನ್ನು ತೋರಿಸುವ ಗುರು, ಅದರಲ್ಲಿ ಅನಂತ ಗುಣಗಳಿವೆ! *ಆಹಾರವಾಗಿ, ಪಾಪಹರ ದ್ರವ್ಯವಾಗಿ, ಸಾಧಕನಿಗೆ ಸಾಧನೆಗೆ ಬೇಕಾಗುವ ಎಲ್ಲಾ ಅನುಕೂಲಗಳನ್ನು ಒದಗಿಸಿಕೊಡುವ ಭಗವದನುಗ್ರಹ ದ್ರವ್ಯವೇ ~ "ಘೃತ"25-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಗುಜರಾತಿನ ಕಾಮನಾಥ ಮಹಾದೇವ ಮಂದಿರದಲ್ಲಿ 650 ವರ್ಷದ ಹಳೆಯ ಘೃತವಿದೆ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ!*ಪೂರ್ಣಾರೋಗ್ಯವೇ ಆತ್ಮಜಾನ!*ಜೀವನ ನಡೆಸಲು ಪಾರಂಪರಿಕವಾಗಿ ಏನೆಲ್ಲಾ ಹೇಳಲ್ಪಟ್ಟಿದೆಯೋ ಅದೆಲ್ಲವೂ ಆತ್ಮಜ್ಞಾನಕ್ಕೂ ಹಿತ, ಆರೋಗ್ಯಕ್ಕೂ ಹಿತ*ತುಪ್ಪ ಸೇವನೆ ಮಾಡುವಾಗ ಆರೋಗ್ಯ, ಆತ್ಮಜ್ಞಾನದ ಸಂಕಲ್ಪ ದೃಢವಾದರೆ ಅದರ ಫಲ ಹೆಚ್ಚು*ತುಪ್ಪದ ನಿರ್ಮಲತೆ, ಪಾರದರ್ಶಕ ರೂಪ, ಸುಗಂಧ, ಬಣ್ಣ ಇವೆಲ್ಲವೂ ಪರಮಾತ್ಮನ ಗುಣಗಳನ್ನು ನೆನಪಿಸುತ್ತವೆ*ಹಾಲು ಮತ್ತು ತುಪ್ಪವನ್ನು ಸತ್ತ್ವಗುಣದ ದ್ರವರೂಪ ಎನ್ನಬಹುದು; ಅದು ಪರಮ ಸಾತ್ತ್ವಿಕ, ಹಾಗಾಗಿ ಸಮೃದ್ಧವಾಗಿ ಉಪಯೋಗಿಸಬೇಕು*ಹಾಲು ಮತ್ತು ತುಪ್ಪವನ್ನು ಇತರ ಸತ್ತ್ವ ಪದಾರ್ಥದೊಂದಿಗೆ ಬೆರೆಸಬೇಕೇ ವಿನಃ ರಜಸ್ಸು, ತಮ್ಮಸ್ಸು ಗುಣಗಳುಳ್ಳ ಪದಾರ್ಥದೊಂದಿಗೆ ಸೇರಿಸಬಾರದು*ಯೋಗಿಗಳು ಹಿಮಾಲಯದಲ್ಲಿ ಸಾಧನೆ ಮಾಡಲು ಪ್ರಮುಖ ಕಾರಣವೇನು?*ಆತ್ಮಸಾಧನೆಗೆ ಪೂರಕವಾಗಿ ತುಪ್ಪವು ಹೇಗೆಲ್ಲಾ ಉಪಯೋಗವಾಗುತ್ತದೆ?24-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಎಳ್ಳೆಣ್ಣೆಯಲ್ಲಿರುವ ಉತ್ತಮ ಗುಣಗಳು ಬೇರೆ ಎಣ್ಣೆಯಲ್ಲಿ ಇಲ್ಲ!*ಜಿಡ್ಡಿನ ಅಂಶ ಇರುವ ಪದಾರ್ಥಗಳಲ್ಲಿ 'ತುಪ್ಪ' ಅತ್ಯುತ್ಕೃಷ್ಟ!*ಪನ್ನೀರ್'ಗೆ ನಮ್ಮ ಪೂರ್ವಜರು ನೀಡಿದ ಹೆಸರು 'ಕಿಲಾಟ', ಇದು ಎಲ್ಲರಿಗೂ ಪ್ರಿಯ ಆದರೆ ಹೆಚ್ಚಿನ ಸ್ಥಾನದಲ್ಲಿ ಹಿತವಲ್ಲ*ಹಾಲಿನಿಂದ ಬರುವ ಅನೇಕ ಉತ್ಪನ್ನಗಳಲ್ಲಿ 'ಘೃತ'ವು ಎಲ್ಲಕ್ಕಿಂತ ಉತ್ತಮ!*ತುಪ್ಪ ಹಳತಾದಂತೆ ಅದರ ಗುಣ ಹೆಚ್ಚಾಗುತ್ತಾ ಹೋಗುತ್ತದೆ*ನೂರು ವರ್ಷ ಕಳೆದ ತುಪ್ಪ ~ ಕುಂಭಸರ್ಪಿ; ನೂರಾಹನ್ನೊಂದು ವರ್ಷ ಕಳೆದ ತುಪ್ಪ ~ ಮಹಾಘೃತ! *ಒಂದು ವರ್ಷ ಕಳೆದ ತುಪ್ಪ ತ್ರಿದೋಷವನ್ನು ದೂರ ಮಾಡುತ್ತದೆ; ಹತ್ತು ವರ್ಷ ಕಳೆದ ತುಪ್ಪವು ಮುಪ್ಪನ್ನು ತಡೆಯುತ್ತದೆ*ದೇಹದಲ್ಲಿ ಸಂಗ್ರಹವಾದ ದೋಷಗಳನ್ನು ಹಳತಾದ ತುಪ್ಪವು ಹೊರಹಾಕುತ್ತದೆ!*ದೇಹದ ಅನಗತ್ಯ ಕೊಬ್ಬನ್ನು (Cholesterol) ತುಪ್ಪ ತೆಗೆಯುತ್ತದೆ!*ಏನಾದರೂ ಕಾಯಿಲೆ ಬಂದರೆ ಸ್ವಯಂ ವೈದ್ಯ ಆಗಬಾರದು, ಅದು ಅಪಾಯಕಾರಿ! *ತುಪ್ಪ ಎನ್ನುವುದು ಭೌತಿಕ ದ್ರವ ಮಾತ್ರವಲ್ಲ, ಅದು ದೇವತಾ ಸ್ವರೂಪ! *ತುಪ್ಪದ ಮಹತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು*ತುಪ್ಪವನ್ನು ಹೇಗೆ ಉಳಿಸಬೇಕು, ಬಳಸಬೇಕು, ಗಳಿಸಬೇಕು ಎನ್ನುವ ತಿಳುವಳಿಕೆ ಮುಂದಿನ ಪೀಳಿಗೆಗೆ ತಲುಪಬೇಕು23-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*'ತುಪ್ಪ' ಸ್ಮೃತಿ, ಬುದ್ಧಿ, ಅಗ್ನಿ, ಶುಕ್ರ, ಓಜಸ್ಸು, ಕಫ ಮತ್ತು ಮೇದಸ್ಸನ್ನು ವರ್ಧನಗೊಳಿಸಿ ~ ವಾತ, ಪಿತ್ತ, ವಿಷ, ಉನ್ಮಾದ, ಅಲಕ್ಷ್ಮೀ, ಜ್ವರ ಇವುಗಳನ್ನ ಕಡಿಮೆ ಮಾಡುತ್ತದೆ *ತುಪ್ಪ ಸೇವನೆಯು ನಮ್ಮ ಶರೀರದಲ್ಲಿ ನಿರ್ವಿಶೀಕರಣಕ್ಕೆ (detoxification) ಸಹಾಯ ಮಾಡುತ್ತದೆ*ದೇಹಕ್ಕೆ ಬಣ್ಣವನ್ನು, ಸ್ವರಕ್ಕೆ ಮಾಧುರ್ಯವನ್ನು ಕೊಡುವ ಗುಣ ತುಪ್ಪದಲ್ಲಿ ಇದೆ*ತುಪ್ಪದ ದೀಪ ಹಾಗೂ ಎಣ್ಣೆ ದೀಪಕ್ಕೆ ಇರುವ ವ್ಯತ್ಯಾಸವೇನು?*ತುಪ್ಪ ಕಣ್ಣಿಗೆ ಒಳ್ಳೆಯದು*ಗೋಹತ್ಯೆಯ ಮೂಲ ~ ಗೋಮಹತಿಯ ಅರಿವು ಇಲ್ಲದಿರುವುದು!*ಸಣ್ಣ ಮಕ್ಕಳಿಂದ ~ ವೃದ್ಧರವರೆಗೆ ಎಲ್ಲರೂ ತುಪ್ಪ ಸೇವನೆ ಮಾಡಬೇಕು! *ಪರಾನ್ನ ಭೋಜನ ಮಾಡಬಾರದು!;ಎಲ್ಲಿಯಾದರೂ ಪರಾನ್ನ ಭೋಜನ ಮಾಡುವ ಸಂದರ್ಭ ಬಂದರೆ ಅನ್ನಕ್ಕೆ ತುಪ್ಪದ ಅಭಿಗಾರ ಮಾಡಿದರೆ ಅಂತಹ ಅನ್ನವನ್ನು ಸ್ವೀಕರಿಸಬಹುದು, ತುಪ್ಪವು ದೋಷಗಳನ್ನು ದೂರ ಮಾಡುತ್ತದೆ*ಸದ್ಯೋಘೃತ ಎಂದರೇನು, ಅದು ಏಕೆ ಉತ್ತಮ? *ತುಪ್ಪ ರುಚಿಯನ್ನು ಕೊಡುತ್ತದೆ*ಘೃತವು ಸರ್ವ ಸ್ನೇಹೋತ್ತಮ!22-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಗೋವು ಉತ್ಕೃಷ್ಟವಾಗಿದ್ದರೆ, ಅದರ ತುಪ್ಪವು ಅಮೃತವಾಗುತ್ತದೆ*ಹಸು ಮತ್ತು ಎಮ್ಮೆ ಎರಡಕ್ಕೂ ಎಷ್ಟು ವ್ಯತ್ಯಾಸ ಇದೆಯೋ ಅಷ್ಟೇ ವ್ಯತ್ಯಾಸ ದೇಸಿ ಗೋವು ಮತ್ತು ವಿದೇಶದ ಮಿಶ್ರತಳಿಯ ಹಸುವಿಗೆ ಇದೆ *ಮನುಷ್ಯನ ವಿಕೃತಿಯಿಂದ ಗೋವು ಗೋವಾಗಿ ಉಳಿದಿಲ್ಲ!*ಹಾಲನ್ನು ಮಣ್ಣು, ಕಂಚು, ತಾಮ್ರದ ಪಾತ್ರೆಯಲ್ಲಿ ಹದವಾದ ಬೆಂಕಿ ಉರಿಯಲ್ಲಿ ಕಾಯಿಸಬೇಕು*ಕೆನೆಯಿಂದ ಮಾಡಿದ ತುಪ್ಪದ ಸಂಸ್ಕಾರ ಸರಿಯಲ್ಲ!*ಮಿಶ್ರತಳಿಯ ಗೋವಿನ ತುಪ್ಪ ಅಥವಾ ಕೆನೆಯಿಂದ ಮಾಡಿದ ತುಪ್ಪವು ಕೇವಲ ಕೊಬ್ಬಿನಿಂದ ತುಂಬಿದೆ ವಿನಃ ಅದಕ್ಕೆ ದೇಸಿ ಗೋವಿನ ತುಪ್ಪದ ಗುಣಗಳಿಲ್ಲ*ಹಾಲು ಮತ್ತು ನೀರನ್ನು ಎಷ್ಟು ಸಲ ಬೇಕಾದರೂ ಕಾಯಿಸಬಹುದು ಆದರೆ ಅನ್ನ, ಸಾರು ಇತರೆ ಪದಾರ್ಥಗಳನ್ನು ಎರಡನೆಯ ಸಲ ಬೇಯಿಸಬಾರದು!*ಗೋಘೃತವು ಯಾವ ಗುಣಗಳನ್ನು ಹೆಚ್ಚು ಮಾಡಿ ಯಾವುದೆಲ್ಲವನ್ನು ಕ್ಷಯಿಸುತ್ತದೆ?21-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಮಗೆ ಆಶೀರ್ವಾದ ಮಾಡಿ ಭಗವಂತ ಕೊಟ್ಟಿರುವುದೇ 'ಘೃತ'!*ಗಂಗೆ ಮತ್ತು ಗೋವು ಎರಡೂ ಮನುಷ್ಯರ ಉದ್ಧಾರಕ್ಕಾಗಿ ಇರುವಂತಹದ್ದು*ಸಾತ್ತ್ವಿಕ ವಸ್ತುಗಳನ್ನು ಉಪಯೋಗ ಮಾಡದೇ ಇದ್ದಾಗ ಪ್ರಕೃತಿ ಅದನ್ನು ಹಿಂದೆ ತೆಗೆದುಕೊಳ್ಳುತ್ತದೆ*ಗೃಹಸ್ಥನಾದವನು 'ತುಪ್ಪ' ಇಲ್ಲದ ಊಟವನ್ನು ಸ್ವೀಕಾರ ಮಾಡಬಾರದು!*'ತುಪ್ಪ' ಪಾಪ ಪರಿಹಾರ ಮಾಡುತ್ತದೆ ಹಾಗೂ ಅಗ್ನಿ, ಬುದ್ಧಿ ಎರಡನ್ನೂ ವೃದ್ಧಿ ಮಾಡುತ್ತದೆ *"ಘೃತ" ಅಮೃತಕ್ಕೆ ಸಮಾನ! *ಮಜ್ಜಿಗೆ ಅನೇಕ ರೋಗಗಳಿಗೆ ಔಷಧ *ತಂಪುಪೆಟ್ಟಿಗೆಯಲ್ಲಿ ಇಟ್ಟು ಸಂಸ್ಕಾರ ಮಾಡಿದ ತುಪ್ಪವನ್ನು ಸ್ವೀಕಾರ ಮಾಡಿದರೆ ನಾನಾ ರೋಗಗಳಿಗೆ ಕಾರಣವಾಗುತ್ತದೆ *ತುಪ್ಪದ ಸುಗಂಧವು ಸತ್ತ್ವಗುಣವನ್ನು ಜಾಗೃತಗೊಳಿಸಿ ಮನಸ್ಸಿಗೆ ಆಹ್ಲಾದ ಉಂಟುಮಾಡುತ್ತದೆ*ತುಪ್ಪದಿಂದ ಓಜಸ್ಸು, ಆಯಸ್ಸು, ತೇಜಸ್ಸು, ವಯಸ್ಸು, ತಪಸ್ಸು ಎಲ್ಲವನ್ನೂ ಪಡೆಯಬಹುದು20-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವೇದದಲ್ಲಿ ಮಳೆಯ ನೀರಿನ ಬಗ್ಗೆ ಏನು ಉಲ್ಲೇಖವಿದೆ?*ಯಜ್ಞದ ಅಂತ್ಯದಲ್ಲಿ ಮಳೆ ಬಂದರೆ ಶುಭ ಎಂದರ್ಥ*ಹುಣ್ಣಿಮೆ ರಾತ್ರಿಯ ಚಂದ್ರನ ಕಿರಣಗಳು ಬಿದ್ದ ನೀರು ಸೇವನೆಗೆ ಉತ್ತಮ!*ಬದುಕಲು ಬೇಕು "ಜಲ", ಬದುಕು ಸಾರ್ಥಕವಾಗಲು ಬೇಕು "ಘೃತ"!*ಧರ್ಮಶಾಸ್ತ್ರದ ಪ್ರಕಾರ ತುಪ್ಪವಿಲ್ಲದೆ ಊಟವನ್ನೇ ಮಾಡಬಾರದು, ತುಪ್ಪ ಅನಿವಾರ್ಯ ಮತ್ತು ಅತ್ಯವಶ್ಯ! *ಬಲ ಮತ್ತು ಆರೋಗ್ಯವನ್ನು ವೃದ್ಧಿಸಿಕೊಳ್ಳಲು ತುಪ್ಪವನ್ನು ಹೇಗೆ ಉಪಯೋಗಿಸಬೇಕು?*ಬೆಳಿಗ್ಗೆ ಎದ್ದು ತುಪ್ಪದಲ್ಲಿ ಮುಖವನ್ನು ನೋಡಿಕೊಂಡರೆ ಬದುಕು ಮಂಗಲವಾಗುತ್ತದೆ ಮತ್ತು ದೀರ್ಘವಾಗುತ್ತದೆ*ಗೋವು ಸೃಷ್ಟಿಯ ಸಾರ, ಕ್ಷೀರ ಗೋವಿನ ಸಾರಕೆನೆಮೊಸರು-ಬೆಣ್ಣೆಗಳು ಗೋಕ್ಷೀರಸಾರಸಾರಗಳ ಸಾರ ಘೃತವಾ ಮಂಗಲದ್ರವದಿಪ್ರತಿಫಲಿಸಿ ನೀನಪ್ಪೆ ಮಂಗಲಾಕಾರಶುದ್ಧ ತುಪ್ಪದಿ ಮುಖವ ನೋಡಿಕೊಳೊ ನೀನೆದ್ದುಚಿರಜೀವನಕೆ ನೋಡು ಸರಳ ಮಾರ್ಗವಿದುನಿನ್ನ ಮುಖ ನಿನಗೆ ಶುಭ, ಸರ್ವ-ಮಂಗಲವಾಜ್ಯಉಭಯಶುಭ ಸೇರೆ ದಿನ ಪರಮ ಶುಭವಹುದು-ಶ್ರೀಕಾವ್ಯ*ಗೋವು ಕೊಡುವುದೆಲ್ಲವೂ ಪರಮ ಶುಭ, ಗೋವಿನ ತ್ಯಾಜ್ಯವೂ ಕೂಡ ನಮಗೆ ಪೂಜ್ಯವಾಗುತ್ತದೆ!*ಜಗತ್ತಿನ ಎಲ್ಲಾ ಸಂಗತಿಗಳು ಸಮಯ ಕಳೆದಂತೆ ಕ್ಷೀಣವಾಗುತ್ತದೆ, ಆದರೆ ಗೋಘೃತ ಮಾತ್ರ ಸಮಯ ಕಳೆದಂತೆ ಗುಣವೃದ್ಧಿಯನ್ನು ಹೊಂದುತ್ತದೆ!19-09-2026ಅಶೋಕೆ, ಗೋಕರ್ಣ

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ತಣ್ಣೀರು, ಕಾದಾರಿದ ನೀರು ಮತ್ತು ಬಿಸಿನೀರನ್ನು ಯಾವಾಗ ಕುಡಿಯಬೇಕು, ಎಷ್ಟು ಕುಡಿಯಬೇಕು ಮತ್ತು ಯಾವಾಗ ಕುಡಿಯಬಾರದು?*ಕಲ್ಲು ಸಕ್ಕರೆ ಬೆರೆತ ನೀರು ದೇಹದ ಮೂರೂ ದೋಷಗಳನ್ನು ಸರಿಯಾಗಿಸುತ್ತದೆ*ಅನ್ನದಾನ, ಜಲದಾನ ಮತ್ತು ಕಾಯಿಲೆ ಗುಣಪಡಿಸುವ ವೈದ್ಯವೃತ್ತಿ - ಈ ಮೂರು ಪುಣ್ಯದ ಕೆಲಸ ಮನುಷ್ಯನನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತದೆ*ಪಾಪ ಪರಿಹಾರಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವಾಗ ಪಶ್ಚಾತ್ತಾಪ ಅತ್ಯಗತ್ಯ*ವೈದ್ಯ ಮತ್ತು ಔಷಧಿ ಮೇಲೆ ನಮ್ಮ ನಂಬಿಕೆ ಹೇಗಿದೆಯೋ ಹಾಗೆ ನಮಗೆ ಪರಿಣಾಮ ಉಂಟಾಗುತ್ತದೆ*ಸ್ವಾತಿ ಮಳೆಯ ನೀರು ಉಪಯೋಗಿಸಲು ಬಹಳ ಉತ್ಕೃಷ್ಟ!*ಎರಡು ಮೂರು ನದಿಗಳು ಸೇರಿದ ಮೇಲೆ, ಆ ನದಿಯ ಹೆಸರನ್ನು ಏಕೆ ಒಂದೇ ನದಿಯ ಹೆಸರಿನಿಂದ ಕರೆಯುವುದು?*ತಾಮ್ರ ಪಾತ್ರೆಗಳ ಒಳಗೆ ಹಾಕುವ ಶುದ್ಧವಾದ ಕಲಾಯಿ(ತವರ) ನಮ್ಮ ಬುದ್ಧಿಶಕ್ತಿ ಮತ್ತು ದೇಹಬಲವನ್ನು ಹೆಚ್ಚಿಸುತ್ತದೆ18-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನೀರನ್ನು ಪ್ರಮಾಣ ಮೀರಿ ಕುಡಿಯಬಾರದು*ಆಹಾರವು ಅಜೀರ್ಣವಾಗುವುದಕ್ಕೆ ವಿವಿಧ ಕಾರಣಗಳು ಯಾವುವು?*ಬೆಳಿಗ್ಗೆ ಎಂಟು ಗಂಟೆಗೆ ಆಹಾರ ಸೇವನೆ, ಮತ್ತು ಅತೀತ ಕಾಲವಾದ ಮಧ್ಯಾಹ್ನ ಮೂರು ಗಂಟೆಯ ಮೇಲೆ ಊಟ ಮಾಡುವುದು ಎರಡೂ ಒಳ್ಳೆಯದಲ್ಲ!*ದೇಹದಲ್ಲಿ ನೀರಿನ ಏರುಪೇರಿನಿಂದ ಯಾವುದೆಲ್ಲಾ ಪರಿಣಾಮಗಳು ಸಂಭವಿಸುತ್ತವೆ?*ಊಟ ಮಾಡುವುದಕ್ಕೆ ಹಸಿವು ಎಷ್ಟು ಮುಖ್ಯವೋ, ನೀರು ಕುಡಿಯುವುದಕ್ಕೆ ಬಾಯಾರಿಕೆಯಾಗುವುದು ಕೂಡಾ ಅಷ್ಟೇ ಅವಶ್ಯಕ*ಭೋಜನದ ಆರಂಭದಲ್ಲಿ ನೀರು ಕುಡಿದರೆ ದೇಹ ಕೃಶವಾಗಬಹುದು, ಕೊನೆಯಲ್ಲಿ ಕುಡಿದರೆ ತೂಕ ಹೆಚ್ಚಾಗಬಹುದು, ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ಕುಡಿದರೆ ಸಮತ್ವವನ್ನು ಕೊಡುತ್ತದೆ!*ನೀರು, ಊಟ, ಔಷಧಿ - ಇವುಗಳನ್ನು ಸರಿಯಾಗಿ ಸೇವಿಸದಿದ್ದರೆ ಅಡ್ಡಪರಿಣಾಮಗಳು ಖಂಡಿತ*ಕುಳಿತುಕೊಂಡು ನೀರನ್ನು ಕುಡಿಯಬೇಕು. ಮಲಗಿ, ನಿಂತು, ಓಡಾಡುತ್ತಾ ಕುಡಿಯಬಾರದು!*ಅತಿಯಾಗಿ ಆಯಾಸವಾದಾಗ, ಹಸಿವಾದಾಗ, ತುಂಬಾ ಸಿಟ್ಟು ಬಂದಾಗ, ಅತಿಯಾದ ಭಯವಾದಾಗ, ಗಡಿಬಿಡಿ ಮಾಡಿ ನೀರನ್ನು ಕುಡಿಯಬಾರದು!17-09-2026ಅಶೋಕೆ, ಗೋಕರ್ಣ

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಉಷಃಪಾನ ಎಂದರೇನು? ಅದರ ಮಹತ್ತ್ವವೇನು?*ಕೋಪವನ್ನು ಗೆಲ್ಲಬೇಕು, ಅದು ನಮ್ಮ ಹತೋಟಿಯಲ್ಲಿರಬೇಕು*ತಾಮ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿ ಉಷಃಪಾನ ಮಾಡಿದರೆ ಉತ್ತಮ*ಒಂದು ವರ್ಷದ ಮಗುವಿದ್ದಾಗಿನಿಂದ ಉಷಃಪಾನ ಮಾಡಬಹುದು*ಪ್ರತಿದಿನ ಪ್ರಾತಃಕಾಲದಲ್ಲಿ ಮೂಗಿನಿಂದ ನೀರನ್ನು ಕುಡಿಯುವುದನ್ನು ನಾಸಾಪಾನ ಅಥವಾ ಜಲನೇತಿ ಎನ್ನುತ್ತಾರೆ!*ಜಲನೇತಿಯನ್ನು ಮಾಡುವ ವಿಧಾನಗಳು ಮತ್ತು ಪ್ರಯೋಜನಗಳು ಯಾವುವು?*ಉಷಃಪಾನ ಅಥವಾ ನಾಸಾಪಾನ ಮಾಡುವಾಗ ಅಳತೆಮೀರಿ ನೀರನ್ನು ಕುಡಿದರೆ ಜಠರಾಗ್ನಿ ಮಂದವಾಗುತ್ತದೆ16-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಬೆಳ್ಳಿ ಘಂಟೆಗಿಂತ ಕಂಚಿನ ಘಂಟೆ ಶ್ರೇಷ್ಠ!ಕಂಚಿನ ಘಂಟೆಯಿಂದ ಹೊರಹೊಮ್ಮುವ ಓಂಕಾರ ಬೇರೆ ಯಾವ ಲೋಹದಿಂದಲೂ ಬರುವುದಿಲ್ಲ!*ಇದು ಹಣವಿರುವ ಕಾಲ, ಹಾಗಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಬದಲು ಅತ್ಯಂತ ಅಗತ್ಯವಾಗಿರುವ ಆರೋಗ್ಯ, ಆಹಾರ, ನೀರು, ಪಾತ್ರೆಗಳಿಗೆ ಖರ್ಚು ಮಾಡಬೇಕು*ತಾಮ್ರವನ್ನು ಹುಳಿಯಿಂದ, ಬೆಳ್ಳಿಯನ್ನು ಭಸ್ಮದಿಂದ ಬೆಳಗಬೇಕು(ತೊಳೆಯಬೇಕು)*ತಾಮ್ರದ ಹರಿವಾಣದ ಮಧ್ಯೆ ಸ್ವಲ್ಪ ಚಿನ್ನವನ್ನು ಹಾಕಿಸಿ, ಪ್ರತಿದಿನ ಭೋಜನವನ್ನು ಮಾಡಿದರೆ ಅತ್ಯಂತ ಶ್ರೇಷ್ಠ!*ಮಣ್ಣಿನ ಪಾತ್ರೆಯಲ್ಲಿ ಸಂಗ್ರಹ ಮಾಡಬಹುದು, ಆದರೆ ಅದರಲ್ಲಿ ಊಟ ಮಾಡಬಾರದು*ಪ್ರತಿದಿನ ಪ್ರಾತಃಕಾಲದಲ್ಲಿ ಎದ್ದ ಕೂಡಲೇ ಅವರವರ ಕೈಯಲ್ಲಿ ಎಂಟು ಬೊಗಸೆಯಷ್ಟು ನೀರನ್ನು ಕುಡಿದರೆ ಅವರಿಗೆ ರೋಗವಿಲ್ಲ ಮತ್ತು ಆಯಸ್ಸು ಹೆಚ್ಚುತ್ತದೆ*ಊಟ ಮಾಡುವಾಗ ಮಧ್ಯದಲ್ಲಿ ಸ್ವಲ್ಪ, ಸ್ವಲ್ಪ ನೀರನ್ನು ಕುಡಿಯಬೇಕು15-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಕಂಚಿನ ಪಾತ್ರೆ ಗೃಹಸ್ಥರಿಗೆ ತುಂಬಾ ಉತ್ತಮ!*ಅಲ್ಯೂಮಿನಿಯಂ, ಹಿಂಡಾಲಿಯಂ ಮತ್ತು ಪ್ಲಾಸ್ಟಿಕ್ ಪಾತ್ರೆಗಳ ಉಪಯೋಗದ ಅನರ್ಥಗಳು ಯಾವುವು?*ಕೆಲವು ವಸ್ತುಗಳು ಅನರ್ಥಕಾರಿ ಎಂದು ಗೊತ್ತಿದ್ದರೂ ಅದನ್ನು ಯಾರೂ ತ್ಯಜಿಸುತ್ತಿಲ್ಲ, ಇದು ಕಲಿಯುಗದ ಪ್ರಭಾವ!*ಎಲ್ಲಾ ಕಡೆ ಬಳಸುತ್ತಿರುವ ಆಧುನಿಕ ಜಲಶೋಧಕಗಳು ಉಪಯೋಗಕ್ಕೆ ಯೋಗ್ಯವೇ?*ನೀರನ್ನು ಶಾಸ್ತ್ರೀಯ ರೀತಿಯಲ್ಲಿ ಶುದ್ಧಗೊಳಿಸುವ ಮೂರು ಮಾರ್ಗಗಳನ್ನು ಆಯುರ್ವೇದದಲ್ಲಿ ಹೇಳಿದ್ದಾರೆ*ನೀರನ್ನು ತಿಳಿಗೊಳಿಸುವ ಏಳು ವಸ್ತುಗಳು ಯಾವುವು?*ನೀರನ್ನು ತಿಳಿಗೊಳಿಸುವುದರಲ್ಲಿ "ಮುತ್ತು" ಶ್ರೇಷ್ಠ!*ಪಾರಂಪರಿಕ ಜಲಶೋಧಕಗಳು ಆಧುನಿಕ ಜಲಶೋಧಕಗಳಿಗಿಂತ ಅತ್ಯುತ್ತಮ!14-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಆಹಾರ ಯಾವುದರ ಜೊತೆ ಸೇರುತ್ತದೆಯೋ ಅದರ ಗುಣದೋಷಗಳೊಂದಿಗೆ ಒಂದಾಗುತ್ತದೆ, ಹಾಗಾಗಿ 'ಪಾತ್ರೆ'ಗಳ ಬಗ್ಗೆ ಜಾಗ್ರತೆ ಮಾಡಬೇಕು*ಒಗ್ಗರಣೆಗೆ, ದೋಸೆ ಕಾವಲಿ, ತುರಿಮಣೆ, ಕತ್ತಿ ಮುಂತಾದವುಗಳಲ್ಲಿ ಕಬ್ಬಿಣವನ್ನು ಉಪಯೋಗಿಸಬಹುದು*'ಅಲ್ಯೂಮಿನಿಯಂ'ನಲ್ಲಿ ಇಟ್ಟ ಆಹಾರ ಸೇವನೆಗೆ ಯೋಗ್ಯವಲ್ಲ*ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಯಾವುವು?*ಮೈಕ್ರೋ ಪ್ಲಾಸ್ಟಿಕ್ ಕಣ್ಣಿಗೆ ಕಾಣಿಸದು, ಆದರೆ ಅದು ಆಹಾರದ ಮೂಲಕ ನಮ್ಮ ರಕ್ತವನ್ನು ಸೇರಿ ದೇಹದಲ್ಲಿ ಸಂಚಾರ ಮಾಡುತ್ತದೆ*ಭೌತಿಕ, ಆಧ್ಯಾತ್ಮಿಕ ಹಾಗೂ ದೈವಿಕ ಯಾವುದೇ ಕ್ಷೇತ್ರಕ್ಕೂ 'ಪ್ಲಾಸ್ಟಿಕ್' ಪೋಷಕ ಅಲ್ಲ, ಅದರಿಂದ ಹಾನಿ ಅಷ್ಟೇ ಉಂಟಾಗುತ್ತದೆ! *ಸ್ಟೇನ್ಲೆಸ್ ಸ್ಟೀಲ್ ನೋಡಲು ಹೊಳಪು ಆದರೆ ತಾಮಸ ಗುಣ ಹೊಂದಿದೆ, ಅದರಲ್ಲಿರುವ ಕೆಲವು ರಾಸಾಯನಿಕಗಳು ಆರೋಗ್ಯಕ್ಕೆ ತೊಂದರೆ ಉಂಟುಮಾಡುತ್ತದೆ*ವೈದ್ಯಕೀಯ ಸಂಶೋಧನೆಗಳ ಪ್ರಕಾರ 'ಅಲ್ಯೂಮಿನಿಯಂ' ಅಂಶ ಶರೀರದಲ್ಲಿ ಹೆಚ್ಚಾದಾಗ ಮರೆವಿನ ಕಾಯಿಲೆ (Alzheimer's) ಬರುತ್ತದೆ*ಕಾಗದದಲ್ಲಿ ಇರಿಸಿದ ಆಹಾರ ಬಳಸಬಹುದಾ? *ಕಂಚು ಸಾಮಾನ್ಯರಿಗೆ ಸಿಗುವ ಬೆಲೆಯಲ್ಲಿ ಇದೆ, ಅದರಲ್ಲಿ ಆಹಾರ ಸ್ವೀಕಾರ ಮಾಡಿ*ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ನೈಸರ್ಗಿಕ ಅಥವಾ ಪಾರಂಪರಿಕವಾಗಿರುವ ವಸ್ತುಗಳನ್ನು ಬಳಸಿ13-09-2026ಅಶೋಕೆ, ಗೋಕರ್ಣ

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಕಾದ ನೀರು ಮತ್ತು ಕಾದಾರಿಸಿದ ನೀರಿನ ಉಪಯೋಗಗಳೇನು?*ಹಿಂದಿನ ದಿನದ ಕಾದಾರಿದ ನೀರನ್ನು ಮರುದಿನ ಬಳಸಬಾರದು!*ನೀರು ಮತ್ತು ಔಷಧೀಯ ಗಿಡ ಮೂಲಿಕೆಗಳನ್ನು ಪ್ರಾತಃಕಾಲದಲ್ಲಿ ಸಂಗ್ರಹ ಮಾಡಬೇಕು*ಜಲಪಾತ್ರವನ್ನು ನೆಲದ ಮೇಲೆ ಇಡಬಾರದು!*ನೀರನ್ನು ಇಡುವ ಐದು ಬಗೆಯ ವಿಧಾನಗಳು ಯಾವುವು?*ನೀರನ್ನು ಏಳು ವಿಧಾನದಲ್ಲಿ ತಂಪುಮಾಡಿ ಸ್ವೀಕರಿಸಬಹುದು*ತಂಪು ಪೆಟ್ಟಿಗೆಯಲ್ಲಿ ಇಟ್ಟು ಸ್ವೀಕರಿಸುವ ನೀರು, ಆಹಾರ ಜೀರ್ಣಕ್ಕೆ ಭಾರ!*ವ್ಯಾಯಾಮದ ನಂತರ ತಕ್ಷಣ ನೀರನ್ನು ಕುಡಿಯಬಾರದು, ಸ್ವಲ್ಪ ಹೊತ್ತು ಬಿಟ್ಟು ಕುಡಿಯಬೇಕು*ಸಹಜವಾಗಿ ಬಾಯಾರಿಕೆಯಾದಾಗ ಮಾತ್ರ ನೀರನ್ನು ಕುಡಿಯಬೇಕು*ತಣ್ಣನೆಯ ನೀರು(Cold water) ಕುಡಿಯುವುದರಿಂದ ಏನೆಲ್ಲಾ ತೊಂದರೆಗಳಾಗುತ್ತವೆ?*ತಾಮ್ರ, ಮಣ್ಣಿನ ಪಾತ್ರೆಯಲ್ಲಿಟ್ಟ ನೀರು ಪವಿತ್ರ ಹಾಗೂ ತಂಪು ಎಂಬುದಾಗಿ ಯೋಗರತ್ನಾಕರ ಗ್ರಂಥದಲ್ಲಿ ತಿಳಿಸಿದ್ದಾರೆ*ಸ್ಟೀಲ್, ಅಲ್ಯೂಮಿನಿಯಂ, ಕಬ್ಬಿಣ, ಪ್ಲಾಸ್ಟಿಕ್ ಪಾತ್ರೆಗಳಲ್ಲಿ ನೀರುನ್ನು ಇಡಬಾರದು12-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಚಂದ್ರಕಾಂತ ಮಣಿಯ ಮೇಲೆ ಚಂದ್ರನ ಕಿರಣಗಳು ಬಿದ್ದಾಗ ಅದು ನೀರನ್ನು ಸೃಷ್ಟಿ ಮಾಡುತ್ತದೆ! ಆ ನೀರು ದುಷ್ಟ ಶಕ್ತಿಗಳನ್ನು ದಮನಮಾಡಬಲ್ಲ ಹಾಗೂ ವಿಷವನ್ನು ತೆಗೆಯುವ ಶಕ್ತಿಯನ್ನು ಹೊಂದಿದೆ!*ಎಳನೀರಿನ ಗುಣಗಳು ಯಾವುವು?*ಮಳೆಗಾಲವಲ್ಲದೇ ಮಳೆ ಬಂದರೆ ಆ ನೀರನ್ನು ಸೇವಿಸಬಾರದು!*ಶರದ್ ಋತುವಿನಲ್ಲಿ ಬರುವ ಮಳೆಯ ನೀರು ಉಪಯೋಗಿಸುವುದಕ್ಕೆ ಅತ್ಯಂತ ಉತ್ತಮ*ಹೇಮಂತ, ವಸಂತ, ಗ್ರೀಷ್ಮ ಋತುವಿನ ನೀರಿನ ಗುಣ-ದೋಷಗಳು ಯಾವುವು?*ನೀರಲ್ಲಿ ನಾಲ್ಕು ವಿಧಗಳು: ಪಾಪೋದಕ, ರೋಗೋದಕ, ಅಂಶೋದಕ ಮತ್ತು ಆರೋಗ್ಯೋದಕ*ಗಂಗೆಯ ಮಧ್ಯದಲ್ಲಿ ಆಚಮನ ಮಾಡಬಾರದು!*ಧರ್ಮಶಾಸ್ತ್ರವೇ ಕಾನೂನಾಗಿದ್ದರೆ ಭಾರತದ ಯಾವುದೇ ನದಿಗಳು ಮಲಿನವಾಗುತ್ತಿರಲಿಲ್ಲ!*ಸೂರ್ಯ, ಚಂದ್ರರ ಕಿರಣಗಳು ಬೀಳದಿರುವ ನೀರನ್ನು ವಿಷಮವಾದ 'ರೋಗೋದಕ' ಎನ್ನುತ್ತಾರೆ!*ಒಂದು ಲೋಟ ನೀರನ್ನು ಕುದಿಸಿ, ಕಾಲು ಭಾಗಕ್ಕೆ ಇಳಿಸಿ ಕುಡಿದರೆ ಅದು ಆರೋಗ್ಯವನ್ನು ನೀಡುತ್ತದೆ11-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಪೇಟೆ ಜೀವನದ ದೊಡ್ಡ ಅನರ್ಥವೇನೆಂದರೆ ಕುಡಿಯಲು ಯೋಗ್ಯವಲ್ಲದ ನೀರನ್ನು ಸೇವಿಸುವುದು ಅಗತ್ಯ, ಇದು ಎಲ್ಲಾ ಮಹಾನಗರಗಳ ದುರವಸ್ಥೆ!*ಎಲ್ಲಿ ಶುದ್ಧವಾದ ಗಾಳಿ, ನೀರು ಸಿಗುವುದೋ ಅದು ವಾಸ ಮಾಡಲು ಯೋಗ್ಯವಾದ ಭೂಮಿ*ಕಲಿಯುಗದಲ್ಲಿ ಮಾಯೆ, ಮೋಸ, ಸುಳ್ಳು, ಭ್ರಮೆ ಹೆಚ್ಚು ಇರುವುದು ಮಹಾನಗರಗಳಲ್ಲಿ; ಹಾಗಾಗಿ ಹಳ್ಳಿಯ ಜೀವನ ಉತ್ತಮ*ಉತ್ತಮೋತ್ತಮ ನೀರು ಆಕಾಶಗಂಗೆ, ಅದು ಸಿಗಲಿಲ್ಲವೆಂದರೆ ಭೌಮ ನೀರನ್ನು ಸೇವಿಸಬೇಕು*ಗುಹೆಯೊಳಗಿನಿಂದ, ಕತ್ತಲಿನಿಂದ, ಬಿರುಕಿನಿಂದ ಬರುವ ನೀರು ಕುಡಿಯಲು ಯೋಗ್ಯವಲ್ಲ*ವಿವಿಧ ಪ್ರದೇಶಗಳಲ್ಲಿರುವ ನೀರಿನ ಗುಣ-ದೋಷಗಳೇನು?*ಬಯಲು ಸೀಮೆಯ ನೀರು ಸೇವಿಸಲು ಆರೋಗ್ಯಕರ*ಬಯಲು ಸೀಮೆಯಲ್ಲಿ ಏಕೆ ಮೆಣಸಿನ ಸೇವನೆ ಹೆಚ್ಚು?*ಕಾಡು, ಮಳೆ ಹೆಚ್ಚಿರುವ ಪ್ರದೇಶದಲ್ಲಿರುವ ನೀರು ಕಫ ವಿಕಾರವನ್ನು ಉಂಟುಮಾಡುತ್ತದೆ*ಹಣಕ್ಕಿಂತ ಒಳ್ಳೆಯ ಗಾಳಿ ಮತ್ತು ನೀರು ತುಂಬಾ ಮುಖ್ಯ!10-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಗಂಗೆಯ ಮಹತ್ತ್ವವನ್ನು ಬೇರೆ ಬೇರೆ ಪುರಾಣಗಳಲ್ಲಿ ಹೇಗೆ ವರ್ಣಿಸಿದ್ದಾರೆ?*ಯಾವ ನದಿಗಳ ನೀರನ್ನು ಕುಡಿದರೆ, ಅದರ ಪ್ರಭಾವ ಎಷ್ಟು ಕಾಲ ನಮ್ಮ ದೇಹದಲ್ಲಿ ಇರುತ್ತದೆ?*ಆಲೀಕಲ್ಲು ಪಿತ್ತವನ್ನು ಶಮನಮಾಡಿ, ವಾತ ಮತ್ತು ಕಫವನ್ನು ಹೆಚ್ಚುಮಾಡುತ್ತದೆ!*ಹಿಮದ ನೀರು ವಾತ-ಪಿತ್ತ-ಕಫವನ್ನು ಪ್ರಕೋಪಗೊಳಿಸುವುದಿಲ್ಲ, ಆದರೆ ಇಬ್ಬನಿಯ ನೀರು ಮನುಷ್ಯರಿಗೆ, ಪ್ರಾಣಿ-ಪಕ್ಷಿಗಳಿಗೆ ಸೇವನೆಗೆ ಯೋಗ್ಯವಲ್ಲ!*ರಾತ್ರಿಯಲ್ಲಿ ಸುರಿಯುವ ಮಳೆ "ಸಾಮುದ್ರ" ನೀರಿಗೆ ಸಮಾನ!*ಅಕಾಲ, ದುರ್ದಿನದಲ್ಲಿ ಬಂದ ಮಳೆ ದೋಷಗಳನ್ನು ಪ್ರಕೋಪಗೊಳಿಸಿದರೆ, ಕ್ಷಣವೃಷ್ಟಿಯ ನೀರು ಸರ್ವಥಾ ವರ್ಜ್ಯ!*ಬೇಗ ಬೇಗ ಹರಿಯುವ ನದಿ, ನಿರ್ಮಲ ನದಿಯ ನೀರು ಜೀರ್ಣಕ್ಕೆ ಸುಲಭ, ಆರೋಗ್ಯಕ್ಕೆ ಒಳ್ಳೆಯದು!*ನದಿಗಳ ಉಗಮ ಸ್ಥಾನ, ಹರಿಯುವ ದಿಕ್ಕು, ಹರಿದು ಬರುವ ದಾರಿ, ಇವುಗಳ ಆಧಾರದ ಮೇಲೆ ಆ ನೀರಿನ ಗುಣಗಳನ್ನು ನಮ್ಮ ಪೂರ್ವಜರು ಹೇಗೆ ವರ್ಣಿಸಿದ್ದಾರೆ?*ಸೂರ್ಯ, ಚಂದ್ರ ಮತ್ತು ಗಾಳಿಯ ಸಂಸರ್ಗವಾದ ನೀರು ಸೇವನೆಗೆ ಯೋಗ್ಯ*ನಲ್ಲಿಯಲ್ಲಿ ಬರುವ ನೀರು ಸೇವನೆಗೆ ಯೋಗ್ಯವಲ್ಲ ಏಕೆ?*ಸಿದ್ಧಾಂತವೆಂದರೆ ಸಾರ್ವಕಾಲಿಕ ಸತ್ಯ, ಅದು ಬದಲಾಗುವುದಿಲ್ಲ. ಆಧುನಿಕ ಚಿಂತನೆಗಳ ದೊಡ್ಡ ದುರವಸ್ಧೆ ಎಂದರೆ ಅವುಗಳು ಸಿದ್ಧಾಂತವಲ್ಲ!09-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಮಳೆ ನೀರು ಭೂಮಿಗೆ ಬಿದ್ದ ನಂತರ ಅಹಿತ, ಅದೇ ನೀರು ಮೂರು ರಾತ್ರಿ ಕಳೆದ ಮೇಲೆ ಅಮೃತವಾಗುತ್ತದೆ!*ಕರಗಿ ನೀರಾಗಿ ಹರಿಯುವ ಆ ಪರಮಾತ್ಮನ ರೂಪವಾದ ಬ್ರಹ್ಮದ್ರವ "ಗಂಗೆ"*ಗಂಗಾ ನೀರಿಗೆ ತ್ರಿಮೂರ್ತಿಗಳ ಬಂಧವಿದೆ! ಹಾಗಾಗಿ ಆ ಪುಣ್ಯವಾದ ನೀರು ತ್ರಿದೋಷಗಳ ಏರುಪೇರುಗಳನ್ನು ಸರಿಮಾಡುವ ಶಕ್ತಿಯನ್ನು ಹೊಂದಿದೆ!*ನೀರುನ್ನು ಕುಡಿಯುವಾಗ, ಪವಿತ್ರವಾದ ಗಂಗೆಯ ಸ್ಮರಣೆಮಾತ್ರದಿಂದ ಪಾಪಗಳು ಪರಿಹಾರವಾಗುತ್ತದೆ!*ಗಂಗಾಪಾನದ ಮಹತ್ತ್ವವನ್ನು ಬೇರೆ ಬೇರೆ ಪುರಾಣಗಳಲ್ಲಿ ಹೇಗೆ ವಿವರಿಸಲಾಗಿದೆ!?*ವಿಷ್ಣುವಿನ ಪಾದದಿಂದ ಬಂದ ಗಂಗೆಯು ಅಕಾಲ ಮೃತ್ಯುವನ್ನು, ಸರ್ವರೋಗಗಳನ್ನು, ಎಲ್ಲಾ ಪಾಪಗಳನ್ನು ಪರಿಹರಿಸುತ್ತದೆ!*ಗಂಗೆಯ ನೀರಿನ ಬಗ್ಗೆ ವಿಜ್ಞಾನಿಗಳು ಏನು ಹೇಳುತ್ತಾರೆ?*ಹಿಮಾಲಯದಿಂದ ಹರಿದು ಬರುವ ಶ್ರೇಷ್ಠ ನದಿಗಳೆಲ್ಲಾ ವಾತ ಹಾಗೂ ಕಫಗಳ ದೋಷವನ್ನು ಸರಿಮಾಡುತ್ತದೆ*ಪವಿತ್ರ ಗಂಗೆಯನ್ನು ಕಲುಷಿತಗೊಳಿಸಿದ ಮಹಾಪಾಪ ಈ ತಲೆಮಾರಿಗಿದೆ! ಅದು ಭಾರತಕ್ಕೆ, ಸೃಷ್ಟಿಗೆ ಮಾಡಿದ ಬಹುದೊಡ್ಡ ಅಪಚಾರ, ಇದು ಕಲಿಯುಗದ ಬಹುದೊಡ್ಡ ದುರವಸ್ಥೆ!08-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಅನ್ನ ನಮ್ಮ ಅಸ್ತಿತ್ವಕ್ಕೆ ಕಾರಣ; ನೀರು ಮನಸ್ಸಿನ ಸಮಾಧಾನಕ್ಕೆ ಕಾರಣ*ದಿವ್ಯವಾದ ಆಂತರಿಕ್ಷ ಜಲಕ್ಕೆ ಮುಖ್ಯವಾದ ಆರು ಗುಣಗಳು: ತಂಪು, ಶುದ್ಧ, ಕಲ್ಯಾಣಕರ, ರುಚಿಯುಳ್ಳದ್ದು, ವಿಮಲ(ಕಲ್ಮಷ ರಹಿತ) ಮತ್ತು ಲಘು(ಹಗುರ)*ಭೂಮಿಯ ಮೇಲಿರುವ ಯಾವ ಜಲವೂ ಆಂತರಿಕ್ಷ ಜಲದಷ್ಟು ಶುಚಿಯಲ್ಲ!*ಆಂತರಿಕ್ಷ ಜಲ ಭೂಮಿಗೆ ಬಿದ್ದಮೇಲೆ ಯಾವುದೆಲ್ಲಾ ಗುಣಗಳನ್ನು ಪಡೆದುಕೊಳ್ಳುತ್ತದೆ?*ಪವಿತ್ರವಾದ "ಗಾಂಗ" ನೀರನ್ನು ಚಿನ್ನ, ಬೆಳ್ಳಿ, ಮಣ್ಣಿನ ಅಥವಾ ಗಾಜಿನ ಪಾತ್ರೆಯಲ್ಲಿ ಹಿಡಿದುಕೊಂಡು ಸೇವಿಸಬೇಕು, ಅದು ಅಮೃತಕ್ಕೆ ಸಮಾನ!*ಆಶ್ವಯುಜ ಮಾಸದಲ್ಲಿ ಬರುವ ಮಳೆಯೆಲ್ಲಾ ಅಮೃತ, ಅದು ಗಾಂಗ ನೀರು!*ಮಳೆಯ ನೀರು "ಗಾಂಗ" ಅಥವಾ "ಸಾಮುದ್ರ" ಜಲವೆಂದು ಪರೀಕ್ಷಿಸುವುದು ಹೇಗೆ?*ಆಕಾಶದಲ್ಲಿ ಅಗಸ್ತ್ಯ ನಕ್ಷತ್ರವಿದ್ದಾಗ ಬರುವ ಮಳೆ "ಗಾಂಗ" ಜಲವಾಗುತ್ತದೆ!07-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನೀರು ಜೀವಗಳಿಗೆ ಪ್ರಾಣವಿದ್ದಂತೆ, ನೀರಿಲ್ಲದೆ ಬದುಕಿಲ್ಲ!*ನೀರು ಪಾಲನೆ ಮಾಡುತ್ತದೆ, ಇಡೀ ಜಗತ್ತೇ ನೀರಿನ ಮೇಲೆ ಅವಲಂಬಿತವಾಗಿದೆ*ನೆಲ ಮುಟ್ಟದ ಮಳೆನೀರು ಅತ್ಯಂತ ಶ್ರೇಷ್ಠವಾದುದು!*ನೀರಿನ ಇತರ ಹೆಸರುಗಳು ಯಾವುವು? ಅದರ ಅರ್ಥಗಳೇನು?*ನೀರನ್ನು ಪ್ರಮಾಣಬದ್ಧವಾಗಿ ಕುಡಿದರೆ ತೂಕಡಿಕೆ ಬರುವುದಿಲ್ಲ*ಎಲ್ಲರಿಗೂ, ಎಲ್ಲಾ ಕಾಲದಲ್ಲಿಯೂ, ಎಲ್ಲಾ ಸ್ಥಿತಿಯಲ್ಲಿಯೂ ನೀರು ಹಿತ*ಗಂಗಾಜಲ ಪಾನ ಮಾಡಿದರೆ ಒಂದು ವರ್ಷ ದೇಹದ ಒಳಗಿದ್ದು ನಮ್ಮನ್ನು ಪಾವನವಾಗಿಡುತ್ತದೆ*ನೀರು ಎಂದರೆ ಭೂಮಿಯ ಮೇಲಿರುವ ಅಮೃತ, ನೀರನ್ನು ತಾತ್ಸಾರ ಮಾಡಬಾರದು*"Plastic" ಅತ್ಯಂತ ಹಾನಿಕಾರಕ! ಅದು ಮೈಲಿಗೆಗಳ ರಾಜ! ಅದರಷ್ಟು ಮೈಲಿಗೆ ಯಾವುದೂ ಇಲ್ಲ! *ನೀರಲ್ಲಿ ಎರಡು ವಿಧ : ಆಂತರಿಕ್ಷ ಮತ್ತು ಭೌಮ*ಸರ್ವೋತ್ತಮವಾದ "ಗಾಂಗ" ನೀರನ್ನು ಸಂಗ್ರಹ ಮಾಡಿ ಕುಡಿಯಬೇಕು! "ಸಾಮುದ್ರ" ನೀರು ಸೇವಿಸಲು ಯೋಗ್ಯವಲ್ಲ06-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಬಾರ್ಲಿಯನ್ನು ಧಾನ್ಯಗಳ ರಾಜ ಎಂದು ವೇದಗಳು ಹೇಳುತ್ತವೆ*ನೀರು, ಹಸುವಿನ ತುಪ್ಪ, ಹಸುವಿನ ಹಾಲು ಮತ್ತು ಅಕ್ಕಿಯಿಂದ ಮಾಡಿದ ಅನ್ನ - ಇವುಗಳು ಸರ್ವಹಿತವಾದುದು*ಪಾಪ ನಮ್ಮಲ್ಲಿ ಬಂದು ಸೇರುವ ಮುಖ್ಯದ್ವಾರ ಆಹಾರ, ಊಟ ಸರಿಯಾಗಿ ಮಾಡದಿರುವುದು ಅದರ ಮೂಲ!*ಮನುಷ್ಯನ ಮೊಟ್ಟಮೊದಲ ಪಾಪ ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ದು*ಪ್ರಾಣಿವರ್ಗದಲ್ಲಿ ಅತ್ಯಂತ ಸಾತ್ವಿಕವಾದ ಪ್ರಾಣಿ "ಗೋವು"*ಹಾಲನ್ನು ಕರೆದು ಆರು ಗಂಟೆಯ ಒಳಗೆ ಅದಕ್ಕೆ ಸಂಸ್ಕಾರ ಕೊಟ್ಟು ಅದನ್ನು ಸೇವಿಸಬೇಕು!*ಅಕ್ಕಿ ತುಂಬಾ ತಂಪು ಮತ್ತು ಗೋಧಿ ಸ್ವಲ್ಪ ಉಷ್ಣ*ಸಸ್ಯಾಹಾರಕ್ಕಿಂತ ಮಾಂಸಾಹಾರ ಸೇವನೆಯಿಂದ ಹಿಂಸೆಯ ಪ್ರಮಾಣ ಹೆಚ್ಚು*"ವೈಶ್ವದೇವ" ಎಂದರೆ ಅಡುಗೆ ಮಾಡುವಾಗ ಸಂಭವಿಸಿರುವ ಪಾಪಗಳ ಪರಿಹಾರ ಕ್ರಿಯೆ*ಭೋಜನವಿಧಿ ಶಾಸ್ತ್ರ ಇರುವುದೇ ಪಾಪ ಪರಿಹಾರಕ್ಕಾಗಿ! *ಸರಿಯಾಗಿ ಊಟ ಮಾಡದಿದ್ದವನು ಪಾಪವನ್ನೇ ತಿನ್ನುತ್ತಿರುತ್ತಾನೆ!05-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಒಂದೊಂದು ಜೀವಕ್ಕಾಗಿ ಪ್ರಕೃತಿ ಇಟ್ಟಿರುವಂತಹ ಆಹಾರಗಳೆಲ್ಲವೂ 'ಹಿತ'*ಪ್ರಿಯ ಮತ್ತು ಹಿತ ಇವುಗಳಲ್ಲಿ ವ್ಯತ್ಯಾಸ ಇದೆ!*ಪ್ರಕೃತಿಯನ್ನು ಅವಲೋಕನ ಮಾಡಿ, "ಶಾಸ್ತ್ರಗಳು" ನಮಗೆ ಸಂದೇಶಗಳನ್ನು ಕೊಟ್ಟಿದೆ*'ನಿಹಿತ ~ ವಿಹಿತ' ಎಂದರೆ ಏನು? *ಈ ಸೃಷ್ಟಿಯಲ್ಲಿ ಅನಂತ ಸುವಸ್ತುಗಳಿವೆ; ಆದರೆ ಅದೆಲ್ಲವೂ ನಮಗಾಗಿ ಅಲ್ಲ! *ನಮಗಾಗಿ ಇರುವುದನ್ನಷ್ಟೇ ಸೇವಿಸೋಣ; ಇನ್ನೊಂದು ಜೀವಕ್ಕೆ ಇರುವುದನ್ನು ಅದಕ್ಕೆ ಬಿಟ್ಟು ಬಿಡಬೇಕು!*ಅಜೀರ್ಣ ಪ್ರಾರಂಭ ಆದರೆ 'ಅಭ್ಯಂಗ' ಮಾಡಬಾರದು*ಸಮಪ್ರಮಾಣದಲ್ಲಿ ಸಂಯೋಗವಾದ ತುಪ್ಪ ಹಾಗೂ ಜೇನುತುಪ್ಪವನ್ನು ಸೇವಿಸಬಾರದು*ಶುದ್ಧವಾದ 'ಗೋ~ಕ್ಷೀರ' ಸಮಸ್ತ ಮಾನವಕೋಟಿಗೆ ಹಿತವಾದ ಆಹಾರ*ಅನ್ನ ಹಾಗೂ ಪರಿಶುದ್ಧ ಗೋಧಿ ಎಲ್ಲರಿಗೂ ಹಿತ*ಕಲ್ಲುಪ್ಪು, ತಿಲತೈಲ, ಶುಂಠಿ, ಪರಿಶುದ್ಧ ದ್ರಾಕ್ಷಿ, ಪರಿಶುದ್ಧ ಸಕ್ಕರೆ ಇವೆಲ್ಲಾ ಶ್ರೇಷ್ಠ ಆಹಾರ04-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದರೆ ಅಧರ್ಮ!*ಆಹಾರದಲ್ಲಿ ಎರಡು ವಿಧ: ಸ್ಥಾವರ (ಸಸ್ಯ ಜನ್ಯ) ಮತ್ತು ಜಂಗಮ (ಪ್ರಾಣಿ ಜನ್ಯ)*ಆಹಾರವು ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು ಎಂಬ ಷಡ್ರಸಗಳಲ್ಲಿ ನೆಲೆಸಿದೆ*ಮನುಷ್ಯ ಜನ್ಮವು ಸಾತ್ತ್ವಿಕ ಸೃಷ್ಟಿ! ಹಾಗಾಗಿ ಅವನು ಸಾತ್ತ್ವಿಕ ಜೀವನ ಮಾಡಬೇಕು*ಸಾತ್ತ್ವಿಕ ಸೃಷ್ಟಿಗೆ ರಾಜಸ ಸೃಷ್ಟಿ ಮತ್ತು ತಾಮಸ ಸೃಷ್ಟಿ ಆಹಾರ!*ಸ್ಥಾವರದಲ್ಲಿ ನಾಲ್ಕು ವಿಧ: ವನಸ್ಪತಿಗಳು, ವೃಕ್ಷಗಳು, ಲತೆಗಳು ಮತ್ತು ಓಷಧಿಗಳು*ಜಂಗಮ ವರ್ಗದಲ್ಲಿ ನಾಲ್ಕು ವಿಧ : ಜರಾಯುಜ, ಅಂಡಜ, ಸ್ವೇದಜ ಮತ್ತು ಉದ್ಭಿಜ್ಜ*ಸಾತ್ತ್ವಿಕವಾದ ಬದುಕನ್ನು ನಡೆಸಲು ಸ್ಥಾವರ, ಜಂಗಮ ವರ್ಗಗಳಿಂದ ಆಯ್ದುಕೊಂಡು ಆಹಾರವನ್ನು ಸೇವಿಸಬೇಕು03-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಧರ್ಮ ಕ್ಷಯಿಸಿದರೆ ಒಳಿತೆಲ್ಲವೂ ಕ್ಷಯಿಸುತ್ತದೆ*ಕಲಬೆರಕೆಯೇ ಕಲಿಯುಗದ ಪ್ರಧಾನ ಗುಣ, ಕಲಿಯುಗದಲ್ಲಿ ಯಾವುದೂ ಕೂಡ ಶುದ್ಧವಾಗಿ ಉಳಿಯುವುದಿಲ್ಲ!*ಕೃತಯುಗದ ಆರಂಭದಲ್ಲಿ ಜಗತ್ತು ಹೇಗಿತ್ತು? ಪ್ರಜೆಗಳು ಹೇಗಿದ್ದರು?*ಹೊರಗಿನ ಬೆಳಕು ಜಾಸ್ತಿಯಾದ ಹಾಗೆ ನಮ್ಮ ಕಣ್ಣಿನ ಶಕ್ತಿ ಕಡಿಮೆಯಾಗುತ್ತಾ ಬರುತ್ತದೆ*"ಇದು ಹೀಗೇ ಇರದು" - ಇದು ಸೃಷ್ಟಿಯ ನಿಯಮ. ಕಷ್ಟ, ಸುಖ, ಸಂತೋಷ ಹಾಗೆಯೇ ಜೀವನದ ಎಲ್ಲಾ ಸಮಯದಲ್ಲಿ ಈ ಸಾಲನ್ನು ಮರೆಯಬಾರದು*ಕೃತಯುಗದ ಮೊದಲ ತಪ್ಪು ಹೆಜ್ಜೆ ಅಗ್ನಿ ಮತ್ತು ಆಹಾರದ ವಿಷಯದಲ್ಲಿ ಆಯಿತು*'ಸುಳ್ಳು' ಸಕಲ ದುರ್ಗುಣಗಳ ತಾಯಿ; ಅದರಿಂದ ಅಶುಭಗಳ ಸಾಲು ಹಿಂಬಾಲಿಸುತ್ತದೆ!*ಯುಗದ ಒಳಗೆ ಕೂಡ ಪ್ರತೀ ನೂರು ವರ್ಷ ಕಳೆದ ಹಾಗೆ ಆಯಸ್ಸು, ಯೋಗ್ಯತೆ, ಶುಭಗಳು ಎಲ್ಲವೂ ಕ್ಷಯವಾಗುತ್ತಾ ಹೋಗುತ್ತದೆ!*ಏನುನ್ನು ಊಟಮಾಡಬೇಕು?, ಹೇಗೆ ಊಟ ಮಾಡಬೇಕು? ಎಂಬುದನ್ನು ಹುಟ್ಟಿದ ಪ್ರತಿಯೊಂದು ಜೀವಿಗಳೂ ತಿಳಿದುಕೊಳ್ಳಲೇ ಬೇಕು02-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಮಹಾಕೈಲಾಸದಿಂದ ಪಾರ್ವತಿ ಇಳಿದು ಬರುವಾಗ ಒಂದು ಕೈಯಲ್ಲಿ ಅಕ್ಷಯಪಾತ್ರೆ, ಇನ್ನೊಂದು ಕೈಯಲ್ಲಿ ಚಿನ್ನದ ಸೌಟು ಹಿಡಿದು 'ಅನ್ನಪೂರ್ಣಾ ದೇವಿ'ಯಾಗಿ, ಪವಿತ್ರ ಕಾಶೀಕ್ಷೇತ್ರದಲ್ಲಿ ಅವತಾರವೆತ್ತಿ, ಜಗತ್ತಿನ ಎಲ್ಲಾ ಜೀವಿಗಳಿಗೂ ಅನ್ನದಾನ ಮಾಡುತ್ತಾಳೆ*"ಕಾಶೀ" ಭೂಮಂಡಲದ ಜೀವನಾಡಿ ಇದ್ದ ಹಾಗೆ!*"ಶುದ್ಧ ಚೈತನ್ಯ" ಎಂಬುದು ಪರಮ ಸತ್ಯ; ಆದರೆ ಅಲ್ಲಿಗೆ ಹೋಗುವವರೆಗೆ ಪ್ರಪಂಚ ಎಂಬುದು ವ್ಯಾವಹಾರಿಕ ಸತ್ಯವಷ್ಟೇ!*"ಅನ್ನ" ಎಂದರೆ ಅದು ಮೋಕ್ಷಪ್ರದ!*ಅನ್ನಪೂರ್ಣೇಶ್ವರಿ ಪೂರ್ಣ ಆರೋಗ್ಯ ಕೊಡುತ್ತಾಳೆ*ಅನ್ನದ ಮೂಲಕ ಬದುಕನ್ನು ತುಂಬುವವಳು ಅನ್ನಪೂರ್ಣೇಶ್ವರಿ!*ನಮ್ಮಲ್ಲಿ ಕೊರತೆ ಇರಬಹುದು; ಆದರೆ ಅನ್ನಪೂರ್ಣೆಯಲ್ಲಿ ಯಾವುದೇ ಕೊರತೆ ಇಲ್ಲ!*ಮುಕ್ತಿ ಎಂದರೆ ನೆಮ್ಮದಿಯ ಕಡಲು!*ನೈವೇದ್ಯ ಮಾಡುವಾಗ "ಪೂರ್ಣಕುಂಭಾಯ ನಮಃ" ಎನ್ನುವುದು ಏಕೆ?*ಪಾಯಸ ಎಂದರೆ ಏನು? *"ಅನ್ನ" ನಮ್ಮ ಮುಂದೆ ಇದ್ದಾಗ; ಪ್ರಕಟವಾದ ಅನ್ನಪೂರ್ಣೇಶ್ವರಿಯನ್ನು ಭಾವಿಸಿ ~ ನಮಿಸಿ ತುತ್ತು ಸ್ವೀಕಾರ ಮಾಡಬೇಕು01-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಜೀವನ ಚಿಕ್ಕದಲ್ಲ, ಬರುವ ಒಂದೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಳ್ಳಬೇಕು*ಷಡ್ರಸ ಎಂದರೆ ಮಹಾವಿಷ್ಣು ಸ್ವರೂಪ!*"ಅಮ್ಮ ~ ಅನ್ನ" ಇಬ್ಬರಿಗೂ ಗೌರವ ಕೊಡಬೇಕು*"ತಿನ್ನುವ ವಸ್ತು" ಇದನ್ನು ಪರಮಾತ್ಮ ಎಂದು ಭಾವಿಸಬೇಕು, ಏಕೆ ?*"ಅನ್ನ" ಮಾಡುವ ಉಪಕಾರವನ್ನು ತಂದೆ-ತಾಯಿ, ಬಂಧು-ಬಳಗ ಇವರಾರಿಂದಲೂ ಮಾಡಲು ಸಾಧ್ಯವಿಲ್ಲ! *ಗಂಗೆ ಬರಿಯ ಜಲ ಮಾತ್ರವೇ? *"ರಾಮ" ಮನುಷ್ಯ ಮಾತ್ರನಲ್ಲ; ಮಹಾವಿಷ್ಣು ಸ್ವರೂಪ! *ಹೇಗೆ ದೇವರು ಎಲ್ಲೆಡೆ ವ್ಯಾಪಿಸಿರುವನೋ ಹಾಗೆಯೇ "ಅನ್ನ" ದೇಹದ ಎಲ್ಲಾ ಕಡೆ ವ್ಯಾಪಿಸಿದೆ*"ಅನ್ನ" ಎಂದರೆ ವಿಶ್ವಧಾರಕ ಅವತಾರ!*ಮಹತ್-ತತ್ತ್ವವನ್ನು ಆಳುವ ಶಂಕರನ ರಾಣಿ ~ "ಅನ್ನಪೂರ್ಣೇಶ್ವರೀ"31-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಗರ್ಭಿಣಿಯರಿಗೆ ಕೆಲವು ಬಾರಿ ಸಂತೋಷ ಮತ್ತು ಕೆಲವು ಬಾರಿ ದುಃಖ ಭಾವನೆ ಉಂಟಾಗುವುದಕ್ಕೆ ಓಜಸ್ಸಿನ ಚಲನೆ ಕಾರಣ*ಗರ್ಭಾವಸ್ಥೆಯ ಎಂಟನೇ ತಿಂಗಳಿನಲ್ಲಿ ಮಗುವಿನ ಜನನವಾದರೆ ಏನಾಗುತ್ತದೆ?*ಆಹಾರವೇ ತಾಯಿ ಬೇರು, ಆಹಾರವಿಲ್ಲದೆ ಬದುಕಿಲ್ಲ*ಪ್ರಾಣಉಳ್ಳವರಿಗೆಲ್ಲಾ ಅನ್ನವೇ ಪ್ರಾಣ*ವರ್ಣ, ಪ್ರಸನ್ನತೆ, ಒಳ್ಳೆಯ ಸ್ವರ, ಬದುಕು, ಸುಖ, ಬಲ ಇವೆಲ್ಲವೂ ಅನ್ನದಿಂದ!*ಯಾರು ಹಿತವಾದ ಭೋಜನವನ್ನು ಮಾಡುತ್ತಾನೋ ಅವನು ಮೂವತ್ತಾರುಸಾವಿರ ರಾತ್ರಿಗಳ ಕಾಲ ರೋಗವಿಲ್ಲದೇ ಬದುಕುತ್ತಾನೆ ಎಂದು ಚರಕ ಮಹರ್ಷಿಗಳು ತಿಳಿಸಿದ್ದಾರೆ*ದೇಹವೂ ಆಹಾರದಿಂದಲೇ; ರೋಗವೂ ಆಹಾರದಿಂದಲೇ!*ಅನ್ನದಿಂದಲೇ ಜನನ, ಅನ್ನದಿಂದಲೇ ಜೀವನ, ಅನ್ನದಿಂದಲೇ ಮರಣ!*ಆಹಾರವೇ ಔಷಧ ಆಗಬೇಕೇ ಹೊರತು, ಔಷಧ ಆಹಾರವಾಗಬಾರದು-ಶ್ರೀಸೂಕ್ತಿ30-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹೃದಯದಲ್ಲಿ ಓಜಸ್ಸಿದೆ, ಅಲ್ಲಿಯೇ ಪ್ರಾಣವೂ ಸಹ ಇದೆ!*ನಾವು ಸ್ವೀಕರಿಸಿದ ಆಹಾರದ ಕೊನೆಯ ರೂಪವೇ "ಓಜಸ್ಸು"*ಓಜಸ್ಸನ್ನು ವೃದ್ಧಿಸಲು ಮುಖ್ಯವಾದ ಕಾರಣ ಏಕಾಗ್ರತೆ, ತನ್ಮಯತೆ, ಅಂತರ್ಮುಖತೆ!ಆತ್ಮಸಾಧನೆಯಿಂದ ಓಜಸ್ಸಿನ ವೃದ್ಧಿ!*ವಿವಾಹದ ಸಂದರ್ಭದಲ್ಲಿ 'ಕಾಶಿಯಾತ್ರೆ'ಯ ನಿಜವಾದ ಮಹತ್ವವೇನು?*ಓಜಸ್ಸಿನ ಮೂರು ಬಗೆಯ ದುಸ್ಥಿತಿಗಳು ಯಾವುವು?*ಕೋಪ, ದೇಹದ ವೇಗಧಾರಣೆ, ಶೋಕ, ಚಿಂತೆ, ಅತಿಯಾದ ಶ್ರಮ, ವಿಪರೀತ ಭಯ, ತುಂಬಾ ಖಾರದ ಒಣಗಿದ ಆಹಾರ ಸೇವನೆ, ರಾತ್ರಿ ಜಾಗರಣೆ - ಇವುಗಳಿಂದ ಓಜಸ್ಸು ಕ್ಷಯವಾಗುತ್ತದೆ!*ಅತಿಯಾದ ವ್ಯಾಯಾಮದಿಂದ ಹೃದಯಕ್ಕೆ ಅತೀವ ತೊಂದರೆಯಾಗುತ್ತದೆ!*ಓಜಸ್ಸಿನ ವೃದ್ಧಿಗೆ ದೇಸೀ ಗೋವಿನ ಹಾಲು ಉತ್ಕೃಷ್ಟವಾದ ಪದಾರ್ಥ *ಹಿಂದಿನ ಕಾಲದ ಜೀವನ ಪದ್ಧತಿಯಲ್ಲಿ ವ್ಯಾಯಾಮವು ಒಂದು ಅಂಗವೇ ಆಗಿತ್ತು*ಆತ್ಮಸಾಧನೆ, ಧ್ಯಾನ, ಯೋಗ, ಸಮಾಧಿ - ಇವುಗಳಿಗೆ ಮಧುರ ರಸವು ತುಂಬಾ ಉಪಯೋಗಕಾರಿ29-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಎಲ್ಲಾ ಜೀವಗಳಿಗೂ ಅನ್ನವೆಂದರೆ ಆನಂದ, ಅದರ ನೆನಪೇ ಸಂತೋಷ ಕೊಡುವಂಥದ್ದು!*'ಅನ್ನ', ಸೇವಿಸಿದ ಕೂಡಲೇ ದೇಹಕ್ಕೆ ಬಲ ಕೊಡಲು ಶುರುಮಾಡುತ್ತದೆ!*ಆಹಾರವೇ ನಮ್ಮ ಶರೀರವನ್ನು ಧರಿಸಿದೆ*ಬುದ್ಧಿ, ಆಯಸ್ಸು, ಚರ್ಮದ ಬಣ್ಣ, ಓಜಸ್ಸು, ತೇಜಸ್ಸು, ಸತ್ತ್ವ, ಉತ್ಸಾಹ, ಶೋಭೆ - ಇದೆಲ್ಲವನ್ನೂ ಅನ್ನವು ವರ್ಧಿಸುತ್ತದೆ!*ಓಜಸ್ಸನ್ನು ದೇಹದಲ್ಲಿಯೇ ಇರುವ ಒಂದು ಬಗೆಯ ಅಮೃತವೆಂದು ಏಕೆ ಕರೆಯುತ್ತಾರೆ!?*ಓಜಸ್ಸು ಇದ್ದರೆ ನಾವು, ಇಲ್ಲದಿದ್ದರೆ ಸಾವು!*ತುಪ್ಪದ ಬಣ್ಣದ, ಜೇನಿನ ಸವಿಯ, ಅರಳಿನ ಪರಿಮಳದ ಅನುಪಮ ದ್ರವ್ಯ "ಓಜಸ್ಸು"!*ಓಜಸ್ಸು ಕ್ಷೀಣಿಸಿದರೆ ಭಯ, ದೌರ್ಬಲ್ಯ, ಸತತ ಚಿಂತೆ, ತೇಜಸ್ಸು ಹಾನಿ, ಶರೀರ ಒಣಗಿ ಕ್ಷೀಣಿಸಿ, ಕೊನೆಗೆ ಮರಣ!28-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಮೂಲಾಗ್ನಿ - ಎಲ್ಲಾ ಅಗ್ನಿಗಳ ಮೂಲ, ಅದು ಅಗೋಚರ!*"ತುಪ್ಪ" ಅಗ್ನಿಯನ್ನು ಉದ್ದೀಪನ ಮಾಡಿ, ಪಿತ್ತವನ್ನು ಶಮನ ಮಾಡುತ್ತದೆ*ನಮ್ಮ 'ಚಿತ್ತ' ಎಷ್ಟು ಆಳಕ್ಕೆ ಇಳಿಯುವುದೋ ಅಷ್ಟು ನಾವು ದೇವತೆಗಳಿಗೆ ಹತ್ತಿರ ಆಗುತ್ತಾ ಹೋಗುತ್ತೇವೆ*ಸಾಧನೆಯಲ್ಲಿ ಧ್ಯಾನ ಮಾರ್ಗಕ್ಕೆ ಇಳಿದಾಗ ಆಹಾರ ಕಡಿಮೆ ಸಾಕಾಗುವುದು*ಸರಿಯಾದ ಸಂಕಲ್ಪ ಮಾಡಿ, ಮನಸ್ಸುನ್ನು ಹಿಡಿತಕ್ಕೆ ಪಡೆದವನಿಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ*ಹಸಿವು ಗೊತ್ತಾಗದವನಿಗೆ "ಊಟ" ಅರ್ಥವಾಗುವುದಿಲ್ಲ!*ಆಹಾರ ಮೊಟ್ಟ ಮೊದಲು ದರ್ಶನ ಮಾತ್ರದಿಂದಲೇ ಸಂತೋಷ ಕೊಡುತ್ತದೆ*ಅನ್ನ ಎಂದರೆ ಆನಂದ!*ಅನ್ನದಲ್ಲಿ ದೇವರ ಲಕ್ಷಣಗಳು ಕಾಣುತ್ತವೆ, ಹಾಗಾಗಿ "ಅನ್ನಂ ಬ್ರಹ್ಮ!"27-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ತರಕಾರಿಗಳನ್ನು ಬೇಯಿಸಿಯೇ ತಿನ್ನಬೇಕೇ?;ಹೆಸರುಬೇಳೆ, ಹೆಸರುಕಾಳು ಕೊಸಂಬರಿ ಏಕೆ ಉತ್ತಮ?*ಉಸಿರಾಟದಲ್ಲಿ ಮೂರು ವಿಧ - ಚಂದ್ರನಾಡಿ, ಸೂರ್ಯನಾಡಿ ಹಾಗೂ ಸುಶುಮ್ನಾನಾಡಿ ಉಸಿರಾಟ!*ಜ್ಯೌತಿಷ ಹಾಗೂ ಸ್ವರಶಾಸ್ತ್ರದಲ್ಲಿ ಉಸಿರಾಟದ ಬಗ್ಗೆ ಏನು ಹೇಳಿದ್ದಾರೆ?*ಉಸಿರು ಬಿಡುವುದು ಮತ್ತು ತೆಗೆದುಕೊಳ್ಳುವುದು ಯಾವ ರೀತಿ ಆಗಬೇಕು?*ಉಸಿರಾಟದ ಮೂಲ ರೂಪವೇ "ಓಂ"!*ಉಸಿರಾಟ ಪ್ರಕ್ರಿಯೆ ಸರಿಯಾಗಿ ಆದರೆ ಜೀವನದಲ್ಲಿ ಆನಂದ, ಸಮಾಧಾನ, ರೋಗಗಳಿಂದ ಮುಕ್ತಿ ಹಾಗೂ ಪಾಪಗಳನ್ನೂ ದೂರ ಮಾಡಲು ಸಾಧ್ಯ*ಅಂತಃಕರಣದಿಂದಲೇ ಸಾಧನೆ; ಅಂತಃಕರಣಕ್ಕೆ ಹತ್ತಿರದ ಉಪಕರಣವೇ "ಶ್ವಾಸ"!26-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಮಕ್ಕಳ ಎಂಜಲನ್ನು ತಂದೆತಾಯಂದಿರು ಮತ್ತು ತಂದೆತಾಯಂದಿರ ಎಂಜಲನ್ನು ಮಕ್ಕಳು ಸೇವಿಸಬಾರದು!*ಕಲಿಯುಗದಲ್ಲಿ ಅನರ್ಥಗಳನ್ನು ತಡೆಯಲು ಪರಮಾತ್ಮನು ಅವತಾರ ತಾಳುತ್ತಾನೆಯೇ?*ಉಸಿರನ್ನು ಆಹಾರವೆಂದು ಪರಿಗಣಿಸಬಹುದೇ?*ಉಸಿರಾಟವು ಜಠರಾಗ್ನಿಯನ್ನು ಉದ್ದೀಪನಗೊಳಿಸುತ್ತದೆ!*ಕೋಪ, ಭಯ, ಆತಂಕವಾದಾಗ ತಕ್ಷಣಕ್ಕೆ ಏನು ಮಾಡಬೇಕು??*ಮನಸ್ಸು ಶಾಂತವಾಗಿದ್ದಾಗ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ!*ಆಯಸ್ಸು, ಮೈಬಣ್ಣ, ಬಲ, ಆರೋಗ್ಯ, ಉತ್ಸಾಹ, ಬೆಳವಣಿಗೆ, ಓಜಸ್ಸು, ತೇಜಸ್ಸು - ಎಲ್ಲವೂ ಜಠರಾಗ್ನಿಯ ಮೇಲೆ ಅವಲಂಬಿಸಿದೆ!*ಪ್ರಾಣವಾಯುವಿಗೆ ಸತತ ಊರ್ಧ್ವಗತಿ ಏಕೆ!?*ಒಬ್ಬ ಮನುಷ್ಯನು ಪ್ರತಿದಿನ ಸರಾಸರಿ 21,600 ಬಾರಿ ಉಸಿರಾಟ ಮಾಡುತ್ತಾನೆ!*ಪ್ರಾಣ ದೀರ್ಘವಾಗಿ ಅಪಾನ ಹ್ರಸ್ವವಾಗಬೇಕು!;ಉಸಿರು ತೆಗೆದುಕೊಳ್ಳುವಾಗ ಕಡಿಮೆಯಿರಬೇಕು, ಬಿಡುವ ಉಸಿರು ದೀರ್ಘವಾಗಿರಬೇಕು!25-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*"ಉಸಿರು" ~ ಜೀವನದ ಪ್ರತಿನಿಧಿ; ಉಸಿರಾಟ ಸರಿಯಾದರೆ ಜೀವನವೇ ಸರಿಯಾಗುತ್ತದೆ*ನಿದ್ರೆ, ರೋಗ, ಹಸಿವು ಇವುಗಳನ್ನು ಜಯಿಸಬಹುದೇ?!;ಸಾವಿರಾರು ಕಾಲ ಬದುಕುಲು ಸಾಧ್ಯವೇ?*ಯೋಗ ಎಂದರೆ ಸಂಯಮ*"ತುಪ್ಪ" ಸರ್ವಶ್ರೇಷ್ಠ ಆಹಾರ*"ಪ್ರಾಣಾಯಾಮ" ಮಾಡಲು ಹೆಣ್ಣು ಮಕ್ಕಳಿಗೆ ಹೇಳಿಕೊಡುವುದಿಲ್ಲ, ಏಕೆ?*ಯೋಗಾಭ್ಯಾಸ ಮಾಡುವವನಿಗೆ ಹೆಜ್ಜೆ ಹೆಜ್ಜೆಗೂ ಗುರುವಿನ ಆಶೀರ್ವಾದ ~ ಮಾರ್ಗದರ್ಶನ ಬೇಕು*ತೀಕ್ಷ್ಣಾಗ್ನಿ ದೀರ್ಘಕಾಲ ಮುಂದುವರೆದರೆ ಅನಾರೋಗ್ಯ ಉಂಟಾಗುತ್ತದೆ*ಅಮೃತದ ಮಳೆ ನಮ್ಮೊಳಗೆ ಉಂಟಾಗುವುದು ಯಾವಾಗ?*ಸೂತ್ರದೊಳಗೊಳಪಟ್ಟ ಬದುಕ ನೀ ನಡೆಸುತಿರೆ ಹರಡಿ ಮೈಯೊಳು ಬಿಸಿಯ ಜ್ವಲಿಸೆ ಕಾಯಾಗ್ನಿ ಕೋಟಿ ಜನ್ಮದ ಗಾಢನಿದ್ದೆಯನು ತೊರೆದೆದ್ದು ಸಾಗುವಳು ಪರಮಪದದೆಡೆಗೆ ಕುಂಡಲಿನಿ-ಶ್ರೀಕಾವ್ಯ*ಪ್ರಾಣಾಪಾನಗಳ ಐಕ್ಯ ಎಂದರೇನು?! *ಅಮೃತಪಾನ ಮಾಡಿ ನಾವೂ ಅಮೃತರಾಗಬಹುದು; ಅದು ಜೀವನದ ಪರಮ, ಚರಮ ಲಕ್ಷ್ಯ24-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹಸಿವೆಂಬುದು ಒಂದು ಸಣ್ಣ ಅಭಿವ್ಯಕ್ತಿ ಅದರ ಹಿಂದೆ ಮಹಾಶಕ್ತಿ ಇದೆ, ಅದೇ "ಅಗ್ನಿ"*ಚರಾಚರ ಸೃಷ್ಟಿಯಲ್ಲಿ ಅತ್ಯಂತ ರುಚಿಕರವಾದ ಪದಾರ್ಥವೇ "ಅಮೃತ"*ತಮ್ಮೊಳಗೇ ಅಮೃತ ಪಾನವನ್ನು ಮಾಡುವವರು "ಯೋಗಿಗಳು"*ನಮ್ಮ ದೇಹದಲ್ಲಿ ಸೂರ್ಯ ಮಂಡಲ ಹಾಗೂ ಚಂದ್ರ ಮಂಡಲ ಎರಡೂ ಇದೆ, ಅವುಗಳ ಸ್ಥಾನ ಯಾವುದು?*ಸಾವು, ಮುಪ್ಪು, ರೋಗ, ವಿಷಬಾಧೆ, ಹಸಿವು, ಬಾಯಾರಿಕೆ ಉಂಟಾಗಲು ಕಾರಣವೇನು? ಇವುಗಳನ್ನು ಗೆಲ್ಲಲು ಸಾಧ್ಯವೇ?!*ನಮ್ಮೊಳಗೆ ಕ್ಷಣ ಕ್ಷಣಕ್ಕೂ ಸುಟ್ಟು ಹೋಗುತ್ತಿರುವ ಅಮೃತದ್ರವವನ್ನು ಉಳಿಸಿಕೊಂಡರೆ ಅಮರರಾಗಬಹುದು ಎಂದು ಯೋಗಶಾಸ್ತ್ರ ತಿಳಿಸಿದೆ*ಕಠಿಣ ಸಾಧನೆಯಿಂದ ಮೂಲಾಗ್ನಿ ಭುಗಿಲೆದ್ದುವ್ಯಾಪಿಸಿರೆ ವಿಸ್ತರಿಸಿ ತನುವಿನೊಳು ಬಿಸಿಯತಾಲುಮೂಲದೊಳಿರುವ ಚಂದ್ರಮಂಡಲ ಕರಗಿಸುಧೆಯಾಗಿ ಸುರಿವಾಗ ಸವಿದವನು ಧನ್ಯ-ಶ್ರೀಕಾವ್ಯ23-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಎಂಜಲಾದ ಆಹಾರ ಪದಾರ್ಥ ಸೇವನೆಗೆ ಯೋಗ್ಯವಲ್ಲ ಎಂಬ ನಿಯಮ ದಂಪತಿಗಳಿಗೂ ಅನ್ವಯಿಸುತ್ತದೆಯೇ?!*ದೇಹದಲ್ಲಿ "ಆತ್ಮ" ರಾಜ; ಮನಸ್ಸು, ಪ್ರಾಣ, ಇಂದ್ರಿಯಗಳು ಆತ್ಮದ ಅಧೀನದಲ್ಲಿ ಇರುವಂತಹದ್ದು*ಸೀತೆ ಅಗ್ನಿಯನ್ನು ಆಳಿದವಳು! ರಾಮಾಯಣದಲ್ಲಿ ಇದರ ನಿರೂಪಣೆ ಹೇಗಿದೆ?*ಅಡುಗೆ ಮಾಡುವಾಗ, ಬಡಿಸುವಾಗ ಸೌಟನ್ನು ಪ್ರದಕ್ಷಿಣೆ ಗತಿಯಲ್ಲಿ ತಿರುಗಿಸಬೇಕು, ಏಕೆ?;*ಸೀತೆಗೆ ಅಗ್ನಿ ಶುದ್ಧಿ ಹಾಗೂ ಅಗ್ನಿ ಸಿದ್ಧಿ ಇತ್ತು!ಅಗ್ನಿ ಸಾಧನೆ ಕೇವಲ ಪುರುಷರಿಗೆ ಮಾತ್ರವಲ್ಲ ಸ್ತ್ರೀಯರಿಗೂ ಸಾಧ್ಯ!*ಜ್ವರ ಬಂದಾಗ ಅಥವಾ ಚಿಂತೆ, ದುಃಖವಾದಾಗ ಹಸಿವಾಗುವುದಿಲ್ಲ ಏಕೆ?!*ಸರಿಯಾಗಿ ಊಟಮಾಡುವುದು ಹಾಗೂ ಸಕ್ರಮ ಉಪವಾಸದಿಂದ ಅಗ್ನಿಯನ್ನು ಒಲಿಸಬಹುದು *ಗುರುವೇ ಅಗ್ನಿ ~ ಅಗ್ನಿಯೇ ಗುರು!*ಅಗ್ನಿ ಪರಿಚರ್ಯೆಯನ್ನು ಒಳಗಿನಿಂದ ಹಾಗೂ ಹೊರಗಿನಿಂದ ಸರಿಯಾಗಿ ಮಾಡಬೇಕು22-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹೆಚ್ಚಾದ ಅನ್ನವನ್ನು ಎಲೆಯಲ್ಲಿ ಬಿಟ್ಟರೆ ವ್ಯರ್ಥ, ಸೇವಿಸಿದರೆ ಅನರ್ಥ! ಇದಕ್ಕೆ ಪರಿಹಾರವೇನು?*ನಿದ್ದೆ, ತೂಕಡಿಕೆ, ಮೂರ್ಛೆ, ಹುಚ್ಚು - ಇವುಗಳು ಏರ್ಪಡುವುದು ವಾತ, ಪಿತ್ತ, ಕಫಗಳ ಆಟಗಳಿಂದ!*ತಿಂದ ತಕ್ಷಣ ಸಾಯುವಂತೆ ಮಾಡುವುದು ಮಾತ್ರ ವಿಷವಲ್ಲ, ನಮ್ಮ ದೇಹಕ್ಕೆ ಯಾವುದನ್ನು ಜೀರ್ಣಿಸಿಕೊಳ್ಳಲಾಗುವುದಿಲ್ಲವೋ ಅದೂ ವಿಷವೇ!*ನಳ ಚಕ್ರವರ್ತಿಯು ಪಂಚಭೂತಗಳನ್ನು ಗೆದ್ದಿದ್ದನು! ನಳ ದಮಯಂತಿಯ ಕಥೆಯಲ್ಲಿ ಅದರ ನಿರೂಪಣೆ ಹೇಗಿದೆ?*ಪ್ರಕೃತಿಗೆ ಅನುಗುಣವಾಗಿ ಸರಿಯಾಗಿ ಊಟ ಮಾಡಿದರೆ ಅಥವಾ ಕ್ರಮಬದ್ಧವಾಗಿ ಉಪವಾಸ ಮಾಡಿದರೆ ಸಾಮಾನ್ಯ ಮನುಷ್ಯರಿಗೂ ಅಗ್ನಿಯನ್ನು ಗೆಲ್ಲಲು ಸಾಧ್ಯವಿದೆ!*ನಳ ಚಕ್ರವರ್ತಿಯ ನೆನಪೇ "ಕಲಿ"ಯನ್ನು ದೂರಮಾಡುತ್ತದೆ!*ಅಗ್ನಿಯನ್ನು ಒಲಿಸಿಕೊಳ್ಳುವುದೇ ಜೀವನದ ಗುರಿ!21-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಊಟವನ್ನು ಸಿಹಿಯಿಂದ ಪ್ರಾರಂಭ ಮಾಡಬೇಕು ಏಕೆ?*ಊಟದ ಮಧ್ಯದಲ್ಲಿ ನೀರನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕುಡಿಯಬೇಕು*ಆಹಾರ ಎಂಜಲಾದರೆ ಅದು ತಾಮಸವಾಗುತ್ತದೆ!*ಸ್ವೀಕರಿಸಿದ ಆಹಾರ ಧಾತುಗಳಾಗಿ ಪರಿಣಾಮವಾಗಲು ಆರು ಸಂಗತಿಗಳು ಕಾರಣ: ಊಷ್ಮ(ಅಗ್ನಿ), ವಾಯು, ಕ್ಲೇದ(ದ್ರವ), ಸ್ನೇಹ(ಜಿಡ್ಡು), ಕಾಲ ಮತ್ತು ಸಮಯೋಗ(ಸಮನ್ವಯತೆ)*ಆಹಾರ ಹೊಟ್ಟೆಯೊಳಗೆ ಹೋದಮೇಲೆ ಅದು ಮೂರು ಹಂತದಲ್ಲಿ ಜೀರ್ಣವಾಗುತ್ತದೆ*ರಾತ್ರಿ ಸೇವಿಸಿದ ಆಹಾರ ಮಧುರ ಪಾಕಾವಸ್ಥೆಯಲ್ಲಿ ಇದ್ದಾಗಲೇ ನಿದ್ದೆ ಮಾಡಬೇಕು, ಕಫದ ಕಾಲದಲ್ಲಿಯೇ ನಿದ್ದೆ ಮಾಡಿದಾಗ ಗಾಢನಿದ್ದೆ ಬರುತ್ತದೆ*ನಳ ಚಕ್ರವರ್ತಿಯು ಅಗ್ನಿಯನ್ನು ಗೆದ್ದಿದ್ದನು! ನಳ ದಮಯಂತಿಯ ಕಥೆಯಲ್ಲಿ ಇದರ ಸಂಕ್ಷಿಪ್ತ ನಿರೂಪಣೆ ಹೇಗಿದೆ?20-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಮ್ಮ ದೇಹದಲ್ಲಿ ಜಠರಾಗ್ನಿಯೇ ಎಲ್ಲಾ ಅಗ್ನಿಗಳಿಗೂ ಅಧಿಪತಿ*ಪಾಚಕಾಗ್ನಿಯಿಂದ ಆಯುಸ್ಸು ಉಳಿಯುತ್ತದೆ ಮತ್ತು ಶಕ್ತಿ ಹೆಚ್ಚುತ್ತದೆ*ಆಹಾರದ ಜೀರ್ಣಕ್ರಿಯೆಯಲ್ಲಿ ಪ್ರಾಣವಾಯು, ಸಮಾನವಾಯುಗಳ ಪಾತ್ರವೇನು??*ಚೆನ್ನಾಗಿ ಅಗಿದು ತಿನ್ನದಿದ್ದರೆ ಜಠರಾಗ್ನಿಯ ಮೇಲೆ ಒತ್ತಡ ಜಾಸ್ತಿಯಾಗುತ್ತದೆ*ಪಾತ್ರೆಯಲ್ಲಿ ಅಕ್ಕಿಯನ್ನು ಬೆಂಕಿಯು ಹೇಗೆ ಬೇಯಿಸಿ ಅನ್ನವನ್ನಾಗಿಸುತ್ತದೆಯೋ ಹಾಗೆಯೇ ಹೊಟ್ಟೆಯಲ್ಲಿ ಅಗ್ನಿಯು ನಾವು ತಿಂದ ಆಹಾರವನ್ನು ಜೀರ್ಣ ಮಾಡುತ್ತದೆ!*ನಾವು ಸ್ವೀಕರಿಸಿದ ಆಹಾರದಲ್ಲಿ ಸಾರವನ್ನು ಬಿಟ್ಟು ಉಳಿದ ಬೇಡದ ಪದಾರ್ಥವನ್ನು ಹೊರಗೆ ಹಾಕುವುದು ಅಪಾನ ವಾಯು*ಮಹಾಪ್ರಾಣ ಅಕ್ಷರಗಳ ಸರಿಯಾದ ಉಚ್ಚಾರಣೆಯಿಂದ ಅಗ್ನಿ ಜಾಗೃತಿ!*ಮಾತು, ಸಂಗೀತ ಯಾವ ವಾಯುವಿನಿಂದ ಸಾಧ್ಯವಾಗುತ್ತದೆ??*ಎಂಜಲಾದ ಆಹಾರ ಪದಾರ್ಥ ಸೇವನೆಗೆ ಯೋಗ್ಯವಲ್ಲ ಯಾಕೆ?*ಊಟ ಮತ್ತು ಉಸಿರಾಟಕ್ಕೆ ಅವಿನಾಭಾವ ಸಂಬಂಧವಿದೆ!19-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಮ್ಮೊಳಗಿನ ಪಂಚಾಗ್ನಿಯನ್ನು ಚೆನ್ನಾಗಿಟ್ಟುಕೊಂಡರೆ ನಮ್ಮ ಬದುಕೇ ಪಂಚಾಗ್ನಿ ತಪಸ್ಸಾಗಬಹುದು!*ನಮ್ಮ ದೇಹದಲ್ಲಿ ಎಲ್ಲೆಡೆಯೂ ಅಗ್ನಿ ಇದೆ*ಆಧುನಿಕ ವಿಜ್ಞಾನ ಮತ್ತು ಸನಾತನ ಧರ್ಮ ಶಾಸ್ತ್ರಗಳು ನಮ್ಮ ದೇಹವು ಯಾವುದರಿಂದ ಕೂಡಿದೆ ಎಂದು ಹೇಗೆ ವರ್ಣಿಸಿವೆ?? *ನಮ್ಮ ದೇಹದ ಸಪ್ತಧಾತುಗಳ ಕೆಲಸಗಳೇನು?*ದೇವಿಯ ವಿವಿಧ ರೂಪಗಳು ಮತ್ತು ನಮ್ಮ ದೇಹದ ಸಪ್ತಧಾತುಗಳ ಸಂಬಂಧವನ್ನು ಲಲಿತಾಸಹಸ್ರನಾಮದಲ್ಲಿ ನಿರೂಪಿಸಲಾಗಿದೆ*ಜ್ಯೌತಿಷದ ಪ್ರಕಾರ ಗ್ರಹಗಳಿಗೂ ಮತ್ತು ಸಪ್ತಧಾತುಗಳಿಗೂ ಏನು ಸಂಬಂಧ?*ಪಂಚಭೂತಗಳು ನಮ್ಮ ದೇಹದೊಳಗೆ ಸಪ್ತಧಾತುಗಳಾಗಿ ಪರಿವರ್ತನೆಯಾಗುವುದಕ್ಕೆ ಕಾರಣ "ಅಗ್ನಿ"*ಗಂಗೆಯಲ್ಲಿ ಅಸ್ಥಿಯನ್ನು ಏಕೆ ಹಾಕಬೇಕು? ಅದರಿಂದ ಜೀವಕ್ಕಾಗುವ ಉಪಯೋಗವೇನು??*ಧಾತುಸಾಮ್ಯವನ್ನು ಏರ್ಪಡಿಸುವುದೇ "ಚಿಕಿತ್ಸೆ"! ಧಾತುಗಳು ಒಂದಕ್ಕೊಂದು ಪೂರಕವಾಗಿಲ್ಲದಿದ್ದರೆ ಬದುಕೇ ಇಲ್ಲ!*ಉಗುರು, ಕೂದಲನ್ನು ಕತ್ತರಿಸಿದರೆ ನಮಗೆ ನೋವಾಗುವುದಿಲ್ಲ ಏಕೆ?18-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಮ್ಮೊಳಗೆ ಅಗ್ನಿಯ ಐದು ಅವತಾರಗಳು - ಪಾಚಕ, ರಂಜಕ, ಸಾಧಕ, ಆಲೋಚಕ ಮತ್ತು ಭ್ರಾಜಕ; ಅವುಗಳ ಸ್ಥಾನಗಳು ಯಾವುವು?*ಪಾಚಕ ಅಗ್ನಿಯೇ ಬೇರೆಲ್ಲಾ ಅಗ್ನಿಗಳಿಗೆ ಶಕ್ತಿ ಕೊಡುವಂತಹದ್ದು!*ರಕ್ತವು ಕೆಂಪಾಗಿರುವುದಕ್ಕೆ ಮತ್ತು ಮನಸ್ಸಿನಲ್ಲಿ ರಾಗ, ಪ್ರೀತಿ, ಭಾವಗಳ ಉತ್ಪತ್ತಿಗೆ ರಂಜಕ ಅಗ್ನಿಯೇ ಕಾರಣ! *ಇಹ-ಪರ ಎರಡರ ಸಾಧನೆಗೂ ಸಾಧಕಾಗ್ನಿಯೇ ಕಾರಣ, ಸಾಧಕಾಗ್ನಿಯ ಪರಮ ಲಕ್ಷ್ಯವೇ ಮೋಕ್ಷದ ಸಾಧನೆ! *ಚರ್ಮದ ಮೇಲೆ ಯಾವುದೇ ಲೇಪನ ಹಾಕಿದರೆ ಅದನ್ನು ನಮ್ಮ ದೇಹ ಹೀರುವುದು*ನಮ್ಮ ಚರ್ಮದ ಕಾಂತಿ, ಸೌಂದರ್ಯ, ಛಾಯೆ, ತೇಜಸ್ಸು - ಭ್ರಾಜಕಾಗ್ನಿಯ ಕಾರಣದಿಂದ!*ಅಗ್ನಿ ಮಾತ್ರದಿಂದಲೇ ಬಯಸಿದ್ದನ್ನು ಪಡೆಯಬಹುದು;ಅಸಾಧ್ಯವಾದುದನ್ನು ಸಾಧಿಸಬಹುದು; ಹಾಗಾಗಿ ನಾವು ಅಗ್ನಿಯ ಉಪಾಸನೆಯನ್ನು ಮಾಡೋಣ, ಅಗ್ನಿಯನ್ನು ಅರಿಯುವ ಪ್ರಯತ್ನ ಮಾಡೋಣ!17-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹಣ ಕಡಿಮೆಯಾದರೆ ಹಾಹಾಕಾರ! ಹೆಚ್ಚಾದರೆ ಅಹಂಕಾರ! ಎರಡೂ ಸಮಸ್ಯೆಯೇ, ಹಾಗಾಗಿ ಹಣವೂ ಕೂಡ ಸಮಪ್ರಮಾಣದಲ್ಲಿರಬೇಕು;ಜೀವನದಲ್ಲಿ ಎಲ್ಲವೂ ಸಮಪ್ರಮಾಣದಲ್ಲಿರಬೇಕು*ಅಗ್ನಿಯ ನಾಲ್ಕು ಅವಸ್ಥೆಗಳು - ಮಂದ, ತೀಕ್ಷ್ಣ, ವಿಷಮ ಮತ್ತು ಸಮ*ಜೀವನದಲ್ಲಿ ಆತ್ಮಾವಲೋಕನ ಹೇಗೆ ಮುಖ್ಯವೋ ಹಾಗೆಯೇ ನಮ್ಮೊಳಗಿನ ಅಗ್ನಿಯ ಅವಲೋಕನವೂ ಕೂಡ ಮುಖ್ಯ!*ಬೆಳಿಗ್ಗೆ ಏಳುವಾಗ ರಾತ್ರಿ ಊಟವು ಪೂರ್ಣವಾಗಿ ಜೀರ್ಣವಾಗಿರಬೇಕು, ಆಗ ಕುಶಲನಾಗಿರಲು ಸಾಧ್ಯ*ರಾತ್ರಿಭೋಜನ ಪೂರ್ಣ ಜೀರ್ಣವಾಗಿರಬೇಕು ಸುಪ್ರಭಾತಕೆ ಮುನ್ನ ದೇಹ ಕುಶಲವಿರೆನಿರ್ಮಲೋದರನಾಗಿ ನವದಿನಕೆ ಮುನ್ನಡೆಯೊಹೊಸದಿನದ ಸಂಭ್ರಮಕೆ ಬೇಕೆ ಹಳೆಮುಸುರೆ? -ಶ್ರೀಕಾವ್ಯ*ಅಗ್ನಿಯು ಸಮವಾಗಿದ್ದರೆ ಮಾತ್ರ ದೇಹ, ಇಂದ್ರಿಯಗಳು, ಮನಸ್ಸು, ಆತ್ಮ ಎಲ್ಲವೂ ಪ್ರಸನ್ನವಾಗಿರುತ್ತದೆ; ಇಲ್ಲದಿದ್ದರೆ ಯಾವುದೂ ಸರಿ ಇರುವುದಿಲ್ಲ!*ಅಗ್ನಿಯ ನಾಲ್ಕು ಅವಸ್ಥೆಯ ಗುಣಗಳು;ದೇಹದ ಮೇಲೆ ಅಗ್ನಿ ಅವಸ್ಥೆಯ ಪರಿಣಾಮಗಳು, ಪರಿಹಾರಗಳು; ಯಾವುವು?*ಪಾಶ್ಚಿಮಾತ್ಯ ವೈದ್ಯ ಪದ್ಧತಿಗಳು ರೋಗ ಬಂದರೆ ಏನು ಮಾಡಬೇಕೆಂದು ಹೇಳಿದರೆ, ಆಯುರ್ವೇದವು ರೋಗ ಬಾರದಂತೆ ಹೇಗಿರಬೇಕು ಎಂದು ಹೇಳುತ್ತದೆ!*ಆರೋಗ್ಯ ಮತ್ತು ಅಧ್ಯಾತ್ಮ - ಈ ಎರಡರ ಸಾಧನೆಯು ಒಂದೇ!16-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಯಾರು ತನ್ನ ದೇಶ, ನಮ್ಮ ಪರಂಪರೆಯ ಸಿದ್ಧಾಂತಕ್ಕೆ ಮಹತ್ವವನ್ನು ಕೊಡುತ್ತಾನೋ ಅವನೇ "ಸ್ವತಂತ್ರ"*ದೇಹದಲ್ಲಿ ವಿಷ್ಣುವಿನ ಸ್ಥಾನ ಅನಾಹತ ಚಕ್ರದಲ್ಲಿದೆ; ಅಲ್ಲಿಯೇ "ಓಜಸ್" ಎಂಬ ಅಮೃತವೂ ಇದೆ*ನಮ್ಮ ಭಾವನೆಗಳಿಂದ ಅಗ್ನಿಯ ಶಕ್ತಿಯನ್ನು ಹೆಚ್ಚಿಸಬಹುದು!*ನಮ್ಮ ದೇಹದಲ್ಲಿರುವ ಪಂಚಭೂತಗಳ ಸ್ಥಾನಗಳನ್ನು ಸೌಂದರ್ಯ ಲಹರಿಯಲ್ಲಿ ಹೇಗೆ ವರ್ಣಿಸಿದ್ದಾರೆ?*ಪಂಚಭೂತಗಳ ಗುಣಗಳು ಯಾವುವು?*ನಮ್ಮೊಳಗೆ ಅಗ್ನಿಯು ಹೃದಯದಲ್ಲಿ ಬೆಳಕಾಗಿ ಮತ್ತು ನಾಭಿಯಲ್ಲಿ ಜಠರಾಗ್ನಿಯಾಗಿ ನಮ್ಮನ್ನು ಪಾಲಿಸುತ್ತಿದ್ದಾನೆ*ನಮ್ಮ ಇಡೀ ದೇಹವು ಪವಿತ್ರವೇ ಆದರೂ ನಾಭಿಯ ಮೇಲ್ಭಾಗ ಹೆಚ್ಚು ಪವಿತ್ರ*ವಾತ ಹೆಚ್ಚಾದರೆ ನೋವು; ಪಿತ್ತ ಹೆಚ್ಚಾದರೆ ಉರಿ ಮತ್ತು ಕಫ ಹೆಚ್ಚಾದರೆ ತುರಿಕೆ ಉಂಟಾಗಬಹುದು*ಎಡಮಗ್ಗಲಲ್ಲಿ ಮಲಗಬೇಕು, ಬಲಮಗ್ಗಲಲ್ಲಿ ಏಳಬೇಕು.. ಏಕೆ?!*ತುಪ್ಪವನ್ನು ಮುಟ್ಟಿ ನಾಭಿಯ ಸುತ್ತ ನಲವತ್ತೆಂಟು ಬಾರಿ ಸವರುವುದರಿಂದ ಅಜೀರ್ಣವು ಶಮನಗೊಳ್ಳುತ್ತದೆ!15-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹಸಿವು ಎಂಬ ಶಕ್ತಿ ಸಾಕ್ಷಾತ್ ಪರಮಾತ್ಮನೇ ಆಗಿದ್ದಾನೆ*ಅನ್ನವನ್ನು ಕೀಳಾಗಿ ಕಂಡು ಅಥವಾ ಕೋಪಗೊಂಡು ಊಟ ಮಾಡಿದರೆ ಅದು ದೇವತೆಗಳಿಗೆ ಸಮರ್ಪಣೆ ಆಗುವುದಿಲ್ಲ, ಬದಲಾಗಿ ರಾಕ್ಷಸರಿಗೆ ಸಲ್ಲುತ್ತದೆ*ಕೋಪ, ಅಸೂಯೆ, ಭಯ, ಲೋಭ, ಶೋಕ, ದೈನ್ಯ ಅಥವಾ ಯಾರಮೇಲಾದರರೂ ದ್ವೇಷ ಮಾಡುತ್ತಾ ಊಟ ಮಾಡಿದರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ*ನಿಂತುಕೊಂಡು ಆಹಾರ ಅಥವಾ ಪಾನೀಯ ಸ್ವೀಕಾರ ಮಾಡಬಾರದು, ಏಕೆ?!*ಭಾರತೀಯರ ಕುಳಿತು ಊಟ ಮಾಡುವ ಭಂಗಿಯು "ಸತ್ವಗುಣ"ವನ್ನು ಹೆಚ್ಚಿಸುತ್ತದೆ*ಪಿತ್ತವೆಂಬುದು ದೋಷವೇ?!*ಅಗ್ನಿ ಹಾಗೂ ಪಿತ್ತ ಎರಡರಲ್ಲಿ ವತ್ಯಾಸವೇನು? *ನಮ್ಮ ಈ ಶರೀರ ತ್ರಿಮೂರ್ತಿಮಯವಾಗಿದೆ, ಶರೀರದೊಳಗೆ ಇರುವ ವಾತ ~ ಬ್ರಹ್ಮ; ಪಿತ್ತ ~ ರುದ್ರ; ಕಫ ~ ವಿಷ್ಣು*ವಾತ, ಪಿತ್ತ, ಕಫ - ತ್ರಿಮೂರ್ತಿಗಳು ಎಂದು "ನಾಡೀ ಜ್ಞಾನ ತರಂಗ" ಹಾಗೂ "ಯೋಗರತ್ನಾಕರ" ಎಂಬ ಗ್ರಂಥಗಳಲ್ಲಿ ಉಲ್ಲೇಖಮಾಡಿದ್ದಾರೆ*ಯಾವ ಅಕ್ಕಿ ಊಟಕ್ಕೆ ಶ್ರೇಷ್ಠ?14-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವಾಹನದಲ್ಲಿ ಇಂಧನ, ಅಗ್ನಿ ಮತ್ತು ವಾಯು ಹೇಗೆ ಒಟ್ಟಿಗೆ ಸೇರಿ ಕೆಲಸ ಮಾಡುತ್ತದೆಯೋ ಹಾಗೆ ನಮ್ಮ ದೇಹವನ್ನು ವಾತ, ಪಿತ್ತ ಮತ್ತು ಕಫಗಳು ನಡೆಸುತ್ತವೆ*ದೇಹ ಬಿಸಿ ಇರುವುದು ನಮ್ಮೊಳಗೆ ಅಗ್ನಿ ಇರುವುದಕ್ಕೆ ಸಾಕ್ಷಿ! *ಮಹಾನಾರಾಯಣೋಪನಿಷತ್ತಿನ, ನಾರಾಯಣ ಸೂಕ್ತದಲ್ಲಿ ನಮ್ಮ ದೇಹದ ಅಗ್ನಿಯನ್ನು "ಸಾಕ್ಷಾತ್ ಪರಮಾತ್ಮ" ಎಂದು ನಿರೂಪಣೆ ಮಾಡಲಾಗಿದೆ*ನಾವು ಸೇವಿಸುವ ಆಹಾರವನ್ನು ಮೊದಲು ಸ್ವೀಕರಿಸುವುದು ನಮ್ಮೊಳಗಿನ ಅಗ್ನಿ*ದೇವರ ಕೋಣೆಯಲ್ಲಿ ವ್ಯವಸ್ಥೆ ಸರಿಯಿಲ್ಲದಿದ್ದರೆ ದೇವರ ಉಪಸ್ಥಿತಿ ಇಲ್ಲದಿರಬಹುದು, ಆದರೆ ಪ್ರತಿಯೊಂದು ಜೀವಿಯೊಳಗೆ ಅಗ್ನಿಯ ರೂಪದಲ್ಲಿ ದೇವರು ಖಂಡಿತವಾಗಿ ನೆಲೆಸಿದ್ದಾನೆ!*ನಮ್ಮ ದೇಹದಲ್ಲಿ ಪಿತ್ತದ ಹೊರತಾಗಿ ಬೇರೆ ಅಗ್ನಿ ಇರುವುದೇ?13-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವಾಹನಕ್ಕೆ ಇಂಧನ ಹೇಗೋ, ಹಾಗೆಯೇ ದೇಹಕ್ಕೆ ಆಹಾರ*ದೇಹದಲ್ಲಿರುವ ಮನಸ್ಸು ಮತ್ತು ಅಗ್ನಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ!*ಮೊದಲು ಸರಿ-ತಪ್ಪುಗಳನ್ನು ತಿಳಿದುಕೊಂಡು ಅನಂತರ ಎಷ್ಟು ಸಾಧ್ಯವೋ, ಏನು ಸಾಧ್ಯವೋ ಅದನ್ನು ಪಾಲನೆ ಮಾಡಬೇಕು*ಆಹಾರ ವ್ಯತ್ಯಾಸವಾದರೆ ಮುಕ್ತಿಮಾರ್ಗದಿಂದ ಭ್ರಷ್ಟರಾಗುತ್ತಾರೆ*ದೇಹದಲ್ಲಿರುವ ಅಗ್ನಿಯು ಚೆನ್ನಾಗಿದ್ದರೆ ನಾವೂ ಚೆನ್ನಾಗಿರುತ್ತೇವೆ*ನಮ್ಮ ಅಸ್ತಿತ್ವಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಜಠರಾಗ್ನಿಗೂ ಇದೆ*ನಾವು ವಾಹನಕ್ಕೆ ಇಂಧನ ತುಂಬಿಸುವಾಗ ಎಷ್ಟು ಜಾಗ್ರತೆವಹಿಸುತ್ತೇವೆಯೋ, ನಮ್ಮ ದೇಹಕ್ಕೆ ಆಹಾರವೆಂಬ ಇಂಧನವನ್ನು ಹಾಕುವಾಗ ಏಕೆ ಸ್ವಲ್ಪವೂ ಜಾಗ್ರತೆವಹಿಸುವುದಿಲ್ಲ!?*ದೇಹವೆಂಬ ವಾಹನ ಕೆಟ್ಟರೆ ಇನ್ನೊಂದು ಹೊಸತು ಸಿಗಲಾರದು!12-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಊಟಕ್ಕಿಂತ ಮೊದಲು ಹಸಿಶುಂಠಿ ಮತ್ತು ಸೈಂಧವ ಲವಣವನ್ನು ಸ್ವೀಕರಿಸಿದರೆ ಏನೆಲ್ಲಾ ಪ್ರಯೋಜನಗಳು?!*ಬಾರ್ಲಿ - ತಿನ್ನುವಾಗ ಸ್ವಲ್ಪ ಮಧುರವಾಗಿದ್ದರೂ ಹೊಟ್ಟೆಗೆ ಹೋದಮೇಲೆ ಕಟು!*ಕನಿಷ್ಠ ಒಂದೊಳ್ಳೆಯ ಅಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು*ಪರಮಾತ್ಮನಲ್ಲಿ ಮೈಮರೆತು, ಹಸಿವನ್ನು ಮರೆತರೆ ಅದು ನಿಜವಾದ ಹಾಗೂ ಸಹಜವಾದ ಉಪವಾಸವಾಗುವುದು!*ಉಪವಾಸವನ್ನು ಸರಿಯಾಗಿ ಮಾಡಿದರೆ ಅದು ಬಲವೃದ್ಧಿ ಮಾಡುತ್ತದೆ*ದೇಹದ ಎಷ್ಟೋ ಏರುಪೇರುಗಳು ಊಟದಿಂದ ಸರಿಯಾಗುತ್ತವೆ; ಮತ್ತು ಕೆಲವನ್ನು ಉಪವಾಸದಿಂದ ಸರಿ ಮಾಡಿಕೊಳ್ಳಲು ಸಾಧ್ಯವಿದೆ*ಯಾರೆಲ್ಲಾ ಉಪವಾಸ ಮಾಡಬಾರದು?*ಊಟದಿಂದಲೂ ಸಂಪೂರ್ಣ ಆರೋಗ್ಯವನ್ನು ಪಡೆದುಕೊಳ್ಳಬಹುದು; ಉಪವಾಸದಿಂದಲೂ ಕೂಡಾ ಸಂಪೂರ್ಣ ಆರೋಗ್ಯವನ್ನು ಪಡೆದುಕೊಳ್ಳಬಹುದು*ಉಪವಾಸ ಕೆಟ್ಟರೆ ಏನೆಲ್ಲಾ ಅನಾಹುತಗಳು ಆಗಬಹುದು?*ಊಟವಾಗಲಿ, ಉಪವಾಸವಾಗಲಿ ಜ್ಞಾನ ಪೂರ್ವಕವಾಗಿ ತಿಳಿದುಕೊಂಡು ಮಾಡಬೇಕೇ ಹೊರತು ತಿಳಿಯದೇ ಮಾಡಬಾರದು11-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಾವು ಮೃತರಾದ ಅನಂತರ ನಮ್ಮ ಧಾತುವಿನಲ್ಲಿ ಸೇರಿಕೊಂಡ ಪಾಪವು ನಮ್ಮೊಂದಿಗೆ ಬರುವುದೇ?; ಬರುವುದಿಲ್ಲವೇ?*ಹಸಿವಾಗದಂತೆ ಉಪವಾಸ ಹೇಗೆ ಮಾಡುವುದು?*ಜಠರಾಗ್ನಿಯನ್ನು, ಪ್ರಾಣವನ್ನು ಸರಿಯಾಗಿಟ್ಟುಕೊಂಡರೆ ಅದು ನಾವು ಹೇಳಿದಂತೆ ಕೇಳುತ್ತದೆ*ಮನಸ್ಸು ಕೊರಗಿದಾಗ ಜಠರಾಗ್ನಿಯು ಸೊರಗುತ್ತದೆ!!*ಮನಸ್ಸಿನ ಮೂಲಕವಾಗಿ ಹಸಿವನ್ನು, ಉಪವಾಸವನ್ನು ನಿಯಂತ್ರಿಸಬಹುದು*ನಿರಾಹಾರದ ಉದ್ದೇಶವೇ "ತಮಸೋ ಮಾ ಜ್ಯೋತಿರ್ಗಮಯ"!*ಪೂಜೆ ಅಥವಾ ಅನುಷ್ಠಾನದ ಮೊದಲು ಆಹಾರ ಸೇವಿಸಬಾರದು.., ಏಕೆ?*ಉಪವಾಸವೆಂದರೆ ಶರೀರ ಶೋಷಣೆಯಲ್ಲ; ಉಪವಾಸವೆಂದರೆ ದುರ್ಗುಣಗಳನ್ನು ಬಿಡಬೇಕು; ಸದ್ಗುಣಗಳ ಸಹವಾಸ ಮಾಡಬೇಕು*"Brunch" - ಮಕ್ಕಳನ್ನು ಬಿಟ್ಟು ಎಲ್ಲರೂ ಪಾಲಿಸಬೇಕಾದ ನಿಯಮ*ಉಪವಾಸವನ್ನು ಮಾರ್ಗದರ್ಶನವಿಲ್ಲದೆ ಮಾಡಕೂಡದು!10-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ದೇವರ ನೈವೇದ್ಯಕ್ಕೆ ಸಮರ್ಪಿಸುವ ಆಹಾರದಲ್ಲಿ "ಸಾತ್ವಿಕತೆ" ಮುಖ್ಯ *ಊಟ ಮಾಡದೇ ಇರುವುದು, ಹಸಿವನ್ನು ಕಟ್ಟುವುದು ಉಪವಾಸವಲ್ಲ; ನ್ಯಾಯವಾದ "ಉಪವಾಸ" ಎಂದರೆ ಹಸಿವೇ ಆಗಬಾರದು*ವಾಲ್ಮೀಕಿ ಮಹರ್ಷಿಗಳು, ವಿಶ್ವಾಮಿತ್ರರು ಹಾಗೂ ರಮಣ ಮಹರ್ಷಿಗಳು, ಹಿರಣ್ಯಕಶಿಪು ಎಂತಹ ಉಪವಾಸವನ್ನು ಮಾಡಿದರು!? *ಉಪವಾಸದ ನೇರ ಫಲವೇನೆಂದರೆ 'ಅಗ್ನಿಪ್ರಜ್ವಲನ'; ತನ್ಮೂಲಕ ಸರ್ವದೋಷಗಳ ನಾಶ*ಏಕಾದಶಿಯಂದು ಉಪವಾಸ ಮಾಡುವುದೇಕೆ?*ಏಕಾದಶಿಯಂದು ಹರಿನಾಮ ಸ್ಮರಣೆಯಲ್ಲಿ ಮುಳುಗಬೇಕು*ಉಪವಾಸ ಮಾಡುವ ಸಮಯದಲ್ಲಿ ಊಟಮಾಡಿದರೆ ಮಾತ್ರ ವ್ರತ ಭಂಗವಲ್ಲ; ಹಸಿವೆಯಾದರೂ ವ್ರತ ಭಂಗ09-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಭೋಜನವು ಇಂದ್ರಿಯಗಳು ಹಾಗೂ ಅಂತಃಕರಣದ ತೃಪ್ತಿಗೆ ಕಾರಣವಾಗಬೇಕು*ಊಟಮಾಡಿ ಉದ್ಧಾರವಾಗುವುದು ಹೇಗೆ?!; ಎಂಬುದನ್ನು ನಮ್ಮ ಭಾರತೀಯ ಸಂಸ್ಕೃತಿ ತಿಳಿಸುತ್ತದೆ*ಪಾಪವೇ ಎಲ್ಲಾ ಸಮಸ್ಯೆಗಳಿಗೂ ಮೂಲ*"ತಪಸ್ಸು" ಪಾಪ ಪರಿಹಾರದ ರಾಜ ಮಾರ್ಗ*ಕ್ರಮಬದ್ಧವಲ್ಲದ ಆಹಾರ ಸೇವನೆಯು ಕೂಡಾ ಪಾಪಕ್ಕೆ ಕಾರಣವಾಗಬಹುದು!!*ನಾವು ಸೇವಿಸುವ ಆಹಾರವು ಕಾಲಕ್ಕೆ; ಜೀರ್ಣಕ್ಕೆ; ಪ್ರಕೃತಿಗೆ ಹಿತವಾ?, ಎಂಬುದನ್ನು ತಿಳಿದುಕೊಳ್ಳಬೇಕು*ನಮ್ಮೊಳಗಿರುವ ಜಠರಾಗ್ನಿ ಪ್ರಜ್ವಲಿಸಲು ಅನ್ನ-ಪಾನಗಳೇ ಇಂಧನ; ಇದರಿಂದ ಶರೀರದಲ್ಲಿ ವ್ಯಾಪಿಸಿರುವ ದೋಷ-ರೋಗ-ಪಾಪಗಳು ನಾಶವಾಗುತ್ತದೆ*ಜಠರವೈಶ್ವಾನರನು ಪ್ರಜ್ವಲಿತನಾದಾಗಹುಲ್ಲುಮೆದೆಗಳ ಸುಡುವ ಕಾಡ್ಗಿಚ್ಚಿನಂತೆ ದೇಹಗತ ದೋಷಗಳ, ಜೀವಗತ ಪಾಪಗಳದಹಿಸುವನು ಲೇಶವೀ ಶೇಷವಿರದಂತೆಸೂತ್ರದೊಳಗೊಳಪಟ್ಟ ಬದುಕ ನೀ ನಡೆಸುತಿರೆ ಹರಡಿ ಮೈಯೊಳು ಬಿಸಿಯ ಜ್ವಲಿಸೆ ಕಾಯಾಗ್ನಿ ಕೋಟಿ ಜನ್ಮದ ಗಾಢನಿದ್ದೆಯನು ತೊರೆದೆದ್ದು ಸಾಗುವಳು ಪರಮಪದದೆಡೆಗೆ ಕುಂಡಲಿನಿ-ಶ್ರೀಕಾವ್ಯ08-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಅಡುಗೆ ಮನೆಯಲ್ಲಿ ಮಾಡುವುದು ಕೇವಲ ಸಿದ್ಧತೆ ಅಷ್ಟೇ; ಹೊಟ್ಟೆಯೊಳಗೆ ನಿಜವಾದ ಪಾಕವಾಗುತ್ತದೆ*ಕುಲಾಂತರಿ ಗೋಧಿಯಿಂದ ಆಪತ್ತು; ಗೋಧಿ ಮೂಲ ಸ್ವರೂಪವನ್ನು ಕಳೆದುಕೊಂಡಿದೆ*ಶರೀರವೇ ಯಾಗಶಾಲೆ; ಜಠರಾಗ್ನಿಯೇ ಯಜ್ಞದ ಅಗ್ನಿ; ನಾವೇನು ಊಟ ಮಾಡುತ್ತೇವೆಯೋ ಅದುವೇ ಹವಿಸ್ಸು; ಒಟ್ಟಾರೆಯಾಗಿ "ಭೋಜನವೇ ಯಜ್ಞ"!*ಹಗಲೊಮ್ಮೆ, ಸಂಜೆಯೊಮ್ಮೆ ಮಾತ್ರ ಊಟ ಮಾಡಬೇಕು; ಇದು ಅಗ್ನಿಹೋತ್ರಕ್ಕೆ ಸಮಾನವಾಗಿರುವಂತಹದ್ದು! *ಚರಕ ಸಂಹಿತೆಯ ಪ್ರಕಾರ ಸರಿಯಾಗಿ ಮಾಡಿದ ಊಟಕ್ಕೆ ಅಗ್ನಿಹೋತ್ರದ ಫಲ!*ಶುದ್ಧವಾದ ಭೋಜನಕ್ಕೆ ವೇದೋಪನಿಷತ್ತುಗಳು ಯಾವೆಲ್ಲಾ ಫಲಗಳನ್ನು ಹೇಳಿವೆ?*ಯಾರು ಊಟವನ್ನು ವಿಧಿಬದ್ಧವಾಗಿ, ಕಾಲ ಮತ್ತು ಪ್ರಮಾಣ ಬದ್ಧವಾಗಿ ಮಾಡುತ್ತಾನೋ ಅವನ ಪಾಪಗಳು ಕಳೆದುಹೋಗುತ್ತದೆ*ಗೃಹಸ್ಥನಾಗಲಿ, ಬ್ರಹ್ಮಚಾರಿಯಾಗಲಿ ಊಟ ಮಾಡದೇ ಇದ್ದರೆ ಪಾಪ ಬರುತ್ತದೆ!07-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.